ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬ ಅಪಾರ್ಟ್ಮೆಂಟ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ
ಬೆಂಗಳೂರಿನ ಕೂಡ್ಲು ಗೇಟ್ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸವಿದ್ದ ಮಾಯಾಂಕ್ ರಜನಿ ಆತ್ಮಹತ್ಯೆಗೆ ಶರಣಾದ ಯುವಕ.
ಇದನ್ನು ಓದಿ:ಮಂಗಳೂರು ಜೈಲಿನಲ್ಲಿ 40ಕ್ಕೂ ಹೆಚ್ಚು ಕೈದಿಗಳಿಗೆ ಫುಡ್ ಪಾಯಿಸನ್: ವಾಂತಿ-ಭೇದಿ, ಓರ್ವನ ಸ್ಥಿತಿ ಗಂಭೀರ
ನಗರದಲ್ಲಿ ಸ್ಟಾರ್ಟಪ್ ಕಂಪನಿ ಶುರು ಮಾಡಿದ ಮಾಯಾಂಕ್ ಗೆಳತಿ ಜೊತೆ ಅಪಾರ್ಟ್ಮೆಂಟ್ನಲ್ಲಿ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ ನಲ್ಲಿದ್ದ. ಆದರೆ ಏಕಾಏಕಿ ಇಂದು ಬೆಳಗ್ಗೆ ತನ್ನ ಅಪಾರ್ಟ್‌ಮೆಂಟ್‌ನ 12ನೇ ಮಾಡಿಯಿಂದ ಜಿಗಿದು ಟೆಕ್ಕಿ ಮಾಯಾಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಘಟನಾಸ್ಥಳಕ್ಕೆ ಭೇಟಿ ನೀಡಿರುವ ಕೂಡ್ಲುಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈತನ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
ಇದನ್ನು ಓದಿ:ಹಾವೇರಿ| ಬಾಂಬ್ ನಿಷ್ಕ್ರಿಯ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ವಾನ ಮೃತ