ವಿನಯ್ ಕುಲಕರ್ಣಿ ಮೇಲೆ ದಾಖಲಾಗಿದ್ದ ಸಾಕ್ಷಿ ನಾಶ ಪ್ರಕರಣ ರದ್ದು: ಧಾರವಾಡ ಹೈಕೋರ್ಟ್‌

ಧಾರವಾಡ: ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಿದ್ದಾರೆ ಎಂಬ ಆರೋಪದಡಿ 2020ರ ಡಿ.4 ರಂದು ಧಾರವಾಡದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿಯಲ್ಲಿ ಪಿಸಿಆರ್ ಸಂಖ್ಯೆ 337ರ ಅಡಿ ಶಾಸಕ ವಿನಯ್ ಕುಲಕರ್ಣಿ ಮೇಲೆ ದಾಖಲಾಗಿದ್ದ ಸಾಕ್ಷಿ ನಾಶ ಪ್ರಕರಣವನ್ನು ಧಾರವಾಡ ಹೈಕೋರ್ಟ್‌ ರದ್ದುಗೊಳಿಸಿದೆ.

ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ವಿನಯ್ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಅವರ ಮೇಲೆ ಸಾಕ್ಷ್ಯ ನಾಶ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವನ್ನು ಧಾರವಾಡ ನ್ಯಾಯಾಲಯದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿನಯ್ ಕುಲಕರ್ಣಿ ಅವರು ವರ್ಗಾವಣೆ ಮಾಡಿಸಿಕೊಂಡಿದ್ದರು.

ಇದನ್ನೂ ಓದಿ: ಬೆಂಗಳೂರು| ಮೈಕ್ರೋ ಪೈನಾನ್ಸ್ ನಿಯಂತ್ರಣ ಕಾನೂನು ಜಾರಿ: ಸಿಎಂಗೆ ಹಕ್ಕೋತ್ತಾಯ ಪತ್ರ ಸಲ್ಲಿಕೆ

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಯುತ್ತಿರುವಾಗಲೇ ತಮ್ಮ ಮೇಲೆ ದಾಖಲಾಗಿದ್ದ ಸಾಕ್ಷ್ಯ ನಾಶ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ವಿನಯ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ, ವಿನಯ್ ಕುಲಕರ್ಣಿ ಅವರ ಮೇಲಿದ್ದ ಸಾಕ್ಷ್ಯ ನಾಶ ಪ್ರಕರಣವನ್ನು ರದ್ದುಗೊಳಿಸಿದೆ.

ಇದನ್ನೂ ನೋಡಿ: ಸುಣ್ಣಕಲ್ಲಬಿದರಿ : ಹಾಸ್ಟೆಲ್ ಅವ್ಯವಸ್ಥೆ- ವಿದ್ಯಾರ್ಥಿಗಳ ಪರದಾಟ Janashakthi Media

Donate Janashakthi Media

Leave a Reply

Your email address will not be published. Required fields are marked *