ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಬೇಕು;ಪ್ರಧಾನಿಗೆ ಪತ್ರ ಬರೆದ ಮೊಹಮ್ಮದ್ ಸಾಕೀಬ್

ಸಾಗರ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯಿಂದ ನನ್ನ ಸಹೋದರರ ಸಾವಿನಿಂದ ನನಗೆ ತೀವ್ರ ದುಃಖವಾಗಿದೆ. ಈ ಕೃತ್ಯ ಅಮಾನವೀಯವಾಗಿದ್ದು, ಅಪರಾಧಿಗಳನ್ನು ಆದಷ್ಟು ಬೇಗ ಹಿಡಿದು ಶಿಕ್ಷಿಸುವಂತೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ನಿವಾಸಿಯಾದ  ಸಾಮಾಜಿಕ ಕಾರ್ಯಕರ್ತ, ಚಿಂತಕ ಮೊಹಮ್ಮದ್ ಸಾಕೀಬ್ ಗುರ್ಕರ್ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬೇರು

ಸಾಮಾಜಿಕ ಕಾರ್ಯಕರ್ತ, ಚಿಂತಕ ಮೊಹಮ್ಮದ್ ಸಾಕೀಬ್ ಗುರ್ಕರ್ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆಯುವ ಮೂಲಕ ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಬೇಕು ಎಂದು ತಿಳಿಸಿದ್ದಾರೆ.

ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಭಯೋತ್ಪಾದಕರ ಈ ದಾಳಿಯನ್ನು ದೇಶದ ಎಲ್ಲಾ ಮುಸ್ಲಿಮರು ಖಂಡಿಸುತ್ತಾರೆ. ಮತ್ತು ನ್ಯಾಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ.

ಇದನ್ನೂ ಓದಿ: ಭದ್ರತೆ ವಿಚಾರದಲ್ಲಿ ಜನರಿಗೆ ಕೇಂದ್ರ ಸರ್ಕಾರ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ

ಈ ಹೇಯ ಕೃತ್ಯವನ್ನು ನಿಲ್ಲಿಸಲು ಮತ್ತು ಅಂತಹವರನ್ನು ಶಿಕ್ಷಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯುವಕರು ನಮ್ಮ ದೇಶಕ್ಕಾಗಿ ಯಾವುದೇ ಸಹಾಯ ಮಾಡಲು ಮತ್ತು ಪ್ರಾಣ ತ್ಯಾಗಕ್ಕಾದರೂ ನಾವು ಸಿದ್ಧರಿದ್ದೇವೆ ಎಂದರು.

ನಾವು ಹೆಮ್ಮೆಯ ಭಾರತೀಯರು, ನಮ್ಮ ಸಹ ಭಾರತೀಯ ಸಹೋದರರಿಗೆ ಆದ ಅನ್ಯಾಯಕ್ಕೆ ನ್ಯಾಯವನ್ನು ಬೇಡುತ್ತೇವೆ. ಪ್ರತಿ ಜೀವಕ್ಕೂ ಪರಿಹಾರವಾಗಿ ನಾಲ್ಕು ಭಯೋತ್ಪಾದಕರ ತಲೆಗಳನ್ನು ನಾವು ಹುಡುಕುತ್ತೇವೆ. ಮುಗ್ಧ ಜೀವಗಳ ನಷ್ಟವನ್ನು ಭರಿಸಲು ಯಾರಿಂದಲೂ ಸಾಧ್ಯವಿಲ್ಲ.

ಇಂತಹ ಅಮಾನವಿಯ ಕೃತ್ಯವನ್ನು ಎಸಗಿದ ಭಯೋತ್ಪಾದಕರು ಮುಕ್ತವಾಗಿ ಬದುಕಲು ಬಿಡಬಾರದು.

ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಬೇಕು. ನಾವು ಈ ದೇಶಕ್ಕಾಗಿ ಬದುಕುತ್ತೇವೆ, ಮತ್ತು ದೇಶಕ್ಕಾಗಿ ಸಾಯಲು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಪಹಲ್‍ಗಾಂಮ್ ಹತ್ಯಾಕಾಂಡ| ಭದ್ರತೆಯ ಲೋಪವನ್ನೂ ತನಿಖೆಗೆ ಒಳಪಡಿಸಲು ಸಿಪಿಐ(ಎಂ) ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *