ಬೆಂಗಳೂರಿನಲ್ಲಿ ನಿರುದ್ಯೋಗ ಸಮಸ್ಯೆ: 2 ವರ್ಷಗಳಿಂದ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಟೆಕಿ

ಬೆಂಗಳೂರು: ನಗರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದೂ, ಇಲ್ಲಿ ಟೆಕ್ ಪದವೀಧರರೊಬ್ಬರು ಉದ್ಯೋಗ ಹುಡುಕಾಟದಲ್ಲಿ ಎದುರಿಸುತ್ತಿರುವ ಹತಾಶೆಯನ್ನು ಬಿಚ್ಚಿಟ್ಟಿದ್ದು ಸದ್ಯ ಇದು ವೈರಲ್ ಸುದ್ದಿಯಾಗಿಬಿಟ್ಟಿದೆ. ಇದರ ಬಗ್ಗೆ ಬೆಳಕು ಚೆಲ್ಲುವ ಯುವಕನ ಮನವಿ ಕರುಳ್ ಚುರ್ ಎನ್ನುವಂತೆ ಮಾಡುತ್ತದೆ. ನಿರುದ್ಯೋಗ

ಈ ಯುವ ಸಾಫ್ಟ್‌ವೇರ್ ಎಂಜಿನಿಯರ್ 2023 ರಲ್ಲಿ ಪದವಿ ಪಡೆದಿದ್ದೂ, ಅವರು ಎರಡು ವರ್ಷಗಳಿಂದ ಸೂಕ್ತ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದಾರೆ. ಅವರ ಹೃದಯ ವಿದ್ರಾವಕ ಮನವಿ, ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಉದ್ಯೋಗವನ್ನು ಪಡೆಯಲಾಗದೆ ಒದ್ದಾಡುತ್ತಿರುವ ಅವರ ನೋವಿನ ಪರಿಸ್ಥಿತಿ ಇಲ್ಲಿ ರಿವೀಲ್ ಆಗಿದೆ.

ಇದನ್ನೂ ಓದಿ: ಊರೊಂದು ಬಸ್ ನಿಲ್ದಾಣ ಮೂರು

ತಮ್ಮ ಕೌಶಲ್ಯಗಳನ್ನು ಸಾಬೀತುಪಡಿಸಲು ಉಚಿತವಾಗಿ ಕೆಲಸ ಮಾಡಲು ಸಹ ಸಿದ್ಧನಿದ್ದೇನೆ ಎಂದ ಯುವಕ ತಮ್ಮ ಸಿವಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಇದು ಅವಕಾಶಕ್ಕಾಗಿ ಹಂಬಲಿಸುವ ಅವರ ಹತಾಶೆಯನ್ನು ಎತ್ತಿ ತೋರಿಸಿದೆ.

ನನ್ನ ರೆಸ್ಯೂಮ್ ಅನ್ನು ಸುಟ್ಟು ಹಾಕಿ, ಆದರೆ ದಯವಿಟ್ಟು ಸಹಾಯ ಮಾಡಿ ಎಂದು ಬರೆದಿರುವ ಯುವಕ ನಿರುದ್ಯೋಗದಿಂದ ಬಳಲುತ್ತಿರುವ ದೇಶದ ಯುವಕರಿಗೆ ಧ್ವನಿಯಾಗಿದ್ದಾನೆ. ಇದು ಓದುಗರ ಹೃದಯವನ್ನು ಮುಟ್ಟುವಂತಿದೆ. 23 ವರ್ಷದ ಈ ಪದವೀಧರರು ರಿಮೋಟ್ ಆಗಿ ಕೆಲಸ ಮಾಡಲು ಸಿದ್ಧರಿದ್ದಾರೆ, ಕೇವಲ ಒಂದು ಅವಕಾಶಕ್ಕಾಗಿ, ಅನುಭವವನ್ನು ಪಡೆಯಲು ಒಂದು ಅವಕಾಶಕ್ಕಾಗಿ ಹಂಬಲಿಸುವ ರೀತಿ ಎಂಥವರನ್ನೂ ಭಾವುಕರಾಗಿಸುತ್ತದೆ.

