ಬಿಜೆಪಿಯವರು ದೇಶವನ್ನು ಒಡೆದು ಎರಡು ಭಾಗ ಮಾಡಲು ಹೊರಟಿದ್ದಾರೆ- ಶರತ್ ಬಚ್ಚೇಗೌಡ

ದೇವನಹಳ್ಳಿ: ಪಹಲ್ಗಾಮ್ ನಲ್ಲಿ ಹಿಂದುಗಳ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ , ಪ್ರಚೋದನೆ ಮಾತುಗಳನ್ನ ಕೇಳಿ ಕೇಳಿ ಸಾಕಾಗಿದೆ. ಬ್ರಿಟೀಷರು ಸ್ವತಂತ್ರ ನೀಡುವ ವೇಳೆ ಎರಡು ಕಂಟ್ರಿ ಫಾರ್ಮುಲ ಬಳಸಿ ದೇಶನ ಒಡೆದಿದ್ದಾರೆ. ಬ್ರಿಟೀಷರು

ಈಗ ಮತ್ತೊಮ್ಮೆ ಅವರ ಸಂತತಿ ಏನಿದರೆ ಅವರ ಕೇಂದ್ರದಲ್ಲಿ ಈಗ ಮತ್ತೊಮ್ಮೆ ದೇಶ ಒಡೆದು ಎರಡು ಭಾಗ ಮಾಡಲು ಹೋಗಿದ್ದಾರೆ. ಪಹಲ್ಗಾಮ್ ನಲ್ಲಿ ನಡೆದ ದಾಳಿಗೂ ಇಲ್ಲಿರುವ ಜನಗಳಿಗೆ ಏನು ಸಂಬಂಧ.

ಇದನ್ನೂ ಓದಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ: ಸಿಪಿಎಂ ಖಂಡನಾ ಸಭೆ, ಶ್ರದ್ಧಾಂಜಲಿ

ಕೇಂದ್ರ ಸರ್ಕಾರದ ಇಂಟಲಿಜೆನ್ಸಿ ಸಂಪೂರ್ಣ ವಿಫಲವಾಗಿದೆ. ಪಾಕಿಸ್ತಾನದ ಡಿಫೆನ್ಸ್ ಮಿನಿಸ್ಟರ್ ಹೇಳ್ತಾರೆ, ಭಾರತೀಯರು ಅಲ್ಲ, ಹಿಂದುಗಳೇ ನಮ್ಮ ವಿರೋಧಿಗಳು ಅಂತಾರೆ. ಸ್ಟೇಟ್ಮೆಂಟ್ ಕೊಟ್ಟ ಎರಡು ವಾರಗಳಲ್ಲಿ ಈ ದಾಳಿ ನಡೆದಿದೆ.

ಜಾತಿ, ಧರ್ಮನ ಕೇಳಿ ಉಗ್ರರು ದಾಳಿ ಮಾಡಿದ್ದಾರೆ. ಪಾಕಿಸ್ತಾನಕ್ಕೆ ಈಗ ಯುದ್ಧ ಬೇಕಾಗಿದೆ. ಈ ಹಿಂದೆ ನೋಡಿದರೆ ಕಾಶ್ಮೀರದಲ್ಲಿ ಪೊಲೀಸ್ ಮತ್ತು ಸೈನಿಕರನ್ನ ಹೊಡೆಯೋದನ್ನ ನೋಡಿದ್ದೇವೆ. ಅಮಾಯಕ ಸಾರ್ವಜನಿಕ ಮೇಲೆ ದಾಳಿ ನಡೆಸಿ ಸಾರ್ವಜನಿಕರನ್ನ ಕೆರಳಿಸುವ ಉದ್ದೇಶವಿದೆ.

ಈ ಘಟನೆ ಕುರಿತು ಒಂದು ತಿಂಗಳ ಹಿಂದೆ ಕೇಂದ್ರಕ್ಕೆ ಮಾಹಿತಿ ಇರಬೇಕಿತ್ತು. ದೇಶದಲ್ಲಿ ಸಂಪೂರ್ಣ ಗುಪ್ತಚಾರ ಇಲಾಖೆ ವೈಫಲ್ಯವಾಗಿದೆ.ಇಂತಹ ಸಂದರ್ಭದಲ್ಲಿ ದೇಶ ಎಲ್ಲಾ ಜನತೆ ಒಗ್ಗಟ್ಟಾಗಿ ಇರಬೇಕು ಎಂದರು.

ಇದನ್ನೂ ನೋಡಿ: ಶಾಂತಿ ಸ್ಥಾಪಿಸುವ ಬದಲು ಪ್ರಚೋದಿಸುತ್ತಿರುವ ಗೋಧಿ ಮೀಡಿಯಾ ಬಗ್ಗೆ ಕಾಶ್ಮೀರಿ ಜನರ ಆಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *