ಹುಬ್ಬಳ್ಳಿ: ಗದಗನಲ್ಲಿನ ಕಪ್ಪತಗುಡ್ಡದ ಸುತ್ತಮುತ್ತಲ ಸುಮಾರು 423.6 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿ ಕೇಂದ್ರ ಪರಿಸರ ಇಲಾಖೆ ಅಧಿಸೂಚನೆ ಹೊರಡಿಸಿದ್ದನ್ನು ನೈಸರ್ಗಿಕ ಸಂಪತ್ತ ರಕ್ಷಣೆಯ ರಾಷ್ಟ್ರೀಯ ಕಮಿಟಿ ಹಾಗೂ ಸಮಾಜ ಪರಿವರ್ತನಾ ಸಮುದಾಯ ಸ್ವಾಗತಿಸಿದೆ ಎಂದು ಜೂನ್ 21 ಶನಿವಾರದಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಸೆರಗಿನಂತಿರುವ ಹಾಗೂ ಆಕ್ಸಿಜನ್ ಬ್ಯಾಂಕ್ ಎಂದೇ ಖ್ಯಾತಿ ಪಡೆದ ಕಪ್ಪತಗುಡ್ಡದಲ್ಲಿ 500ಕ್ಕೂ ಹೆಚ್ಚು ಔಷಧೀಯ ಸಸ್ಯಗಳು ಇದ್ದು ಯಾವ ಕಾರಣಕ್ಕೂ ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದರು.
ಇದನ್ನೂ ಓದಿ: 11 ಆಶಾ ಕಿರಣ ದೃಷ್ಟಿ ಕೇಂದ್ರಗಳ ಸ್ಥಾಪನೆ: ರಾಹುಲ್ ತುಕಾರಾಮ್ ಪಾಂಡ್ವೆ
ಕೇವಲ ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದರೆ ಸಾಲದು, ಅಲ್ಲಿ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಗಣಿ ಕಂಪೆನಿಯೊಂದು ಚಿನ್ನದ ಗಣಿಗಾರಿಕೆಗೆ ಹೊಂಚು ಹಾಕಿ ರೈತರ ಭೂಮಿ ಪಡೆದುಕೊಂಡಿದ್ದು, ಆ ಭೂಮಿಯನ್ನು ರೈತರಿಗೆ ಮರಳಿ ನೀಡಬೇಕು ಎಂದರು.
ಕೇಂದ್ರದ ಅಧಿಸೂಚನೆ ಹಿನ್ನೆಲೆಯಲ್ಲಿ ಶೀಘ್ರವೇ ತೋಂಟದಾರ್ಯ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಇದನ್ನೂ ನೋಡಿ: ಹಲ್ಮಿಡಿ ಶಾಸನದಿಂದ ಬೂಕರ್‌ವರೆಗೆ ಹಾಸನದ ಕೊಡುಗೆ: ಬರಗೂರುJanashakthi Media