Burn my resume but please help. Desperate & Ready to Work for Free Remotely – 23′ Grad Looking for a Job ASAP
http://byu/employed-un inIndianWorkplace

ಜಾವಾ, ಪೈಥಾನ್, ಡೆವೊಪ್ಸ್ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಅವರು ತಮ್ಮ ಕೌಶಲ್ಯಗಳನ್ನು ಪಟ್ಟಿ ಮಾಡಿ ಬರೆದಿದ್ದಾರೆ. ಅವರ ಪ್ರತಿಭೆಯನ್ನು ಎತ್ತಿ ತೋರಿಸಿದ್ದಾರೆ. ಹೀಗಿದ್ದರೂ ಅವರ ಎರಡು ಅಲ್ಪಾವಧಿಯ ಇಂಟರ್ನ್‌ಶಿಪ್‌ಗಳು ಹೊರತುಪಡಿಸಿ ಜಾಬ್ ಮಾರ್ಕೆಟ್​​ನಲ್ಲಿ ಯಾವುದೇ ಆಫರ್ ಸಿಗದೆ ಪರದಾಡಿದ್ದಾರೆ.

ಕಾಲೇಜಿನಿಂದ ಪದವಿ ಪಡೆದ ನಂತರ ಫುಲ್ ಟೈಮ್ ಜಾಬ್ ಸಿಗದೆ ಪರದಾಡುತ್ತಿರುವುದಾಗಿ ಬೆಂಗಳೂರಿನ ವ್ಯಕ್ತಿ ವಿವರಿಸಿದರು. ಹೀಗಿದ್ದರೂ ಅವರು ಎರಡು ಕಂಪನಿಗಳಲ್ಲಿ ಇಂಟರ್ನ್‌ಶಿಪ್ ನಲ್ಲಿ ಕೆಲಸ ಮಾಡಿದ್ದಾರೆ. ಎರಡೂ ಇಂಟರ್ನ್‌ಶಿಪ್‌ಗಳು ತಲಾ ಒಂದು ತಿಂಗಳು ನಡೆದವು ಎಂದಿದ್ದಾರೆ.

ಇಂಟರ್ನ್‌ಶಿಪ್‌ಗಳು, ಫ್ರೀಲ್ಯಾನ್ಸಿಂಗ್ ಅಥವಾ ಓಪನ್-ಸೋರ್ಸ್ ಪ್ರಾಜೆಕ್ಟ್​​ನಲ್ಲೂ ಸಹ ಯಾವುದೇ ಅವಕಾಶ ಇದ್ದರೆ ತಿಳಿಸಿ ಎಂದು ಅವರು ಮನವಿ ಮಾಡಿದ್ದಾರೆ. ಅವರ ಮನವಿಗೆ ಪ್ರತಿಕ್ರಿಯೆಯಾಗಿ ಸಹ ರೆಡ್ಡಿಟ್ ಬಳಕೆದಾರರು ಬೆಂಬಲ ಮತ್ತು ಸಲಹೆಯನ್ನು ನೀಡಿದರುಕೆಲವರು ತಮ್ಮ ಸಿವಿಯನ್ನು ಪರಿಷ್ಕರಿಸಲು ಮತ್ತು ಸಂಭಾವ್ಯ ಉದ್ಯೋಗದಾತರನ್ನು ಸಂಪರ್ಕಿಸಲು ಮಾರ್ಗದರ್ಶನ ನೀಡಿದರು. ಜಾಗತಿಕ ಆರ್ಥಿಕ ಅನಿಶ್ಚಿತತೆ ಯುವಕರ ಉದ್ಯೋಗದ ಮೇಲೆ ಪರಿಣಾಮ ಬೀರುತ್ತಿದೆ.

ಈ ಪದವೀಧನ ನೋವಿನ ಕಥೆಯು ಟಫ್​ ಜಾಬ್ ಮಾರ್ಕೆಟ್​ನಲ್ಲಿ ಕೆಲಸ ಹುಡುಕುತ್ತಿರುವ ಅನೇಕ ಯುವ ಪದವೀಧರರ ಹೃದಯ ವಿದ್ರಾವಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಇದು ಜಾಗತಿಕ ಆರ್ಥಿಕ ಪ್ರವೃತ್ತಿಗಳು ಮತ್ತು ಯುವಕರ ಮೇಲೆ ಅವುಗಳ ಪ್ರಭಾವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಇದನ್ನೂ ನೋಡಿ: ತನುವಿನೊಳಗೆ ಅನುದಿನವಿದ್ದುJanashakthi Media

Donate Janashakthi Media

Leave a Reply

Your email address will not be published. Required fields are marked *