ಕೋವಿಡ್ ಉಂಟುಮಾಡಿರುವ ಬಿಕ್ಕಟ್ಟನ್ನು ಸಮರೋಪಾದಿಯಲ್ಲಿ ಎದುರಿಸಲಾಗುತ್ತಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ- ಈ ಮೊದಲೇ ಇದ್ದ ತಮ್ಮ ಪಿಎಂ-ಕಿಸಾನ್ ಸ್ಕೀಮಿನ ಎಂಟನೇ ಕಂತನ್ನು ಬಿಡುಗಡೆ ಮಾಡಲೆಂದು ಅಯೋಜಿಸಿದ್ದ ವಿಡಿಯೊ ಸಮ್ಮೇಳನದಲ್ಲಿ(ಮೇ 14)
ಇದಕ್ಕೆ ಮೊದಲು ‘ಡೈಲಿ ಗಾರ್ಡಿಯನ್’ ಎಂಬ ಪತ್ರಿಕೆಯಲ್ಲಿ ಪ್ರಧಾನಿಗಳು ಈ ನಿಟ್ಟಿನಲ್ಲಿ ದಿನವೂ 18 ಗಂಟೆ ಕಠಿಣ ಪರಿಶ್ರಮ ಪಡುತ್ತಿದ್ದಾರೆ ಎಂಬ ಒಂದು ಲೇಖನ ಪ್ರಕಟವಾಗಿದ್ದು, ಈ ಬಗ್ಗೆ ಜನಗಳನ್ನು ನಂಬಿಸಲು ಹಲವಾರು ಕೇಂದ್ರ ಮಂತ್ರಿಗಳು 18 ಗಂಟೆ ಶ್ರಮ ಪಡುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಕೇಂದ್ರ ಮಂತ್ರಿಗಳು ಮತ್ತು ಆಳುವ ಪಕ್ಷದ ಮುಖಂಡರುಗಳು ಈ ಲೇಖನವನ್ನು ಟ್ವೀಟ್ ಮಾಡಿ ಪ್ರತಿಪಕ್ಷಗಳ ಟೀಕೆಗಳಿಗೆ ಮರುಳಾಗಬೇಡಿ ಎಂದು ಮನವಿ ಮಾಡಿರುವುದು ಕಾಣ ಬಂದಿದೆ.
(ಶೀರ್ಷಿಕೆಯ ವ್ಯಂಗ್ಯಚಿತ್ರ: “ಎಲ್ಲವೂ ಸರಿಯಾಗಿದೆ, ಸಕಾರಾತ್ಮಕವಾಗಿರಿ’-ಕೃಪೆ: ಮಂಜುಲ್, ಫಸ್ಟ್ ಪೋಸ್ಟ್ )
***
ನ್ಯೂಯಾರ್ಕ್ ಟೈಮ್ಸ್ ಮತ್ತಿತರ ವಿದೇಶಿ ಪತ್ರಿಕೆಗಳಲ್ಲಿ ಭಾರತ ಸರಕಾರದ ‘ಶೋಚನೀಯ ವಿಫಲತೆ’ ಎಂದೆಲ್ಲ ಲೇಖನಗಳು ಪ್ರಕಟವಾಗಲಾರಂಭಿಸಿದ ಹಿನ್ನೆಲೆಯಲ್ಲಿ ವಿದೇಶಿ ಪತ್ರಿಕೆಯೆಂಬ ಭ್ರಮೆ ಹುಟ್ಟಿಸುವ ಹೆಸರಿನ ಪತ್ರಿಕೆಯಲ್ಲಿನ ಲೇಖನವನ್ನು ಇವರೆಲ್ಲ ಟ್ವೀಟ್ ಮಾಡಿರುವಂತೆ ಕಾಣುತ್ತದೆ.
ನಿಜ, ಇದು ಕೆಲವರು ಊಹಿಸಿದಂತೆ ‘ಫೇಕ್’ ಪತ್ರಿಕೆಯಲ್ಲ, ಆದರೆ, ಭಾರತದಿಂದಲೇ ಪ್ರಕಟವಾಗುತ್ತಿರುವ ಒಂದು ವೆಬ್ ಪತ್ರಿಕೆ, ಟ್ವೀಟ್‍ಗೊಂಡಿರುವ ಲೇಖನ ಬರೆದವರು ಬಿಜೆಪಿಯ ಮಾಧ್ಯಮ ಸಂಬಂಧಗಳ ಇಲಾಖೆಯ ಸಂಯೋಜಕರೇ ಎಂದು ‘ದಿ ವೈರ್’ (ಮೇ 11) ಹೇಳಿದೆ.
