ಕಲಬುರಗಿ| ತಾಪಮಾನ ಹೆಚ್ಚಳ: ಪ್ರಿಯಾಂಕ್ ಖರ್ಗೆ ಸೂಚನೆಗಳು

ಕಲಬುರಗಿ: ಬಿಸಿಲಿನ ತಾಪಮಾನ ಜಿಲ್ಲೆಯಲ್ಲಿ ಏರುತ್ತುರುವುದರಿಂದ ನಿಸರ್ಗ ಸಹಜವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದರೆ ಮುಂಚಿತವಾಗಿ ಕುಡಿಯುವ ನೀರಿನ ಕೊರತೆಯಾಗದಂತೆ ಕಾರ್ಯಸೂಚಿ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ . ಕಲಬುರಗಿ

ಜನತೆಗೆ ಕುಡಿಯುವ ನೀರನ್ನು ಒದಗಿಸುವುದು ನಮ್ಮ ಪ್ರಥಮ ಆದ್ಯತೆಯಾಗಿರಬೇಕು. ಜಾನುವಾರುಗಳಿಗೆ ನೀರು ಮತ್ತು ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕುಅಗತ್ಯ ಇರುವ ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ಹಾಗೂ ಜಲ ಮೂಲಗಳನ್ನು ಸಿದ್ದಗೊಳಿಸಿರಬೇಕು.

ಇದನ್ನೂ ಓದಿ: ಕೆಲಸ ಮಾಡದೆ ಸಂಬಳ ಪಡೆಯುತ್ತಿರಿ: ಅಲೋಕ್ ಕುಮಾರ್ ಅಸಮಾಧಾನ

ಬಾಡಿಗೆ ಆಧಾರದ ಮೇಲೆ ಖಾಸಗಿ ಬೋರ್ ವೆಲ್ ಗಳನ್ನು ಪಡೆಯಲಾಗಿದೆ. ಹಾಗೂ ಸರ್ಕಾರದ ಬೋರ್ ವೆಲ್ ಗಳನ್ನು ಫ್ಲಷ್ ಮಾಡುವ ಮೂಲಕ ಸುಲಭವಾಗಿ ನೀರು ಮೇಲೆತ್ತಲು ಕ್ರಮವಹಿಸಲಾಗುತ್ತಿದೆ, ಈ ಎಲ್ಲಾ ಸಿದ್ಧತೆಗಳು ಇನ್ನಷ್ಟು ಚುರುಕುಗೊಳಿಸಬೇಕು.

ನೀರಿನ ಹಿತ ಮಿತವಾದ ಬಳಕೆ, ಜಲ ಮೂಲಗಳ ಸಂರಕ್ಷಣೆ, ಸುಸ್ಥಿರ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವ ಮೂಲಕ ಬೇಸಿಗೆಯ ಬರವನ್ನು ಎದುರಿಸಬಹುದು. ಜನತೆಗೆ ನೀರನ್ನು ಒದಗಿಸುವುದು ಸರ್ಕಾರದ ಆದ್ಯತೆ, ನೀರಿನ ಜವಾಬ್ದಾರಿಯುತ ಬಳಕೆ ಜನರ ಜವಾಬ್ದಾರಿ. ಜೀವ ಜಲದ ಬಗ್ಗೆ ನಾವೆಲ್ಲರೂ ಹೊಣೆಗಾರಿಕೆಯಿಂದ ನಡೆದುಕೊಳ್ಳುವುದು ಇಂದಿನ ಅಗತ್ಯ ಎಂದು ಹೇಳಿದ್ದಾರೆ.

ಇದನ್ನೂ ನೋಡಿ: ಆರ್‌ಎಸ್‌ಎಸ್‌ ಕುರಿತ ಪ್ರಶ್ನೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕಿಗೆ ಜೀವನಪರ್ಯಂತ ನಿಷೇಧ! Janashakthi Media

Donate Janashakthi Media

Leave a Reply

Your email address will not be published. Required fields are marked *