ತಮಿಳುನಾಡು,ಫೆ.13 : ತಮಿಳುನಾಡಿನ ಶಿವಗಾಸಿಯ ವಿರುದುನಗರದಲ್ಲಿ ಪಟಾಕಿ ಕಾರ್ಖಾನೆಗೆ ಬೆಂಕಿ ತಗುಲಿ 18 ಮಂದಿ ಸಾವನ್ನಪ್ಪಿದ್ದಾರೆ. 36 ಮಂದಿಗೂ ಅಧಿಕ ಕಾರ್ಮೀಕರು ಗಾಯಗೊಂಡಿದ್ದಾರೆ, ಗಾಯಾಳುಗಳನ್ನ ಶಿವಗಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 1:00 ಗಂಟೆ ಸುಮಾರಿಗೆ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದು, ಬೆಂಕಿಯನ್ನು ನಂದಿಸಲು ವಿವಿಧ ಭಾಗಗಳಿಂದ ಬಂದ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿಯವರು ಹರಸಾಹಸಪಡುತ್ತಿದ್ದಾರೆ. ಪಟಾಕಿ ತಯಾರಿಸಲು ಕೆಲವು ರಾಸಾಯನಿಕಗಳನ್ನು ಬೆರೆಸುತ್ತಿರುವಾಗ ಈ ಘಟನೆ ನಡೆದಿದೆ, ಇದರಲ್ಲಿ ನಾಲ್ಕು ಕ್ರ್ಯಾಕರ್ ತಯಾರಿಸುವ ಶೆಡ್‌ಗಳು ನಾಶವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಒ. ಪಳನಿಸ್ವಾಮಿ, ಪ್ರಧಾನ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ. ಗಾಯಗಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸಿ.ಎಂ. ಒ. ಪಳನಿಸ್ವಾಮಿ ತಿಳಿಸಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದ ಅವರಿಗೆ ರಾಜ್ಯದಿಂದ 3 ಲಕ್ಷ ರೂಪಾಯಿ ಕೇಂದ್ರದಿಂದ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ ರಾಜ್ಯದಿಂದ 50 ಸಾವಿರ ರೂಪಾಯಿ ಕೇಂದ್ರ 1 ಲಕ್ಷರೂಪಾಯಿ ಪರಿಹಾರ ನೀಡಲಾಗುವುದು ಎಂದು ಸಿಎಂ. ಹೇಳಿದರು.