‘ಸಕಾರಾತ್ಮಕತೆ’ ಹರಡಲು ಇದು ಒಂದು ವಿಧಾನವಷ್ಟೇ!
‘ಸಕಾರಾತ್ಮಕತೆಗೆ ಒತ್ತಡ’
ಆ ವಿಶೇಷ ಪ್ರತಿನಿಧಿ ‘ದಿ ನ್ಯೂ ನ್ಯೂಯಾರ್ಕ್ ಟೈಮ್ಸ್,
ಗಾಝಿಯಾಬಾದ್’ನಿಂದ ಬಂದಿದ್ದಾರೆ ನೋಡಿ……
(ಸಜಿತ್ ಕುಮಾರ್. ಡೆಕ್ಕನ್ ಹೆರಾಲ್ಡ್)
***
ಇನ್ನೊಂದು ವಿಧಾನ-ಎಫ್‍ಐಆರ್! ದಿಲ್ಲಿ ಪೊಲೀಸ್ ಲಸಿಕೆ ಅಭಿಯಾನವನ್ನು ಪ್ರಶ್ನಿಸಿದ ಪೋಸ್ಟರುಗಳ ವಿರುದ್ಧ 17 ಎಫ್‍ಐಆರ್ ಗಳನ್ನು ದಾಖಲಿಸಿದೆ, 15 ಮಂದಿಯನ್ನು ಬಂಧಿಸಿದೆ ಎಂದು ವರದಿಯಾಗಿದೆ.
ವರದಿ ನೆಗೆಟಿವ್ (ನಕಾರಾತ್ಮಕ) ಆಗಿದೆ
…ಆದರೆ ಇದು ಸೋಂಕಿತರ ತಪಾಸಣಾ ವರದಿಯಲ್ಲ-
ನಕಾರಾತ್ಮಕತೆ ಹರಡಲಾಗುತ್ತಿದೆ ಎಂಬ ‘ಪ್ರಥಮ ಮಾಹಿತಿ ವರದಿ’(ಎಫ್‍ಐಆರ್)
( ಸಂದೀಪ್ ಅಧ್ವರ್ಯು, ಟೈಂಸ್ ಆಫ್ ಇಂಡಿಯ)
***
ದಿಲ್ಲಿ, ಅಲಹಾಬಾದ್, ಮುಂಬೈ, ಮದ್ರಾಸ್, ಗುಜರಾತ್ ಮತ್ತು ಕರ್ನಾಟಕ ಹೈಕೋರ್ಟ್‌ಗಳು, ಜತೆಗೆ ಹೊಸ ಮುಖ್ಯ ನ್ಯಾಯಮೂರ್ತಿಗಳು ಅಧಿಕಾರ ವಹಿಸಿಕೊಂಡ ಮೇಲೆ ಸುಪ್ರಿಂ ಕೋರ್ಟ್ ಕೂಡ ಕೋವಿಡ್ ಎರಡನೇ ಅಲೆಯನ್ನು ಸರಕಾರಗಳು, ಅದರಲ್ಲೂ ಕೇಂದ್ರ ಸರಕಾರ ಎದುರಿಸುತ್ತಿರುವ ರೀತಿಯ ಬಗ್ಗೆ ತೀವ್ರ ಟೀಕೆ-ಟಿಪ್ಪಣಿಗಳನ್ನು ಮಾಡಿರುವ ಹಿನ್ನೆಲೆಯಲ್ಲಿ, ಈ ‘ಸಕಾರಾತ್ಮಕತೆ’ಯ ಧಾವಂತ ತೀವ್ರಗೊಂಡಿರುವಂತೆ ಕಾಣುತ್ತಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.
