ಬೆಂಗಳೂರು: ಕಳೆದ ಭಾನುವಾರದಂದು ಶಿವಮೊಗ್ಗ ನಗರದ ರಾಗಿಗುಡ್ಡ ಹಾಗೂ ಶಾಂತಿ ನಗರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಮತಾಂಧ ದುಷ್ಕರ್ಮಿಗಳು ಕಲ್ಲ ತೂರಾಟ ನಡೆಸಿ ಸೌಹಾರ್ದತೆಗೆ ಭಂಗ ಉಂಟು ಮಾಡಿರುವ ದುರ್ನಡೆಯನ್ನು ಸಿಪಿಐಎಂ ಪಕ್ಷ ಬಲವಾಗಿ ಖಂಡಿಸುತ್ತದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ.ಮೆರವಣಿಗೆ
ಇದನ್ನೂ ಓದಿ:ಶಿವಮೊಗ್ಗ: ಮೂರು ಪ್ರತ್ಯೇಕ ಘಟನೆ-ಭಯದ ವಾತಾವರಣ ನಿರ್ಮಿಸಲು ಯತ್ನ– ಯುವಕನ ಮೇಲೆ ಹಲ್ಲೆ
ಅದೇ ರೀತಿ, ತಮ್ಮ ಸಂಕುಚಿತ ರಾಜಕೀಯ ಲಾಭಕ್ಕಾಗಿ ಸದರಿ ದುರ್ಘಟನೆಯನ್ನು ಬಳಸಿಕೊಂಡು ಕೋಮು ಗಲಭೆಗಳನ್ನು ರಾಜ್ಯಕ್ಕೆ ವಿಸ್ಥರಿಸುವ ಕೆಲಸದಲ್ಲಿ ತೊಡಗಿರುವ ಕೋಮುವಾದಿ ಶಕ್ತಿಗಳ ಮುಂದುವರೆದ ದುಷ್ಕೃತ್ಯವನ್ನು ಸಿಪಿಐಎಂ ಬಲವಾಗಿ ಖಂಡಿಸುತ್ತದೆ. ಕೆಲ ಮಾದ್ಯಮಗಳ ಪತ್ರಕರ್ತರು ಎಲೆಕ್ಟ್ರಾನಿಕ್ ಮಾದ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ಈ ದುಷ್ಕೃತ್ಯದಲ್ಲಿ ತೊಡಗಿಕೊಂಡಿರುವುದು ಖಂಡನಾರ್ಹವಾಗಿದೆ.
ಶಿವಮೊಗ್ಗ ನಗರವೂ ಸೇರಿದಂತೆ, ರಾಜ್ಯದಾದ್ಯಂತ ಸೌಹಾರ್ಧತೆಯನ್ನು ಕಾಪಾಡಿಕೊಳ್ಳುವಂತೆ ರಾಜ್ಯದ ಎಲ್ಲ ನಾಗರೀಕರಲ್ಲಿ ಸಿಪಿಐಎಂ ಮನವಿ ಮಾಡುತ್ತದೆ. ಶಿವಮೊಗ್ಗದ ಈ ಘಟನೆಯನ್ನು ಗುರುತಿಸಿ ಪೂರ್ವ ಭಾವಿಯಾಗಿ ನಿಯಂತ್ರಿಸುವಲ್ಲಿ ಪೋಲೀಸ್ ಇಲಾಖೆ ಬಿಗಿ ಕ್ರಮವಹಿಸಿದ್ದರೂ, ಶಿವಮೊಗ್ಗದ ಸೌಹಾರ್ದ ಪ್ರಿಯ ಹಾಗೂ ಎರಡು ಧರ್ಮಗಳ ನಾಗರೀಕರನ್ನು ಬಳಸಿಕೊಂಡು ಶಾಂತಿ ಸೌಹಾರ್ದತಾ ಸಭೆಗಳನ್ನು ಸಂಘಟಿಸಿ, ಅಹಿತರ ಘಟನೆಗಳು ನಡೆಯದಂತೆ ತಡೆದಿರುವುದು ಶ್ಲಾಘನೀಯವಾಗಿದ್ದರೂ, ಈ ದುರ್ಘಟನೆ ಘಟಿಸಿರುವುದು ಗುಪ್ರಚರ ಇಲಾಖೆಯು ವಿಫಲವಾಗಿರುವುದನ್ನು ಇದು ಬಯಲುಗೊಳಿಸುತ್ತದೆ. ಪೋಲೀಸ್ ಇಲಾಖೆ ಮತ್ತಷ್ಠು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಅಗತ್ಯವನ್ನು ಇದು ತಿಳಿಸುತ್ತದೆ ಎಂದರು.
