ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರ ಕಡೆಗಣಿಸಲಾಗಿದೆ – ಸುನೀಲ್ ಕುಮಾರ್ ಬಜಾಲ್

ಮಂಗಳೂರು: ಭಾರತ ದೇಶದಲ್ಲಿಂದು ನಿರುದ್ಯೋಗದ ಪ್ರಮಾಣ ವಿಪರೀತವಾಗಿ ಏರಿಕೆಯಾಗಿದೆ. ಬಡತನ, ಹಸಿವು, ಅಸ್ಪ್ರಶ್ಯತೆ, ಮತೀಯವಾದದ ಸಾಗಿರುವಂತಹ ಭಾರತವನ್ನು ಭಗತ್ ಸಿಂಗ್ ಬಯಸಿರಲಿಲ್ಲ. ಕೇಂದ್ರದಲ್ಲಿ ಆಳುವ ಬಿಜೆಪಿ ನೇತೃತ್ವದ ಭಾರತದಲ್ಲಿ ಯುವಜನರ ಆಶೋತ್ತರಗಳನ್ನು ಕಡೆಗಣಿಸಲಾಗಿದೆ ಎಂದು ಡಿವೈಎಫ್ಐ ಮಾಜಿ ರಾಜ್ಯಾಧ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ. ಬಿಜೆಪಿ

ಮಾರ್ಚ್‌ 23 ರಂದು ಡಿವೈಎಫ್ಐ ಮಂಗಳೂರು ದ.ಕ ಜಿಲ್ಲಾ ಸಮಿತಿ ಭಗತ್ ಸಿಂಗರ ಹುತಾತ್ಮ ದಿನದ ಅಂಗವಾಗಿ ನಿರುದ್ಯೋಗದ ವಿರುದ್ಧ ಸೌಹಾರ್ದ ಭಾರತಕ್ಕಾಗಿ ನಗರದ ಜಿಲ್ಲಾ ಪಂಚಾಯತ್ ಕಚೇರಿಯಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ನಡೆದ ಭಗತ್ ಸಿಂಗ್ ಹುತಾತ್ಮ ಜ್ಯೋತಿ ಮೆರವಣೆಗೆಯನ್ನು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ

ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಮಾತನಾಡುತ್ತಾ ಇವತ್ತಿನ ಶಿಕ್ಷಣ ಸಂಸ್ಥೆಗಳು ನಿರುದ್ಯೋಗಿ ಯುವಜನರನ್ನು ಸೃಷ್ಟಿಸುವ ಕಾರ್ಖಾನೆಯಾಗಿದೆ. ಶಿಕ್ಷಣ ಪಡೆದು ಹೊರ ಬರುತ್ತಿರುವ ಯುವಜನರಿಗೆ ಉದ್ಯೋಗವಿಲ್ಲ.

ಇದನ್ನೂ ಓದಿ: ವಿದ್ಯುತ್ ಗ್ರಾಹಕರ ಸುಲಿಗೆ! ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು!! – ಸಿಪಿಐ(ಎಂ)

ಇರುವ ಉದ್ಯೋಗಳಿಗೆ ಭದ್ರತೆಯಿಲ್ಲ ಸಣ್ಣ ಪುಟ್ಟ ಅಂಗಡಿ ಮುಂಗಟ್ಟುಗಳಲ್ಲಿ ಕಡಿಮೆ ಆದಾಯಕ್ಕೆ ದುಡಿಯುತ್ತಿರುವ ಕಾರ್ಮಿಕರಿಗೆ ಕನಿಷ್ಟ ವೇತನವೂ ಇಲ್ಲ ಈ ಬಗ್ಗೆ ಒಬ್ಬನೇ ಒಬ್ಬ ಶಾಸಕ ವಿಧಾನಸೌದದೊಳಗೆ ಧ್ವನಿ ಎತ್ತುತ್ತಿಲ್ಲ .ಅದೇ ಶಾಸಕರೆಲ್ಲ ತಮ್ಮ ಸಂಬಳ ಹೆಚ್ಚಳಗೊಳಿಸಿ ಅವರ ಬದುಕನ್ನಷ್ಟೇ ಭದ್ರಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ಇಂದಿನ ಯುವತಲೆಮಾರಿಗೆ ಭಗತ್ ಸಿಂಗರ ಹೋರಾಟದ ಆಶಯಗಳನ್ನು ತಿಳಿಸುವ ಮತ್ತು ಅವರ ಕನಸಿನ ಭಾರತವನ್ನು ಕಟ್ಟುವ ಇತಿಹಾಸಗಳ ಕುರಿತು ತಿಳಿಸಬೇಕಾಗಿದೆ. ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧದ ಹೋರಾಟಗಳಿಗೆ ಅಣಿನೇರಿಸಬೇಕಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ನವೀನ್ ಕೊಂಚಾಡಿ, ನಿತಿನ್ ಕುತ್ತಾರ್, ಪುನೀತ್ ಉರ್ವಸ್ಟೋರ್, ಮಾದುರಿ ಬೋಳಾರ ಉಪಸ್ಥಿತರಿದ್ದರು.

ಈ ವೇಳೆ ಡಿವೈಎಫ್ಐ ಜಿಲ್ಲಾ ಮುಖಂಡರಾದ ಜಗದೀಶ್ ಬಜಾಲ್, ರಿಜ್ವಾನ್ ಹರೇಕಳ,‌ ರಾಜೇಶ್ ಉರ್ವಸ್ಟೋರ್, ಮನೋಜ್ ಉರ್ವಸ್ಟೋರ್, ಪ್ರದೀಪ್, ಧಿರಾಜ್ ಬಜಾಲ್, ಪ್ರಕಾಶ್ ಶೆಟ್ಟಿ ಬಜಾಲ್, ಭಾರತೀ ಬೋಳಾರ, ದಯಾನಂದ ಶೆಟ್ಟಿ, ಇಕ್ಬಾಲ್ ಉರ್ವಸ್ಟೋರ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ನೋಡಿ: Karnataka Legislative Assembly Live Day 14 | ವಿಧಾನಸಭೆ ಬಜೆಟ್ ಅಧಿವೇಶನದ ನೇರ ಪ್ರಸಾರ ದಿನ 14

Donate Janashakthi Media

Leave a Reply

Your email address will not be published. Required fields are marked *