ಜೈಪುರ| 2,000 ಕೋಟಿ ರೂ. ಗೂ ಹೆಚ್ಚು ಸೈಬರ್ ವಂಚನೆ ನಡೆಸಿದ ತಂಡ ಬಂಧನ

Please follow and like us:
ಜೈಪುರ: 2,000 ಕೋಟಿ ರೂ. ಗೂ ಹೆಚ್ಚು ಸೈಬರ್ ವಂಚನೆ ನಡೆಸಿದ ತಂಡವೊಂದರ ಕಿಂಗ್‌ಪಿನ್‌ನನ್ನು ಬಂಧಿಸುವ ಮೂಲಕ ಭಾರಿ ವಂಚನೆ ಭೇದಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ಜೈಪುರ

ಆರೋಪಿಗಳ ವಿರುದ್ಧ ದೇಶಾದ್ಯಂತ ಸೈಬರ್ ವಂಚನೆಯ ದೂರುಗಳಿವೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಂಗಾನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಯಾದವ್ ಮಾತನಾಡಿ, ಬಂಧಿತ ಅಜಯ್ ಆರ್ಯ ಮತ್ತು ಆತನ ಸಹಚರರು ಸಾವಿರಾರು ಜನರಿಗೆ ಸುಮಾರು 2,000 ಕೋಟಿ ರೂಪಾಯಿಗಳ ಸೈಬರ್ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕದ ನಿವಾಸಿ ಕಾಂತಪ್ಪ ಬಾಬು ಚವ್ಹಾಣ್ ಅವರು ಮಂಗಳವಾರ ಪುರಾಣಿ ಅಬಾದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ|‌ 15 ವರ್ಷದ ಬಾಲಕಿಯ ವಿವಾಹ ಮಾಡಿಸಿದ ಶಿಕ್ಷಕ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

ಕರ್ನಾಟಕದ ಕ್ಯಾಪ್ಮೋರ್‌ಎಫ್‌ಎಕ್ಸ್ ಕಂಪನಿಯಲ್ಲಿ ಲಕ್ಷಗಟ್ಟಲೆ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ವಂಚಕರು ಶ್ರೀಗಂಗಾನಗರಕ್ಕೆ ಪಲಾಯನಗೈದಿದ್ದರು ಎಂದು ತಿಳಿಸಿದ್ದಾರೆ.

ಪೊಲೀಸರು ಆರ್ಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ಶೋಧದ ವೇಳೆ 10 ಲಕ್ಷ ರೂಪಾಯಿ ನಗದು, ಮೂರು ಸಿಪಿಯುಗಳು, ಆರು ಮೊಬೈಲ್ ಫೋನ್‌ಗಳು, ಎಂಟು ಎಟಿಎಂ ಕಾರ್ಡ್‌ಗಳು, ಮೂರು ಪ್ಯಾನ್ ಕಾರ್ಡ್‌ಗಳು, ಸುಮಾರು 85 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಕಾರು ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ಇತರ ದಾಖಲೆಗಳು ಪತ್ತೆಯಾಗಿವೆ.

ಅಜಯ್ ಆರ್ಯ, ದೀಪಕ್ ಆರ್ಯ, ಲಜಪತ್ ಆರ್ಯ, ಸೌರಭ್ ಚಾವ್ಲಾ, ಅವರ ಪತ್ನಿ ಸಲೋನಿ ಚಾವ್ಲಾ, ಕರಮ್‌ಜಿತ್ ಸಿಂಗ್, ಬಲ್ಜಿತ್ ಸಿಂಗ್, ರಾಜೇಂದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು 2022 ರಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಟೆಕ್ಬಲ್ ಟೆಕ್ ಎಂಬ ಕಂಪನಿಯನ್ನು ತೆರೆದು ಜನರಿಗೆ ಸೈಬರ್ ತರಬೇತಿ ನೀಡಲು ಪ್ರಾರಂಭಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ನೋಡಿ: LIVE: ಸಾಂಸ್ಕೃತಿಕ ಸಂವಿಧಾನ ಪರಿಷೆ

Please follow and like us:
Donate Janashakthi Media

Leave a Reply

Your email address will not be published. Required fields are marked *