ಕೇಂದ್ರ ಸರಕಾರ, ಆಳುವ ಪಕ್ಷ ಮತ್ತು ಅದರ ಸೈದ್ಧಾಂತಿಕ ಗುರು ಆರೆಸ್ಸೆಸ್ ಸರಕಾರದ ವಿಫಲತೆಯ ಟೀಕೆ-ಟಿಪ್ಪಣಿಗಳನ್ನು ಎದುರಿಸಲು ತ್ರಿವಿಧ ಕಾರ್ಯತಂತ್ರ ರೂಪಿಸಿದಂತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ(ಎನ್‍ಡಿಟಿವಿ, ಮೇ 12).
ಬಹುಶಃ ಇದರ ಭಾಗವಾಗಿಯೇ ಸರಕಾರ ಜನಗಳ ಜೀವರಕ್ಷಣೆಗೆ ಎನು ಮಾಡುತ್ತಿದೆ ಎಂಬ ಸಕಾರಾತ್ಮಕ ಹೇಳಿಕೆಗಳ ಬದಲು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಕೇಂದ್ರ ಮಂತ್ರಿಗಳು, ಲಸಿಕೆ ಸಿಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ ಎಂದು ಸುಪ್ರಿಂ ಕೋರ್ಟ್ ಕೂಡ ಬೆಂಬಲಿಸಿದ ಕರ್ನಾಟಕ ಹೈಕೋರ್ಟಿನ ಆದೇಶದಿಂದ ಕುಪಿತರಾಗಿ ಸಿಟ್ಟಿನಿಂದ ಪ್ರಶ್ನಿಸಿರುವುದು.
(ಪಿ.ಮಹಮ್ಮದ್, ವಾರ್ತಾಭಾರತಿ)
***
ನ್ಯಾಯಾಧೀಶರೇನು ಸರ್ವಜ್ಞರೇ ಎಂದು ರಾಜ್ಯದ ಒಬ್ಬ ಮಾಜಿ ಮಂತ್ರಿ ಹಾಗೂ ಈಗ ಆಳುವ ಪಕ್ಷದ ರಾಷ್ಟ್ರೀಯ ಮಟ್ಟದ ಮುಖಂಡರು ಸಿಡಿಮಿಡಿಗೊಂಡು ಪ್ರಶ್ನಿಸಿದ್ದಾರೆ.
(ಪಿ.ಮಹಮ್ಮದ್, ಆಂದೋಲನ)
ಗಮನಿಸಬೇಕಾದ ಸಂಗತಿಯೆಂದರೆ, ಇವರಿಬ್ಬರೂ ತೀವ್ರ ಲಸಿಕೆ ಕೊರತೆ ಆಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಮೂರು ತಿಂಗಳ ಹಿಂದೆಯಷ್ಟೇ ಕೋವಿಡ್ ವಿರುದ್ಧ ಸಮರ ಗೆದ್ದಿದ್ದೇವೆ, ಭಾರತ ಜಗತ್ತನ್ನು ರಕ್ಷಿಸಿದೆ, ನಮ್ಮ ದೇಶ ಜಗತ್ತಿನ ಔಷಧಾಲಯವಾಗಿದೆ ಎಂದು ಪ್ರಧಾನಿಗಳು ಸಾರಿದ್ದರು, ಅಷ್ಟಕ್ಕೇ ನಿಲ್ಲದೆ ‘ಟೀಕಾ ಉತ್ಸವ್’ಗೆ ’ ಕರೆ ನೀಡಿದರು ಎಂಬುದು ಮತ್ತು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಕ್ಸಿಜನ್ ಸಿಗದೆ ಹಾಹಾಕಾರ ಎದ್ದಿರುವುದು ಎಲ್ಲಾ ಸುಳ್ಳೆಂದೇನೂ ಹೇಳಿಲ್ಲ.
ಈ ನಡುವೆ ಆರೆಸ್ಸೆಸ್ ಮುಖ್ಯಸ್ಥರು ಕೂಡ “ ನಾವು ಈ ಸನ್ನಿವೇಶವನ್ನು ಎದುರಿಸಬೇಕಾಗಲು ಕಾರಣ ಸರಕಾರವಾಗಲೀ, ಆಡಳಿತವಾಗಲೀ ಅಥವ ಸಾರ್ವಜನಿಕರಾಗಲೀ ಮೊದಲನೇ ಅಲೆಯ ನಂತರ , ವೈದ್ಯರುಗಳ ಸೂಚನೆಗಳ ಹೊರತಾಗಿಯೂ ಜಾಗರೂಕತೆಯನ್ನು ಕೈಬಿಟ್ಟಿರುವುದು” ಎಂದು ‘ಪಾಸಿಟಿವ್ ಅನ್ ಲಿಮಿಟೆಡ್’ (ಅಸೀಮ ಸಕಾರಾತ್ಮಕತೆ) ಕಾರ್ಯಕ್ರಮದಲ್ಲಿ ಮಾತಾಡುತ್ತ ಹೇಳಿರುವುದಾಗಿ ವರದಿಯಾಗಿದೆ(ಮೇ 15). ನಿರಾಕರಣೆಯ ನಿಲುವು ಬೇಡ ಎಂದೂ ಅವರು ಹೇಳಿದ್ದಾರಂತೆ.
