ಹೊಸದಿಲ್ಲಿ | ಶಿಕ್ಷಕರಾಗಿ ಮುಂದುವರೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕಡ್ಡಾಯ ಸುಪ್ರೀಂ ಕೋರ್ಟ್‌ ಆದೇಶ

ಹೊಸದಿಲ್ಲಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಶಿಕ್ಷಕರಾಗಿ ನೇಮಕಗೊಳ್ಳಲು ಮತ್ತು ಸೇವೆಯಲ್ಲಿರುವ ಶಿಕ್ಷಕರು ಬಡ್ತಿ ಪಡೆಯಲು  ಕಡ್ಡಾಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರು ಸೇವೆಯಲ್ಲಿರುವ ಶಿಕ್ಷಕರಿಗೆ ದೊಡ್ಡ ಶಾಕ್‌ ನೀಡಿದೆ.    ಹೊಸದಿಲ್ಲಿ

ಮುಂದಿನ ಎರಡು ವರ್ಷಗಳಲ್ಲಿ  ಟಿಇಟಿ ಅರ್ಹತೆ ಪಡೆಯಬೇಕು ಮುಂದಿನ ಐದು ವರ್ಷಗಳಿಗಿಂತ ಅಧಿಕ ಕಾಲ ಸೇವೆಯಲ್ಲಿ ಮುಂದುವರಿಯಲು ಬಯಸುವವರು ಇಲ್ಲದಿದ್ದರೆ ರಾಜೀನಾಮೆ ನೀಡಬಹುದು ಅಥವಾ ಅಂತಿಮ ಪ್ರಯೋಜನಗಳೊಂದಿಗೆ ಕಡ್ಡಾಯ ನಿವೃತ್ತಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ದೀಪಂಕರ್‌ ದತ್ತಾ ಮತ್ತು ಆಗಸ್ಟಿನ್‌ ಜಾರ್ಜ್‌ ಮಸಿಹ್‌ ಅವರಿದ್ದ ಪೀಠ ತಿಳಿಸಿದೆ. ಹೊಸದಿಲ್ಲಿ

ಇದನ್ನೂ ಓದಿ: ಮಹಿಳೆಯರ ಬಗ್ಗೆ ಹಗುರವಾದ ಮಾತು – ಕ್ಷಮೆ ಕೇಳಲು ಸಿಪಿಐಎಂ ಆಗ್ರಹ

ನಿವೃತ್ತರಾಗಲು ಕೇವಲ ಐದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಇದ್ದರೆ ಅವರು ಟಿಇಟಿ ಅರ್ಹತೆ ಪಡೆಯಬೇಕಾಗಿಲ್ಲ. ಆದರೆ, ಅವರು ಬಡ್ತಿಗೆ ಅರ್ಹರಾಗಿರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಹೊಸದಿಲ್ಲಿ

ಬೋಧನಾ ಸೇವೆಗೆ ಟಿಇಟಿ ಕಡ್ಡಾಯವೇ ಎಂಬ ಬಗ್ಗೆ ತಮಿಳುನಾಡು ಮತ್ತು ಮಹಾರಾಷ್ಟ್ರ ಸರಕಾರಗಳು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಈ ರೀತಿಯಾಗಿ ಹೇಳಿದೆ. ಇದಲ್ಲದೆ, ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಸರ್ಕಾರಗಳು ವಿಶೇಷ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಯೋಚಿಸುತ್ತಿವೆ ಎನ್ನಲಾಗಿದೆ. ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ.

ಟಿಇಟಿ ಎಂಬುದು ಒಂದು ಅರ್ಹತಾ ಪರೀಕ್ಷೆ. ಇದು ದೇಶಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಡ್ಡಾಯ. 1 ರಿಂದ 8 ನೇ ತರಗತಿವರೆಗೆ ಬೋಧಿಸುವ ಶಿಕ್ಷಕರಿಗೆ ಇದು ಮುಖ್ಯ. ಇದು ಸರ್ಕಾರಿ ಮತ್ತು ಕೆಲವು ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ. ಶಿಕ್ಷಕರ ಸಂಘಗಳು, “TET ಅನ್ನು ಹೊಸ ನೇಮಕಾತಿಗಳಿಗೆ ಮಾತ್ರ ಅನ್ವಯಿಸಬೇಕು” ಎಂದು ಒತ್ತಾಯಿಸಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ, “TET ಎಂಬುದು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಡ್ಡಾಯ ಪರೀಕ್ಷೆ”. ಇದು 1 ರಿಂದ 8 ನೇ ತರಗತಿವರೆಗೆ ಬೋಧಿಸುವ ಶಿಕ್ಷಕರಿಗೆ ಮುಖ್ಯ.

ಇದನ್ನೂ ನೋಡಿ: ಏನ್‌ ಸರ್‌ (SIR) ಇದು! ಮತದಾನದ ಹಕ್ಕಿಗೆ ಯಾಕೆ ಕೊಕ್ಕೆ? ವಿಶ್ಲೇಷಣೆ – ಗುರುರಾಜ ದೇಸಾಯಿ Janashakthi Media

 

Donate Janashakthi Media

Leave a Reply

Your email address will not be published. Required fields are marked *