ನವದೆಹಲಿ: ಪ್ರಧಾನಿ ಮೋದಿಯ ದ್ವೇಷದ ಭಾಷಣವನ್ನು ಖಂಡಿಸಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕನನ್ನು ಬಿಜೆಪಿ ಉಚ್ಛಾಟಿಸಿದೆ.
ರಾಜಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಇಸ್ಲಾಮೋಫೋಬಿಕ್ ಹೇಳಿಕೆಗಳಿಗೆ ನಿರಾಸೆ ವ್ಯಕ್ತಪಡಿಸಿರುವ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕ ಉಸ್ಮಾನ್ ಘನಿಯನ್ನು ಪಕ್ಷದ ಸ್ಥಾನದಿಂದ ತೆಗೆದುಹಾಕಲಾಗಿದೆ.ಘನಿ, ರಾಜಸ್ಥಾನದ ಬಿಕಾನೇರ್ನಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿದ್ದರು.
ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಭಾರತದಲ್ಲಿನ ಮುಸ್ಲಿಂ ಅಲ್ಪಸಂಖ್ಯಾತರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಹೇಳಿದ್ದರು.ಪ್ರಧಾನಿ ಮೋದಿಯವರ ದ್ವೇಷದ ಭಾಷಣವನ್ನು ಘನಿ ಖಂಡಿಸಿ ಮುಸ್ಲಿಂನಾಗಿರುವ ನಾನು ಪ್ರಧಾನಿ ಹೇಳಿದ ಮಾತಿನಿಂದ ನಿರಾಶೆಗೊಂಡಿರುವುದಾಗಿ ಹೇಳಿದ್ದರು.
ಇದನ್ನು ಓದಿ : 3454 ಕೋಟಿ ರೂ. ಬರ ಪರಿಹಾರ: ರಾಜ್ಯಕ್ಕೆ ಸಂದ ಜಯ- ಈಶ್ವರ ಖಂಡ್ರೆ
ರಾಜಸ್ಥಾನದ 25 ಸ್ಥಾನಗಳ ಪೈಕಿ ಬಿಜೆಪಿ ಮೂರು-ನಾಲ್ಕು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಘನಿ ಹೇಳಿದ್ದರು.ಬಿಜೆಪಿಗೆ ಮತ ಕೇಳಲು ಮುಸ್ಲಿಮರ ಬಳಿಗೆ ಹೋದಾಗ, ಸಮುದಾಯದ ಜನರು, ಪ್ರಧಾನಿ ಮಾಡಿದ ಹೇಳಿಕೆಗಳ ಬಗ್ಗೆ ಕೇಳುತ್ತಾರೆ.ಉತ್ತರ ನೀಡುವಂತೆ ಹೇಳುತ್ತಾರೆ ಎಂದು ಘನಿ ಆರೋಪಿಸಿದ್ದರು.
ಘನಿ ಪ್ರಕಾರ, ಜಾಟ್ ಸಮುದಾಯ ಕೂಡ ರಾಜ್ಯದಲ್ಲಿ ಬಿಜೆಪಿಯ ಬಗ್ಗೆ ಅತೃಪ್ತಿ ಹೊಂದಿದ್ದು, ಜಾಟ್ ಸಮುದಾಯ ಚುರು ಮತ್ತು ಇತರ ಕ್ಷೇತ್ರಗಳಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ್ದಾರೆ.ಇದರ ವಿರುದ್ಧ ಬಿಜೆಪಿ ಪಕ್ಷ ಯಾವುದೇ ಕ್ರಮ ಕೈಗೊಂಡರೂ ಹೆದರುವುದಿಲ್ಲ ಎಂದು ಘನಿ ಸುದ್ದಿವಾಹಿನಿಯೊಂದಕ್ಕೆ ಮಾತನಾಡಿರುವ ವಿಡೀಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡಿದ ಬಳಿಕ ಘನಿ ವಿರುದ್ಧ ಬಿಜೆಪಿ ಕ್ರಮಕೈಗೊಂಡಿದೆ.
ಮಾಧ್ಯಮಗಳಲ್ಲಿ ಪಕ್ಷದ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಉಸ್ಮಾನ್ ಘನಿ ಅವರಿಂದ ನಡೆದಿದೆ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಓಂಕಾರ್ ಸಿಂಗ್ ಲಖಾವತ್ ಹೇಳಿದ್ದಾರೆ.ಘನಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.
ಇದನ್ನು ನೋಡಿ : ಮೋದಿಯವರ ‘ಮುಸ್ಲಿಂ, ಮೊಘಲ್, ಮಟನ್’ ಎನ್ನುವ ಅಪಾಯಕಾರಿ ಸಿದ್ಧಾಂತ. Janashakthi Media