ಹೀಗಿರುವಾಗ, ಇಲ್ಲಿ ನಕಾರಾತ್ಮಕತೆ ಇರುವುದು ಮಂತ್ರಿ/ಶಾಸಕರುಗಳ ಕೋಪ-ತಾಪಗಳಲ್ಲೋ, ಅಥವ ಕಾರ್ಯಾಂಗದ ಹೊಣೆಗಾರಿಕೆಯತ್ತ ಸಾಮಾನ್ಯ ನಾಗರಿಕರ ಪರವಾಗಿ ಗಮನ ಸೆಳೆದ ನ್ಯಾಯಾಂಗದ ಆದೇಶಗಳಲ್ಲೋ ಎಂಬ ಪ್ರಶ್ನೆಯನ್ನು ಸಾಮಾನ್ಯ ನಾಗರಿಕರು ಕೇಳುತ್ತಿದ್ದಾರೆ.
***
ಈ ವೇಳೆಗಾಗಲೇ ನೆಗೆಟಿವ್-ಪಾಸಿಟಿವ್ ಚರ್ಚೆಯ ನಡುವೆ ಎರಡನೇ ಅಲೆಯ ಕರಾಳ ಸ್ವರೂಪದ ಸುದ್ದಿ ಅಪ್ಪಳಿಸಿದೆ.
“ನಿಜವಾದ ಕೋವಿಡ್ ಮಾಹಿತಿ ಗಂಗೆಯಲ್ಲಿ ತೇಲಲಾರಂಭಿಸಿದೆ!”
(ಅಲೋಕ್ ನಿರಂತರ್/ಫೇಸ್‍ಬುಕ್)
***
ಹೌದು, ಗಂಗೆಯಲ್ಲಿಯೂ ತೇಲಿಬಂದವು ನೂರಾರು ‘ನೆಗೆಟಿವ್’ ಕತೆ(ಗಳು)!
“ನಾನೊಂದು ಸಕಾರಾತ್ಮಕ ಕತೆ ಹೇಳಲೇ?”
(ಸತೀಶ ಆಚಾರ್ಯ/ ಫೇಸ್‍ಬುಕ್)
***
(ದಿನೇಶ್ ಕುಕ್ಕುಜಡ್ಕ/ಫೇಸ್‍ಬುಕ್)
***
(ಪಂಜು ಗಂಗೊಳ್ಳಿ/ ಫೇಸ್‍ಬುಕ್)
“2014 ರ ಚುನಾವಣೆಯಲ್ಲಿ ನಮ್ಮ ಮೋದೀಜಿ ವಾರಾಣಾಸಿಯಲ್ಲಿ ‘ಗಂಗಾ ಮಾತೆ ನನ್ನನ್ನು ಇಲ್ಲಿಗೆ ಕರೆಸಿದ್ದಾಳೆ’ ಎಂದು ಗಂಗಾ ನದಿಯ ನೀರಲ್ಲಿ ರೈಲು ಬಿಟ್ಟಾಗ, ನಿತೀಶ್ ಕುಮಾರ್ ‘ಗಂಗಾ ಮಾತೆ ಕಾಣೆಯಾದ ತನ್ನ ಮಗನನ್ನು ಹುಡುಕುತ್ತಿದ್ದಾಳೆ’ ಎಂದು ಗೇಲಿ ಮಾಡಿದ್ದರು. ಕೋವಿಡ್ ಮೊದಲ ಅಲೆ ಅಪ್ಪಳಿಸಿದಾಗ ಬಾಲ್ಕನಿಯಲ್ಲಿ ನಿಂತು ತಾಟು ತಟ್ಟೆ ಬಾರಿಸಿ, ಬಂಗಾಳ ಚುನಾವಣೆಯ ನಂತರ, ಕೋವಿಡ್ ನ ಈಗಿನ ಎರಡನೇ ಅಲೆಯ ಹೊತ್ತಿಗೆ ಕಾಣೆಯಾಗಿರುವ ಗಂಗಾಪುತ್ರನನ್ನು ಈಗ ಇಡೀ ದೇಶವೇ ಹುಡುಕುವಂತಾಯಿತಲ್ಲ, ಛೇ!” ಎಂದು ಪಂಜು ಗಂಗೊಳ್ಳಿಯವರು ತಮ್ಮ ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳುತ್ತಾರೆ.
