ಅಪ್ರಾಪ್ತ ಬಾಲಕಿ ಅತ್ಯಾಚಾರ ಎಸಗಿರುವಂತಹ ಶಿಕ್ಷಕನಿಗೆ ಕಠಿಣ ಶಿಕ್ಷೆ ಆಗಬೇಕು: ಡಾ.ಮೀನಾಕ್ಷಿ ಬಾಳಿ

ಕಲಬುರಗಿ : ಯಡ್ರಾಮಿಯಲ್ಲಿ  ನಡೆದಿರುವಂತಹ ಅತ್ಯಾಚಾರ ಪ್ರಕರಣವು ಖಂಡನಾರ್ಹ. ಅಪ್ರಾಪ್ತ ಬಾಲಕಿ ಅತ್ಯಾಚಾರ ಎಸಗಿರುವಂತಹ ಶಿಕ್ಷಕನಿಗೆ ಕಠಿಣ ಶಿಕ್ಷೆ ಆಗಬೇಕು. ಆದಾಗ್ಯೂ, ಅತ್ಯಾಚಾರ ಪ್ರಕರಣವನ್ನೇ ಕೋಮುವಾದಿ ಶಕ್ತಿಗಳು ಕೋಮುವಾದಕ್ಕೆ ಬಳಸಿಕೊಂಡಿದ್ದು ಸರಿಯಲ್ಲ ಎಂದು ಸೌಹಾರ್ದ ಕರ್ನಾಟಕ ಸಂಚಾಲಕಿ ಡಾ.ಮೀನಾಕ್ಷಿ ಬಾಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯ ಪ್ರಕರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಜನವಾದಿ ಮಹಿಳಾ ಸಂಘಟನೆಯವರು ಯಡ್ರಾಮಿಗೆ ಹೋಗಿ ಸಂತ್ರಸ್ತ ಬಾಲಕಿಗೆ ಹಾಗೂ ಕುಟುಂಬಕ್ಕೆ ಸಾಂತ್ವನ, ಧೈರ್ಯ ಹಾಗೂ ಪರಿಹಾರದ ಕುರಿತು ಮಾತನಾಡಲು ಬಯಸಿದೆವು. ಅದಾಗಲೇ ಇಡೀ ಪ್ರಕರಣವನ್ನು ಒಂದು ಕೋಮಿನ ವಿರುದ್ಧ ಕೋಮುವಾದಿಗಳು ತೆಗೆದುಕೊಂಡಿದ್ದರಿಂದ ಸ್ಥಳಕ್ಕೆ ನೀವು ಬರಬೇಡಿ ಎಂದು ಸ್ಥಳೀಯ ಸಂಘಟಕರು ನಮಗೆ ಹೇಳಿದರು.

ಇದನ್ನೂ ಓದಿ : ಕಲಬುರಗಿ | ಸಿಗರೇಟ್ ಬಾಕ್ಸ್ ಕದ್ದ ಆರೋಪ: ದಲಿತ ಯುವಕನನ್ನು ಥಳಿಸಿ ಹತ್ಯೆ

ಹಾಗಾಗಿ ನಾವು ಅಲ್ಲಿಗೆ ಹೋಗಲಿಲ್ಲ ಎಂದು ಸ್ಪಷ್ಟಪಡಿಸಿದರು. ಆರೋಪಿಗಳು ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ಅವರನ್ನು ಆರೋಪಿಗಳೆಂದು ನೋಡಬೇಕೇ ಹೊರತು, ಆರೋಪಿಯ ಧರ್ಮ, ಜಾತಿಯನ್ನು ಹಿಡಿದು, ಆ ಧರ್ಮ ಹಾಗೂ ಜಾತಿಯ ವಿರುದ್ಧ ದೂರುವುದು ಸರಿಯಲ್ಲ. ಕೋಮುವಾದದ ಬದಲು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಂತಹ ಕಾರ್ಯವನ್ನು ಮಾಡುವಲ್ಲಿ ಕೋಮುವಾದಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಕೆ ಹುಡಗಿ, ಕಾಶಿನಾಥ್ ಅಂಬಲಗೆ, ಧನರಾಜ ತಾಂಬೋಲೆ, ಸುಧಾಮ್ ಧನ್ನಿ, ಲವಿತ್ರ ವಸ್ತ್ರದ, ಪ್ರಭು ಖಾನಾಪುರೆ, ಮಲ್ಲಿಕಾರ್ಜುನ್ ವಡನಕೇರಿ, ಮಹಾಂತೇಶ ಕಲಬುರಗಿ ಸೇರಿದಂತೆ ಮತ್ತಿತರರು ಇದ್ದರು.

ಇದನ್ನೂ ಓದಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಡ: ಹಿಂದುಳಿದ ಜಾತಿಗಳ ಒಕ್ಕೂಟ ಮನವಿ Janashakthi Media

Donate Janashakthi Media

Leave a Reply

Your email address will not be published. Required fields are marked *