ಬೆಂಗಳೂರು: ತರಬೇತಿ ನಿರತ 96 ಸಾರಿಗೆ ನೌಕರರನ್ನ ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ. ಸಾರಿಗೆ ನೌಕರರ ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿದ್ದ ತರಬೇತಿ ನೌಕರರನ್ನ ಮಾತ್ರ ವಜಾ ಮಾಡಲಾಗಿದೆ. ರಜೆಗೆ ಕಾರಣ ನೀಡಿ ಇಂದೇ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ನೋಟಿಸ್ ನೀಡಿತ್ತು. ನೋಟಿಸ್ ನೀಡಿದ್ದರೂ ಹಾಜರಾಗದ ನೌಕರರನ್ನ ವಜಾ ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ತರಬೇತಿಯಲ್ಲಿರುವ ಉಳಿದ ಸಿಬ್ಬಂದಿ ಕೂಡಲೇ ಕರ್ತವ್ಯಕ್ಕೆ ಹಾಜರಾಗದೆ ಇದ್ದರೆ, ನಾಳೆ ಅವರನ್ನು ಕೆಲಸದಿಂದ ವಜಾ ಮಾಡಲಾಗುತ್ತೆ. ಇನ್ನು 1400 ತರಬೇತಿ ಸಿಬ್ಬಂದಿ ಇದ್ದಾರೆ. ಸಾರಿಗೆ ನಿಗಮಗಳ ರೂಲ್ಸ್ ಪ್ರಕಾರ ತರಬೇತಿ ಸಿಬ್ಬಂದಿ ಯಾವುದೇ ಮುಷ್ಕರಗಳಲ್ಲಿ ಭಾಗವಹಿಸುವುದಾಗಲಿ, ಸೂಕ್ತ ಕಾರಣಗಳಿಲ್ಲದೇ ಕರ್ತವ್ಯಕ್ಕೆ ಗೈರು ಹಾಜರಾಗುವುದಾಗಲೀ ಒಪ್ಪಂದದ ಪ್ರಕಾರ ತಪ್ಪು. ಸಾರಿಗೆ ನಿಗಮಗಳು ತನ್ನ ಅಧಿಕಾರ ಬಳಸಿಕೊಂಡು ಅವರನ್ನ ವಜಾ ಮಾಡಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಶೇ. 10 ರಷ್ಟು ವೇತನ ಪರಿಷ್ಕರಣೆಗೆ ಸಿದ್ದ, ಮುಷ್ಕರ ಕೈ ಬಿಡಿ – ಅಂಜುಂ ಪರ್ವೇಜ್ ಮನವಿ
ಗೈರು ಹಾಜರಿ, ಅಪರಾಧ ಪ್ರಕರಣಗಳು ಇರುವಂತಹ ಸಿಬ್ಬಂದಿಯನ್ನ ಇಂದು ವಜಾ ಮಾಡಲಾಗಿದೆ. ಮುಷ್ಕರ ಬಿಡುವವರೆಗೂ ದಿನಾ ಹಂತ ಹಂತವಾಗಿ ವಜಾ ಮಾಡಲಾಗುತ್ತದೆ. ಮೊದಲು ತರಬೇತಿಯಲ್ಲಿರುವ 1.400 ಸಿಬ್ಬಂದಿಯನ್ನ ವಜಾ ಮಾಡಲಾಗುತ್ತದೆ. ನಂತರ ಪ್ರೊಬೆಷನ್ನಲ್ಲಿ ಇರುವ 1 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ವಜಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.