ನಾಗಾರ್ಜುನ ಎಂ. ವಿ.
ಕಿರಣ್ ರಾಜ್ ಕೆ ನಿರ್ದೇಶನ ಮಾಡಿರುವ `ಚಾರ್ಲಿ 777’ ಕನ್ನಡ ಸಿನಿಮಾವು ಮುಂಬರುವ ಜೂನ್ 10ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಾರ್ಲಿ ಸಿನಿಮಾದ ಟೀಸರ್ ನೋಡುಗರಿಗೆ ಮೆಚ್ಚುಗೆಯಾಗಿದ್ದು ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಒಂದುರೀತಿಯ ಕುತೂಹಲ ಸೃಷ್ಟಿಸಿತ್ತು.
ಟೀಸರ್‌ನಲ್ಲಿಯೇ ನೋಡಿದಾಕ್ಷಣ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸಿರುವ ಈ ಸಿನಿಮಾ ಒಂದು ಸುಂದರ ಭಾವಪೂರಿತ ಸಿನಿಮಾವಾಗಿದೆ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಒಂದು ಪುಟ್ಟ ಸಾಕು ನಾಯಿಮರಿ ತಾನೂ ಈ ಪ್ರಪಂಚದಲ್ಲಿ ಜೀವಿಸಬೇಕೆಂಬ ನಿಲುವಿನಿಂದ, ಜೀವನದ ಉಳಿವಿಗಾಗಿ ಯಾವುದೇ ಆಶ್ರಯವಿಲ್ಲದೆ, ಮಳೆ, ಚಳಿ, ಬಿಸಿಲು, ಎನ್ನದೆ ಒಂದು ಕಡೆಯಿಂದ ಇನ್ನೋಂದು ಕಡೆ ಸಿಕ್ಕ-ಸಿಕ್ಕ ವಾಹನಗಳನ್ನ ಹತ್ತಿಕೊಂಡು ಚಲಿಸುತ್ತಾ, ಹಸಿವಿನಿಂದ ಕಸದ ಬುಟ್ಟಿಯಲ್ಲಿ ಸಿಗುವ ಆಹಾರವನ್ನ ತಿನ್ನುತ್ತಾ ಜೀವನ ಸಾಗಿಸುತ್ತದೆ. ಬರುಬರುತ್ತಾ ಹಸಿವನ್ನ ತಾಳಲಾರದೆ, ಮಾರುಕಟ್ಟಗಳಲ್ಲಿ ಮಾರಟಕ್ಕೆ ಇಟ್ಟ ಮೀನುಗಳನ್ನ ಕಚ್ಚಿಕೊಂಡು ಹೋಗುವುದು, ಆ ಮಾಲಿಕರು ಅದನ್ನ ಬೆನ್ನಟ್ಟಿ ಹೋಗುವುದು, ಬೇರೆ ಕಡೆ ಹೋದಾಗ ಬೇರೆ ನಾಯಿಗಳಿಂದ ತನ್ನನ್ನ ತಾನೂ ರಕ್ಷಣೆ ಮಾಡಿಕೊಳ್ಳಲು ಓಡಿಓಡಿ ಕೊನೆಗೆ, ಸಿನಿಮಾದ ನಾಯಕನ್ನ ತಲುಪುತ್ತದೆ. ನಂತರ ಆತನ ಜೊತೆ ಚಾರ್ಲಿ ಎಂಬ ಪುಟ್ಟ ನಾಯಿಯ ಪಾತ್ರವೆನೆಂಬುದನ್ನ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಕಿರಿಕ್ ಪಾರ್ಟಿ ಚಿತ್ರದ ಖ್ಯಾತ ನಟ ರಕ್ಷಿತ್ ಶೆಟ್ಟಿ ಈ ಸಿನಿಮಾದ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ 2014ರಲ್ಲಿ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದ ಸಂಗೀತಾ ಶೃಂಗೇರಿ ಬಣ್ಣಹಚ್ಚಿದ್ದಾರೆ. ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಜಿ ಎಸ್ ಗುಪ್ತಾ ಈ ಚಿತ್ರವನ್ನ ನಿರ್ಮಿಸಿದ್ದಾರೆ.
ಇದನ್ನೂ ಓದಿ : ಅವತಾರ ಪುರುಷನ ಅವತಾರಕ್ಕೆ ಸ್ಯಾಂಡಲ್‌ವುಡ್ ವಿಕ್ಟ್ರಿ
ಒಟ್ಟಾರೆ ಹೇಳುವುದಾದರೆ, ಈ ಸಿನಿಮಾವು ಸಾಹಸ, ಹಾಸ್ಯ, ನಾಟಕೀಯತೆ ಎಲ್ಲವೂ ಒಳಗೊಂಡಿದೆ ಎಂದು ಸಿನಿಮಾದ ನಿರ್ದೇಶಕ ಕಿರಣ್ ರಾಜ್ ತಮ್ಮ ಅಭಿಪ್ರಾಯವನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಚಾರ್ಲಿ 777 ಒಟ್ಟು 5 ಭಾಷೆಗಳಲ್ಲಿಯೂ ಡಬ್ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.
ಕನ್ನಡದೊಂದಿಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರುತ್ತಿರುವ ಚಾರ್ಲಿ 777 ಈಗಾಗಲೇ ಬೇರೆ ಬೇರೆ ಭಾಷಿಕರನ್ನು ಟೀಸರ್ ಮೂಲಕ ಗಮನ ಸೆಳೆದಿದೆ. ಅದರಂತೆ ಅಲ್ಲಿನ ಸ್ಟಾರ್ ನಟರೂ ಈ ಸಿನಿಮಾ ನೋಡಿ ಮೆಚ್ಚಿ ಅರ್ಪಿಸಲು ಮುಂದೆ ಬಂದಿದ್ದಾರೆ. ತೆಲುಗಿನಲ್ಲಿ ನಟ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ನಿರ್ದೇಶಕ ಕಾರ್ತಿಕ್ ಸುಬ್ಬರಾಜು, ಮಲಯಾಳಂನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ವಿತರಣೆ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಅದೇ ರೀತಿ ಹಿಂದಿಯಲ್ಲಿ ಯುಎಫ್ಓ ವಿತರಣೆ ಮಾಡಲಿದೆ.