ಬೆಂಗಳೂರು: ಭಾರೀ ಮಳೆಯಿಂದಾಗಿ ನಗರದ ಕೆಲ ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ನಡುವೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೋಟೆಲ್ವೊಂದರಲ್ಲಿ ದೋಸೆ ರುಚಿ ಸವಿದು, ಅದರ ಗುಣಗಾನ ಮಾಡಿದ್ದರು.
ಈ ಘಟನೆ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಈ ನಡುವೆ ಇದೀಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಸದ ತೇಜಸ್ವಿ ಸೂರ್ಯಗೆ ದೋಸೆ ಪಾರ್ಸಲ್ ಕಳುಹಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿತು.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಆನ್ಲೈನ್ ಫುಡ್ ಡೆಲಿವರಿ ಮೂಲಕ ಜಯನಗರದ ಸಂಸದರ ಕಚೇರಿಗೆ ದೋಸೆ ಪಾರ್ಸೆಲ್ ಮಾಡಲಾಗಿದೆ. ವಿದ್ಯಾರ್ಥಿ ಭವನ, ನ್ಯೂ ಸಾಗರ್, ದಾವಣಗೆರೆ ಬೆಣ್ಣೆ ದೋಸೆ, ಮೌರ್ಯ ಹೋಟೆಲ್ ದೋಸೆ, ಸಿಟಿಆರ್ ಹೋಟೆಲ್ ದೋಸೆ ಪಾರ್ಸೆಲ್ ಮಾಡಿದರು. ಮಸಾಲೆ ದೋಸೆ, ಪುಡಿ ಮಸಾಲೆ ದೋಸೆ, ಪೇಪರ್ ದೋಸೆ, ಬೆಣ್ಣೆ ಮಸಾಲೆ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ ರವಾನೆ ಮಾಡಿದರು. ಹಣ ಪಾವತಿಸಿ ಡಂನ್ಜೋ ಮೂಲಕ ಪಾರ್ಸೆಲ್ ಕಳುಹಿಸಿದರು.
ಜನರು ಪ್ರವಾಹದಿಂದ ಸಂಕಷ್ಟದಲ್ಲಿರುವಾಗ ಹೋಟೆಲ್ನಲ್ಲಿ ಮಸಾಲೆ ದೋಸೆ ಸವಿದ ಹಿನ್ನೆಲೆ ಸಂಸದ ತೇಜಸ್ವಿ ಸೂರ್ಯ ಅವರಿಗೆ ದೋಸೆ ಸವಿದು ಪ್ರಚಾರ ಮಾಡುವುದೊಂದೆ ಆಗಿದೆ. ಬೇರೆನೂ ತಿಳಿದಿಲ್ಲ. ಈ ದೋಸೆ ರುಚಿ ನೋಡಬೇಕಾ ನೀವು ಹೋಟೆಲ್ಗೆ ಭೇಟಿ ನೀಡಿ ಎಂದು ಸಲಹೆಯನ್ನೂ ನೀಡಿದ್ದರು. ಜನತೆ ಸಂಕಷ್ಟಗಳ ಪರಿಹಾರ ಅವರಿಗೆ ಬೇಕಾಗಿಲ್ಲ.