ತೆಲಂಗಾಣ: ಅಕ್ರಮ ಜೂಜಾಟ ಆಯೋಜನೆ ಪ್ರಕರಣದ ಆರೋಪಿ ಬಿಜೆಪಿ ಸೇರ್ಪಡೆ

ಹೈದರಾಬಾದ್: ಅಕ್ರಮ ಜೂಜಾಟ ಆಯೋಜನೆ ಪ್ರಕರಣದ ಆರೋಪಿ ಚಿಕೋಟಿ ಪ್ರವೀಣ್ ತೆಲಂಗಾಣದ ಬರ್ಕತ್‌ಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ. ಅರುಣಾ ಅವರ ಸಮ್ಮುಖದಲ್ಲಿ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾನೆ. ಭಾರತ ಮತ್ತು ವಿದೇಶಗಳಲ್ಲಿ ಅಕ್ರಮ ಜೂಜು ಮತ್ತು ಕ್ಯಾಸಿನೊ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಆರೋಪ ಪ್ರವೀಣ್ ಮೇಲಿದೆ. ಈ ವರ್ಷದ ಕೊನೆಯಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 2022 ರಲ್ಲಿ ಜಾರಿ ನಿರ್ದೇಶನಾಲಯವು ಚಿಕೋಟಿ ಪ್ರವೀಣ್ ಮೇಲೆ ದಾಳಿ ನಡೆಸಿ ಪ್ರಶ್ನಿಸಿತ್ತು. 2023ರ ಮೇ ತಿಂಗಳ ವೇಳೆ ಪಟ್ಟಾಯದಲ್ಲಿ ಪ್ರಮುಖ ಜೂಜಾಟ ದಂಧೆಯನ್ನು ಭೇದಿಸಿದ್ದ ಥಾಯ್ಲೆಂಡ್ ಪೊಲೀಸರಿಗೆ ಸಿಕ್ಕಿಬಿದ್ದ ಜನರ ಗುಂಪಿನಲ್ಲಿ ಪ್ರವೀಣ್ ಕೂಡಾ ಇದ್ದನು.

ಇದನ್ನೂ ಓದಿ: ದ್ವೇಷ ಭಾಷಣ ಪ್ರಕರಣಗಳ ಪಟ್ಟಿಯಲ್ಲಿ ಬಿಜೆಪಿ ಸಂಸದ-ಶಾಸಕರಿಗೆ ಅಗ್ರಸ್ಥಾನ!

ಪ್ರವೀಣ್ ಬಿಜೆಪಿ ಸೇರಲು ಕಳೆದ ಕೆಲ ದಿನಗಳಿಂದ ಪ್ರಯತ್ನ ನಡೆಸುತ್ತಿದ್ದು, ಸೆಪ್ಟೆಂಬರ್ 12 ರಂದು ಪಕ್ಷ ಸೇರುತ್ತೇನೆಂದು ಹೊರಟಿದ್ದ ಪ್ರವೀಣ್‌ಗೆ ಮುಜುಗರ ಸಂದರ್ಭ ಸೃಷ್ಟಿಯಾಗಿತ್ತು. ಅವನನ್ನು ಪಕ್ಷಕ್ಕೆ ಸೇರಿಸುವ ಬಗ್ಗೆ ಬಿಜೆಪಿಯೊಳಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು. ಕೊನೆಗೆ ಪಕ್ಷದ ಮುಖಂಡರು ಅವನು ಬಿಜೆಪಿ ಸೇರುವುದನ್ನು ತಿರಸ್ಕರಿಸಿದ್ದರು ಎಂದು ವರದಿಯಾಗಿತ್ತು.

ಅಂದು ಪ್ರವೀಣ್ ಮತ್ತು ಅವನ ಅನುಯಾಯಿಗಳು ಹೈದರಾಬಾದ್‌ನ ಬಿಜೆಪಿ ಕಚೇರಿಗೆ ಮೆರವಣಿಗೆ ಆಯೋಜಿಸಿ, ತಾವು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇವೆ ಎಂದು ಘೋಷಿಸಿದ್ದರು. ಆದರೆ ಮೆರವಣಿಗೆಯು ಪಕ್ಷದ ಕಚೇರಿಗೆ ಆಗಮಿಸಿದಾಗ ತೆಲಂಗಾಣದ ಬಿಜೆಪಿ ಅಧ್ಯಕ್ಷ ಕಿಶನ್ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಕಚೇರಿಯಲ್ಲಿ ಇರಲಿಲ್ಲ. ತಪ್ಪು ಸಂವಹನದಿಂದ ಇದು ಸಂಭವಿಸಿದೆ ಎಂದು  ಆ ವೇಳೆ ಪ್ರವೀಣ್ ಹೇಳಿಕೊಂಡಿದ್ದನು. ಆದರೆ ನಂತರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರವೀಣ್ ಕೆಲವು ಬಿಜೆಪಿ ನಾಯಕರು ಪಕ್ಷಕ್ಕೆ ಬರದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದನು. ಜೂಜಾಟ

ಜುಲೈ 2023 ರಲ್ಲಿ ಸಂಭವಿಸಿದ ಕೋಮು ಘರ್ಷಣೆಯ ನಂತರ ಹೇರಲಾಗಿದ್ದ ನಿಷೇಧಾಜ್ಞೆ ಆದೇಶದ ನಡುವೆ ಅನುಮತಿಯಿಲ್ಲದೆ ರ‍್ಯಾಲಿ ಕೈಗೊಂಡಿದ್ದಕ್ಕಾಗಿ ಗಜ್ವೆಲ್ ಪೊಲೀಸರು ಪ್ರವೀಣ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದಕ್ಕೂ ಮೊದಲು, ಹೈದರಾಬಾದ್‌ನ ಚತ್ರಿನಾಕ ಪೊಲೀಸರು ಜುಲೈ 2023 ರ ಬೋನಾಲು ಹಬ್ಬದ ಸಂದರ್ಭದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಅವರು ನ್ಯಾಯಾಲಯದಿಂದ ಜಾಮೀನು ಪಡೆದಿದ್ದನು.

ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

 

Donate Janashakthi Media

Leave a Reply

Your email address will not be published. Required fields are marked *