ಕೊಪ್ಪಳ : ಕೊಪ್ಪಳ ನಗರದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು ಸಾಲು ಸಾಲು ಅಂಗಡಿಗಳು ಬೆಂಕಿಗೆ ತಾಪಕ್ಕೆ ತುತ್ತಾಗಿವೆ.
ಕೇಂದ್ರೀಯ ಬಸ್ ನಿಲ್ದಾಣದ ಎದುರು ಇರುವ ವರ್ಣೇಕರ್ ಕಾಂಪ್ಲೆಕ್ಸ್ ಮಾರ್ಗದಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಬೆಂಕಿ ಅವಘಡ ನಡೆದಿದೆ. ಮೆಘರಾಜ್ ಎನ್ನುವವರ ಪೇಂಟ್ ಮಾರಾಟದ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಒಂದೂವರೆ ತಾಸಿನಿಂದ ಪ್ರಯತ್ನ ಮಾಡಿದರೂ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ.
ಇದನ್ನು ಓದಿ : ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ – 40 ಜನರ ರಕ್ಷಣೆ
ವೇಗವಾಗಿ ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ಹರಡುತ್ತಿರುವ ಕಾರಣ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಬೆಂಕಿ ಹೊತ್ತಿಕೊಂಡ ಪಕ್ಕದ ಮಳಿಗೆಯಲ್ಲಿ ಎಸ್ ಬಿಐ ಎಟಿಎಂ ಕೇಂದ್ರ, ಅದರ ಪಕ್ಕದಲ್ಲಿ ಬ್ಯಾಟರಿಗಳ ಮಾರಾಟದ ಜೈಲಕ್ಷ್ಮಿ ಎಂಟರ್ ಪ್ರೈಸಸ್ ಇದೆ. ಅದರಲ್ಲಿರುವ ಬ್ಯಾಟರಿಗಳನ್ನು ಹೊರಗಡೆ ತರಲು ಅಂಗಡಿಯವರು ಹಾಗೂ ಸಾರ್ವಜನಿಕರು ಕಸರತ್ತು ನಡೆಸಿದರು.
ಈ ಘಟನೆಯಲ್ಲಿ ಅಂಗಡಿಯಲ್ಲಿರುವಂತಹ ಅನೇಕ ವಸ್ತುಗಳು ಸ್ಪೋಟಗೊಳ್ಳುತ್ತಿದ್ದು ಸದ್ಯ ಜನರು ಭಯಭರಿತರಾಗಿದ್ದಾರೆ. ಘಟನ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೆ ವೇಳೆ ಸ್ಥಳಕ್ಕೆ ಆಗಮಿಸಿದ ಕೊಪ್ಪಳದ ಎಸ್ ಪಿ ಅವರು ಜನರು ಘಟನೆ ಸ್ಥಳಕ್ಕೆ ಜನರು ಹೋಗದಂತೆ ತಡೆದು ಕ್ರಮ ಕೈಗೊಂಡಿದ್ದಾರೆ.
ಇದನ್ನು ನೋಡಿ : ಪ್ರಭುದ್ದಳ ಸಾವಿಗೆ ನ್ಯಾಯ ಸಿಗಬೇಕು – ಸಂಘಟನೆಗಳ ಆಕ್ರೋಶJanashakthi Media