***
ಈಗ ಗಂಗಾತೀರಕ್ಕೆ ಹೋಗಬೇಕೆಂದಿದ್ದರೆ ಕಣ್ಣುಪಟ್ಟಿಯೂ ಇರಲಿ….
ಮಾಸ್ಕ್ ಅಂತೂ ಧರಿಸಲೇ ಬೇಕು, ಕಣ್ಣುಪಟ್ಟಿಯನ್ನೂ ಧರಿಸಿದರೆ ಇನ್ನೂ ಒಳ್ಳೆಯದು
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್ ಪ್ರೆಸ್)
***
ಕೋವಿಡ್ ಎರಡನೇ ಅಲೆಯನ್ನು ಸಮರೋಪಾದಿಯಲ್ಲಿ ಎದುರಿಸಲಾಗುತ್ತದೆ ಎಂದು ಈಗ ಸ್ವತಃ ಪ್ರಧಾನ ಮಂತ್ರಿಗಳೇ ಹೇಳಿದ್ದಾರೆ. ಜತೆಗೆ ‘ನೂರು ವರ್ಷಗಳ ನಂತರ ಒಂದು ಮಹಾಮಾರಿ ಜಗತ್ತನ್ನು ಪ್ರತಿ ಹೆಜ್ಜೆಯಲ್ಲಿ ಪರೀಕ್ಷಿಸುತ್ತಿದೆ. ನಮ್ಮ ಎದುರು ಒಂದು ಅದೃಶ್ಯ ಶತ್ರು ಇದೆ” ಎಂದೂ ಹೇಳಿದ್ದಾರೆ. (ಅರೆ! ಎರಡು ವಾರಗಳ ಹಿಂದೆಯಷ್ಟೇ, ಎರಡನೇ ಅಲೆ ಆಗಲೇ ಅಪ್ಪಳಿಸಲಾರಂಬಿಸಿದ್ದಾಗ, ಇವರಿಗೆ ಕಾಣಿಸುತ್ತಿದ್ದುದು ಒಂದು ರ‍್ಯಾಲಿಯಲ್ಲಿ ಹಿಂದೆಂದೂ ತಾನು ನೋಡಿರದಷ್ಟು ಅಪಾರ ಜನಸಂದಣಿ ತಾನೇ ಎಂದು ಒಬ್ಬರು ಟಿಪ್ಪಣಿ ಮಾಡಿದ್ದಾರೆ!)
ಪ್ರಾಣವಾಯು- ಆಸ್ಪತ್ರೆ ಹಾಸಿಗೆ- ಔಷಧಿ
“ಶತ್ರುವೇನೋ ಅದೃಶ್ಯ, ಆದರೆ ಶತ್ರುವಿನಿಂದ ಪೀಡಿತರಾದವರಂತೂ ಕಾಣುತ್ತಿರಬಹುದಲ್ಲವೇ?”
(ಕೀರ್ತಿಶ್ ಭಟ್, ಬಿಬಿಸಿ ನ್ಯೂಸ್ ಹಿಂದಿ)
***
ಹೌದು, ಆದ್ದರಿಂದಲೇ ‘ಪಾಸಿಟಿವಿಟಿ’ಯ ಮುಖವಾಡ …..
……ಮಾಸ್ಕ್ ಧರಿಸಿ ! ………………ಮಾಸ್ಕ್ ಧರಿಸಿ!
…………………ಒಂದು ಮಾಸ್ಕ್ ….. …….ಧರಿಸಿ!
(ಸತೀಶ ಆಚಾರ್ಯ/ ಫೇಸ್ ಬುಕ್)