ಲಿಬಿಯಾದಲ್ಲಿ ಭೀಕರ ಪ್ರವಾಹ, 5,300ಕ್ಕೂ ಹೆಚ್ಚು ಮೃತ, 10 ಸಾವಿರ ಮಂದಿ ನಾಪತ್ತೆ..!

ಟ್ರಿಪೋಲಿ: ಲಿಬಿಯಾದಲ್ಲಿ ಭೀಕರ ಬಿರುಗಾಳಿ ಮತ್ತು ಪ್ರವಾಹದಿಂದ ಅಲ್ಲಿನ ಜನರು ತತ್ತರಿಸಿದ್ದಾರೆ. ಲಿಬಿಯಾದ ಪೂರ್ವ ನಗರವಾದ ಡರ್ನಾದಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಜನರ ಶವಗಳು ಪತ್ತೆಯಾಗಿದ್ದು, ಚಂಡಮಾರುತದಿಂದ ಉಂಟಾದ ಭೀಕರ ಪ್ರವಾಹಕ್ಕೆ 5,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ

ಸ್ಟಾರ್ಮ್‌ ಡೇನಿಯಲ್ ಹೆಸರಿನ ಚಂಡಮಾರುತದಿಂದ ಉಂಟಾದ ಈ ಪ್ರವಾಹದಿಂದಾಗಿ ಅಣೆಕಟ್ಟು ಒಡೆದು ಹೋಗಿದ್ದು ಇದರ ಪರಿಣಾಮವಾಗಿ, ನೀರು ಅನೇಕ ನಗರಗಳು ಮತ್ತು ಹಳ್ಳಿಗಳಿಗೆ ಹರಡಿದೆ. ಡರ್ನಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಗೌರಿಕುಂಡ ಬಳಿ ಪ್ರವಾಹ:12 ಜನ ಕಾಣೆಯಾಗಿದ್ದು,3 ಅಂಗಡಿಗಳು ಕೊಚ್ಚಿಹೋಗಿವೆ

ಮೆಡಿಟರೇನಿಯನ್ ಸಮುದ್ರದಲ್ಲಿನ ಡೇನಿಯಲ್ ಚಂಡಮಾರುತದಿಂದಾಗಿ, ಹಲವೆಡೆ ಮನೆಗಳು ಧ್ವಂಸಗೊಂಡಿವೆ. ಸಮುದ್ರದ ನೀರು ಪ್ರವಾಹದ ರೂಪದಲ್ಲಿ ನಗರವನ್ನು ಪ್ರವೇಶಿಸಿದ್ದು, ಅಣೆಕಟ್ಟುಗಳು, ಸೇತುವೆಗಳು ಒಡೆದಿವೆ. ಇಂತಹ ಭೀಕರ ವಿನಾಶವನ್ನು ಹಿಂದೆ ಯಾರೂ ನೋಡಿರಲಿಲ್ಲ. ಡೇನಿಯಲ್ ಚಂಡಮಾರುತವನ್ನು ಮಡಿಕೇನ್ ಎಂದೂ ಕರೆಯಲಾಗುತ್ತಿದೆ.

ಡರ್ನಾ ಸಮುದ್ರ ತೀರದಲ್ಲಿ ನೆಲೆಗೊಂಡಿರುವ ನಗರ. ಸುಮಾರು 89 ಸಾವಿರ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಆದರೆ ಚಂಡಮಾರುತದಿಂದ ಉಂಟಾದ ಸಮುದ್ರದ ಪ್ರವಾಹ ಮತ್ತು ಮಳೆಯಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಅನೇಕ ರಸ್ತೆಗಳು ಮತ್ತು ನೇತುವೆಗಳು ಮುರಿದುಹೋಗಿವೆ. ಸತ್ತವರು ಮತ್ತು ಕಾಣೆಯಾದವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟೀಸ್‌ನ ಲಿಬಿಯಾದ ರಾಯಭಾರಿ ಟಮರ್ ರಂಜಾನ್ ಹೇಳುತ್ತಾರೆ. ಇಲ್ಲಿ ಕನಿಷ್ಠ 10 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಗೆ ತಿಳಿಸಲಾಗಿದೆ. ಇದೆಲ್ಲವೂ ಹವಾಮಾನ ಬದಲಾವಣೆಯ ಪರಿಣಾಮವಾಗಿದೆ. ಇಲ್ಲಿ ಇಂತಹ ಪ್ರಬಲ ಚಂಡಮಾರುತ ಇಲ್ಲಿಯವರೆಗೆ ಬಂದಿರಲಿಲ್ಲ.

Donate Janashakthi Media

Leave a Reply

Your email address will not be published. Required fields are marked *