ಇದನ್ನೂ ಓದಿ:ಕೋಮು ಗಲಭೆಗಳಲ್ಲಿ ಅಮಾಯಕರ ಮೇಲಿನ ಕೇಸ್ ವಾಪಸ್‌ಗೆ ಶಿಫಾರಸು: ಬಿಜೆಪಿ ಕಿಡಿ
ಒಟ್ಟಾರೆ, ಇದರ ಒಳ ಹೊಕ್ಕು ನೋಡುವಾಗ ಮುಸ್ಲಿಂ ಅಲ್ಪ ಸಂಖ್ಯಾತರ ಮೇಲೆ ಗೂಬೆ ಕೂರಿಸುವ ಯೋಜಿತ ದುಷ್ಕೃತ್ಯದಂತೆ ಈ ದುರ್ಘಟನೆ ಕಂಡು ಬರುತ್ತದೆ ಕೋಮುವಾದಿ ಶಕ್ತಿಗಳು ಇಂತಹದ್ದೆಲ್ಲಾ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿರುವುದು ಅದಾಗಲೇ ರಾಜ್ಯದ ಅನುಭವವಾಗಿದ್ದರೂ, ಕಾನೂನು ಬಾಹಿರವಾಗಿ, ದಿನಗಟ್ಟಲೆ ರಸ್ತೆಗಳನ್ನು ಜಾಮ್ ಮಾಡಿ, ಗಣೇಶ ಹಾಗೂ ಮಿಲಾದ್ ಮುಂತಾದ ಮೆರವಣಿಗೆಗಳಿಗೆ ಅವಕಾಶ ನೀಡುವ, ಪ್ರಚೋದನ ಕಾರಿ ಬರಹ ಗಳು, ಪೋಸ್ಟರ್ಸಗಳು ಮತ್ತು ಕಟೌಟ್ಗಳಿಗೆ ಅನುವು ಮಾಡುವ ಜಿಲ್ಲಾ ಆಡಳಿತ ಹಾಗೂ ಪೋಲೀಸ್ ಇಲಾಖೆಯ ಕ್ರಮಗಳು ಆಕ್ಷೇಪಾರ್ಹವಾದವುಗಳಾಗಿವೆ. ದೇವರುಗಳ ಹೆಸರಿನಲ್ಲಿ ಇಂತಹ ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಂಡು, ಅಮಾಯಕರ ಆಸ್ತಿ, ಪಾಸ್ತಿ ಹಾಗೂ ಜೀವ ಹಾನಿಗೆ ಅವಕಾಶವಾಗದಂತೆ ಕಠಿಣ ಕ್ರಮವಹಿಸುವುದು ರಾಜ್ಯ ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ಸಿಪಿಐಎಂ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಸೌಹಾರ್ದತೆಗೆ ಭಂಗ ಉಂಟು ಮಾಡಿದ ಒಟ್ಟು ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಹಾಗೂ ಆ ಮೂಲಕ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸಬೇಕು ಮತ್ತು ಕೋಮು ಗಲಭೆಗೆ ಪ್ರಚೋದನಾ ಕಾರಿ ಹೇಳಿಕೆ ನೀಡುವವರನ್ನು ಈ ಕೂಡಲೇ ಬಂಧಿಸಬೇಕು ಎಂದು ಸಿಪಿಐಎಂ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ವಿಡಿಯೋ ನೋಡಿ:“ಬಿಜೆಪಿ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ”ಅಕ್ಟೋಬರ್ 5ರಂದು ಮಹಿಳೆಯರ ‘ಮಹಾ ಧರಣಿ’ Janashakthi Media