ತೆಲಂಗಾಣ ವಿಧಾನಸಭೆ ಚುನಾವಣೆ | ಬಿಜೆಪಿ-ಜೆಎಸ್‌ಪಿ ಸೀಟು ಹಂಚಿಕೆ ಮಾತುಕತೆ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷ (ಜೆಎಸ್‌ಪಿ) ಮತ್ತು ಬಿಜೆಪಿ ಮೈತ್ರಿಯ ಬಗ್ಗೆ ಯಾವುದೆ ಸ್ಪಷ್ಟತೆ ಇಲ್ಲದಿದ್ದರೂ, ನೆರೆಯ ತೆಲಂಗಾಣದಲ್ಲಿ ಮುಂಬರುವ ಚುನಾವಣೆಗೆ ಉಭಯ ಪಕ್ಷಗಳು ಸೀಟು ಹಂಚಿಕೆ ಮಾತುಕತೆಗಳನ್ನು ಪ್ರಾರಂಭಿಸಿರುವುದಾಗಿ ವರದಿಯಯಾಗಿವೆ. ಈ ಬಗ್ಗೆ ಜೆಎಸ್‌ಪಿ ಮುಖ್ಯಸ್ಥ, ನಟ ಕೆ. ಪವನ್ ಕಲ್ಯಾಣ್ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

“ತೆಲಂಗಾಣದ ಕೆಲವು ಸ್ಥಾನಗಳಲ್ಲಿ ಸ್ಪರ್ಧಿಸಲು ಪವನ್ ಕಲ್ಯಾಣ್ ಅವರ ಕೋರಿಕೆಯನ್ನು ಸರಿಹೊಂದಿಸುವ ಜವಾಬ್ದಾರಿಯನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ, ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಅವರಿಗೆ  ವಹಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ಮಾಡಿದೆ.

ಇದನ್ನೂ ಓದಿ: ಯುವಕರು 70 ಗಂಟೆ ಕೆಲಸ ಮಾಡಬೇಕೆಂದ ಇನ್ಫೋಸಿಸ್ ನಾರಾಯಣ ಮೂರ್ತಿ!

ಪವನ್ ಕಲ್ಯಾಣ್ ಅವರು ಜೆಎಸ್‌ಪಿಯ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲಾ ಮನೋಹರ್ ಅವರೊಂದಿಗೆ ಇತ್ತೀಚೆಗೆ ದೆಹಲಿ ಪ್ರವಾಸದಲ್ಲಿದ್ದರು. ಅಮಿತ್ ಶಾ ಅವರು ಶುಕ್ರವಾರ ಹೈದರಾಬಾದ್‌ಗೆ ಆಗಮಿಸಲಿದ್ದು, ಅಲ್ಲಿಯವರೆಗೂ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಪವನ್ ಕಲ್ಯಾಣ್ ಅವರ ಮನವಿಯು ಜೆಎಸ್‌ಪಿ ಪರವಾಗಿ ಮತ ಚಲಾಯಿಸಬಹುದಾದ ಕ್ಷೇತ್ರಗಳನ್ನು ನಾವು ನೋಡುತ್ತಿದ್ದೇವೆ. ಸುದೀರ್ಘ ಮಾತುಕತೆಗಳ ನಡುವೆಯೂ ನಾವು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಪಕ್ಷದ ಹಿರಿಯ ನಾಯಕರು ಮತ್ತೊಮ್ಮೆ ಅಮಿತ್ ಶಾ ಅವರನ್ನು ಭೇಟಿಯಾದ ನಂತರ ಈ ಬಗ್ಗೆ ನಾವು ತೀರ್ಮಾನಕ್ಕೆ ಬರುತ್ತೇವೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ತೆಲಂಗಾಣ ಬಿಜೆಪಿ ಮತ್ತು ಜೆಎಸ್‌ಪಿ ನಾಯಕರು ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ವಿಚಾರವಾಗಿ ಪವನ್ ಕಲ್ಯಾಣ್ ಕಳೆದ ವಾರ ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ: ರಾಜಸ್ಥಾನ | ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗೋವಿಂದ ಸಿಂಗ್‌ ದೋಸ್ತಾರಾ ಮನೆಗಳ ಮೇಲೆ ಇ.ಡಿ. ದಾಳಿ

ಸೆಪ್ಟೆಂಬರ್ 14ರಂದು ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ನಿಗಮದ ಹಗರಣದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದಂದಿನಿಂದ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಟಿಡಿಪಿಯೊಂದಿಗೆ ಮೈತ್ರಿ ಘೋಷಿಸಿ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪವನ್ ಕಲ್ಯಾಣ್ ಅವರು ಬಿಜೆಪಿಗೆ ಜೊತಗೆ ಸೇರುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ಜಗನ್ ವಿರುದ್ಧ “ಮಹಾ ಮೈತ್ರಿ” ಗಾಗಿ ತಯಾರಿ ನಡೆಸುತ್ತಿದ್ದಾರೆ.

ಇದರ ಬೆನ್ನಲ್ಲೇ ಅಕ್ಟೋಬರ್ 4 ರಂದು ತೆಲಂಗಾಣದಲ್ಲಿ ಜೆಎಸ್‌ಪಿ 32 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪವನ್ ಕಲ್ಯಾಣ್ ಘೋಷಿಸಿದ್ದಾರೆ. ಘೋಷಿಸಲಾಗಿರುವ ಕ್ಷೇತ್ರಗಳು ಬಹುಪಾಲು ನಗರ ಪ್ರದೇಶಗಳಾಗಿದ್ದು, ಹೈದರಾಬಾದ್‌ನ ಸುತ್ತಮುತ್ತ ಇವೆ. ಕೆಲವು ಸ್ಥಾನಗಳು ಖಮ್ಮಂ ಮತ್ತು ನಲ್ಗೊಂಡ ಜಿಲ್ಲೆಗಳಲ್ಲಿವೆ. ಜೆಎಸ್‌ಪಿ ಪ್ರಮುಖವಾಗಿ ಹೈದರಾಬಾದ್‌ನ ಕುಕಟ್‌ಪಲ್ಲಿ, ಉಪ್ಪಲ್, ಎಲ್‌ಬಿ ನಗರ, ಮಲ್ಕಾಜ್‌ಗಿರಿ, ಸೆರಿಲಿಂಗಂಪಲ್ಲಿ, ಪಟಂಚೇರು, ಕುತುಬುಲ್ಲಾಪುರ ಮತ್ತು ಸನತ್‌ನಗರ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ.

ಜೆಎಸ್‌ಪಿ 2019 ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ 5 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಯಾವುದೆ ಸ್ಥಾನಗಳು ಅದು ದಕ್ಕಿಸಿಕೊಂಡಿರಲಿಲ್ಲ. ತೆಲಂಗಾಣದಲ್ಲಿ ಜೆಎಸ್‌ಪಿಗೆ ರಾಜಕೀಯ ನೆಲೆ ಕಡಿಮೆಯಿದ್ದರೂ, ನಟನಾಗಿ ಪವನ್ ಕಲ್ಯಾಣ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ.

ವಿಡಿಯೊ ನೋಡಿ: ಮುಂಬಡ್ತಿ ಗೊಂದಲ ನಿವಾರಣೆಗೆ ಆಗ್ರಹಿಸಿ ಶಿಕ್ಷಕ – ಉಪನ್ಯಾಸಕರ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *