ಬಂಗ್ಲೆಗುಡ್ಡಕ್ಕೆ ಯಾರೂ ಕಾಲಿಡಬಾರದು ಎಂದು ದೇವಾಲಯದ ಪ್ರಾಧಿಕಾರ ಹೇಳಿತ್ತು: ಚಿನ್ನಯ್ಯ

ಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಅಕ್ರಮವಾಗಿ ಹೂತಿದ್ದೇನೆ ಎಂದು ಆರೋಪಿಸಿ ಬಳಿಕ ತಪ್ಪು ಮಾಹಿತಿ ಆರೋಪದ ಅಡಿಯಲ್ಲಿ ಆರೋಪಿಯಾದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಗೃಹ ಇಲಾಖೆಯ ಉನ್ನತ ಮೂಲವೊಂದು,  ಧರ್ಮಸ್ಥಳದ ಬಂಗ್ಲೆಗುಡ್ಡದ ಬಗ್ಗೆ ಸ್ಪೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದ ಎಂದು ತಿಳಿಸಿದೆ ಎಂದು ಬೆಂಗಳೂರು ಪೋಸ್ಟ್‌ ವೆಬ್‌ಸೈಟ್‌ ವರದಿ ಮಾಡಿದೆ.

ತಾನು ಸ್ವಚ್ಛತಾ ಕಾರ್ಮಿಕನಾಗಿ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ದೇವಸ್ಥಾನದ ಪ್ರಾಧಿಕಾರದವರು ಬಂಗ್ಲೆಗುಡ್ಡ ನಿಷಿದ್ಧ ಸ್ಥಳ ಅಲ್ಲಿಗೆ ಯಾರೂ ಸಹ ಕಾಲಿಡಬಾರದು ಎಂದು ಕಟ್ಟುನಿಟ್ಟಾಗಿ ಹೇಳಿತ್ತು ಎಂದು ಚಿನ್ನಯ್ಯ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದನಂತೆ. ಆ ಸ್ಥಳಕ್ಕೆ ನಾನು ಯಾವತ್ತೂ ಹೋಗಿಲ್ಲ, ಆ ಸ್ಥಳಕ್ಕೆ ಕಾಲಿಡಲು ಎಲ್ಲರೂ ಹೆದರುತ್ತಿದ್ದರು ಎಂದೂ ಸಹ ಚಿನ್ನಯ್ಯ ಹೇಳಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು | ಕಾಂಗ್ರೆಸ್ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲ

ಅಲ್ಲದೇ ಚಿನ್ನಯ್ಯನ ಸಹೋದರ ತಾನಾಸಿ ಸಹ ಇದೇ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದ. ಆತನೂ ಸಹ ಇದೇ ರೀತಿಯ ಹೇಳಿಕೆಯನ್ನು ಎಸ್‌ಐಟಿ ಅಧಿಕಾರಿಗಳ ಮುಂದೆ ನೀಡಿದ್ದು, ಆ ಒಂದು ಸ್ಥಳದ ಬಗ್ಗೆ ನಮಗೆ ಭಯ ಇತ್ತು, ಯಾವತ್ತೂ ಸಹ ಆ ಕಡೆ ಕಣ್ಣು ಹಾಕುವುದಕ್ಕೂ ಸಹ ಪ್ರಯತ್ನಿಸಿಲ್ಲ ಎಂದು ಹೇಳಿದ್ದನಂತೆ.

ಇನ್ನು ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಜುಲೈ 19ರಂದು ಎಸ್‌ಐಟಿ ರಚಿಸಿ ಆದೇಶ ಹೊರಡಿಸಿತ್ತು. ಆಗಸ್ಟ್‌ 23ರಂದು ಚಿನ್ನಯ್ಯನನ್ನು ತಪ್ಪು ಹೇಳಿಕೆ ಮೇಲೆ ಬಂಧಿಸಿತ್ತು. ಈ ವೇಳೆ ಚಿನ್ನಯ್ಯ ತಾನು ತಂದ ಬುರುಡೆಯನ್ನು ಸೌಜನ್ಯ ಮಾವ ವಿಠಲಗೌಡ ತಂದುಕೊಟ್ಟಿದ್ದರು ಎಂದು ಹೇಳಿಕೊಂಡಿದ್ದ.

ಅದರ ಆಧಾರದ ಮೇಲೆ ವಿಠಲಗೌಡನನ್ನು ವಿಚಾರಣೆ ನಡೆಸಿದಾಗ ಆತ ಎಸ್‌ಐಟಿಯನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದಿದ್ದ. ಈ ವೇಳೆ ಎಸ್‌ಐಟಿ ಅಧಿಕಾರಿಗಳಿಗೆ ಒಂದು ಮಗುವಿನ ಮೂಳೆಯೂ ಸೇರಿದಂತೆ ಹಲವು ಮೂಳೆಗಳು ದೊರಕಿದ್ದವು.

ಇದನ್ನೂ ನೋಡಿ: ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ

Donate Janashakthi Media

Leave a Reply

Your email address will not be published. Required fields are marked *