ರೂ.10 ಲಕ್ಷ ದಂಡ ಮೊತ್ತ ʻಪ್ರಧಾನಮಂತ್ರಿ ಕೋವಿಡ್‌ ಪರಿಹಾರ ನಿಧಿʼಗೆ ನೀಡಿ: ತೆಲಂಗಾಣ ಹೈಕೋರ್ಟ್‌

ಹೈದರಾಬಾದ್‌: ಅಮಿತಾಭ್​ ಬಚ್ಚನ್​ ನಟನೆಯ ‘ಝಂಡ್​’ ಸಿನಿಮಾ ತಡೆಕೋರಿ ಸಲ್ಲಿಸಲಾಗಿದ್ದು ಅರ್ಜಿದಾರರಿಗೆ ದಂಡ ವಿಧಿಸಿದ ತೆಲಂಗಾಣ ಉಚ್ಚ ನ್ಯಾಯಾಲಯವು ಅರ್ಜಿದಾರರಿಗೆ ದಂಡದ ಮೊತ್ತವನ್ನು 30 ದಿನಗಳ ಒಳಗೆ 10 ಲಕ್ಷ ರೂಪಾಯಿ ಹಣವನ್ನು ಪ್ರಧಾನ ಮಂತ್ರಿ ಕೊವಿಡ್ ಪರಿಹಾರ ನಿಧಿಗೆ ನೀಡಬೇಕು. ಒಂದೊಮ್ಮೆ ಅರ್ಜಿದಾರ ಈ ಹಣವನ್ನು ನೀಡಲು ವಿಫಲನಾದರೆ  ಹೈದರಾಬಾದ್ ಕಲೆಕ್ಟರ್ ಈ ಹಣವನ್ನು ವಸೂಲಿ ಮಾಡಿ ಪ್ರಧಾನಮಂತ್ರಿ ಕೊವಿಡ್ ಪರಿಹಾರ ನಿಧಿಗೆ ನೀಡಬೇಕು’ ಎಂದು ಸೂಚನೆ ನೀಡಿದೆ.

ವ್ಯಕ್ತಿಚಿತ್ರ ಆಧಾರಿತ ಅಥವಾ ದೊಡ್ಡ ಬಜೆಟ್​ ಸಿನಿಮಾಗಳು ತೆರೆಗೆ ಬಂದರೆ, ಒಂದಿಲ್ಲೊಂದು ವಿವಾದಗಳು ಹುಟ್ಟಿಕೊಳ್ಳುತ್ತದೆ ಅಥವಾ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದೆಂದು ತಡೆ ನೀಡಬೇಕೆಂದು ಕೋರಲಾಗುತ್ತದೆ. ಚಿತ್ರತಂಡಕ್ಕೆ ತೊಂದರೆ ಕೊಡಲು ಅಥವಾ ನಿರ್ಮಾಪಕರಿಂದ ದುಡ್ಡು ಕೀಳಲು ಸಿನಿಮಾ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸುತ್ತಾರೆ.

ಅದೇ ರೀತಿ, ಅಮಿತಾಭ್​ ಬಚ್ಚನ್​ ನಟನೆಯ ‘ಝಂಡ್​’ ಸಿನಿಮಾ ಮಾರ್ಚ್​ 4ರಂದು ಬಿಡುಗಡೆ  ಆಗಿದೆ. ವಿಜಯ್​ ಬರ್ಸೆ ಅವರ ಜೀವನ ಆಧಾರಿತ ಸಿನಿಮಾ ಇದಾಗಿದೆ. ವಿಜಯ್​ ಬರ್ಸೆ ‘ಸ್ಲಮ್ ಸಾಕರ್​’ ಹೆಸರಿನ ಎನ್​ಜಿಒ ಸಂಸ್ಥೆ ಆರಂಭಿಸಿದ್ದರು. ಅದರ ಮೂಲಕ ಬಡ ಮಕ್ಕಳಿಗೆ ಫುಟ್​ಬಾಲ್​ ಹೇಳಿಕೊಡುವ ಕೆಲಸ ಮಾಡಿದ್ದರು. ಅಮಿತಾಭ್​ ಬಚ್ಚನ್​ ಈ ಚಿತ್ರದಲ್ಲಿ ವಿಜಯ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತಡೆ ನೀಡಬೇಕು ಎಂದು ನಂದಿ ಚಿನ್ನಿ ಕುಮಾರ್ ಕೋರಿದ್ದರು.

‘ಫುಟ್​ಬಾಲರ್​ ಅಖಿಲೇಶ್​​ ಪೌಲ್​ ಅವರ ಜೀವನ ಆಧರಿಸಿ ‘ಝಂಡ್​’ ಸಿದ್ಧವಾಗಿದೆ. ನಾನು ಅಖಿಲೇಶ್ ಕುರಿತು ಸಿನಿಮಾ ಮಾಡೋಕೆ 2017-18ರಲ್ಲಿ ಹಕ್ಕನ್ನು ಪಡೆದಿದ್ದೆ. ಅಮಿತಾಭ್​ ಬಚ್ಚನ್ ನಟನೆಯ ‘ಝಂಡ್​’ ಚಿತ್ರ ಕೂಡ ಅದೇ ಕಥೆಯನ್ನು ಹೊಂದಿದೆ ಎಂಬುದು ಆ ಬಳಿಕ ಗೊತ್ತಾಯಿತು. ಈ ಚಿತ್ರಕ್ಕೆ ತಡೆನೀಡಬೇಕು’ ಎಂದು ನಂದಿ ಚಿನ್ನಿ ಕುಮಾರ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ತೆಲಂಗಾಣ ಹೈಕೋರ್ಟ್ ಸರಿಯಾದ ರೀತಿಯಲ್ಲಿ ಪಾಠ ಕಲಿಸಿದೆ. ಅರ್ಜಿದಾರರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದೆ. ಸುಳ್ಳು ಮಾಹಿತಿ ಇಟ್ಟುಕೊಂಡು ನಂದಿ ಚಿನ್ನಿ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಈ ಅರ್ಜಿಯನ್ನು ಹಿಂಪಡೆಯುವುದಕ್ಕೆ ಅವರು 5 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಿವಾಲಿ ಅವರನ್ನು ಒಳಗೊಂಡ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

Donate Janashakthi Media

Leave a Reply

Your email address will not be published. Required fields are marked *