ತಮಿಳುನಾಡು ಸರ್ಕಾರ 48.95 ಕೋಟಿ ಶಿಕ್ಷಣ ಸಾಲ ಮನ್ನಾ ಮಾಡುವ ಆದೇಶವನ್ನು ಹೊರಡಿಸಿದೆ.
ಈ ಮೂಲಕ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ 48.95 ಕೋಟಿ ರೂ.ಗಳ ಶಿಕ್ಷಣ ಸಾಲವನ್ನು ಮನ್ನಾ ಮಾಡಿದ್ದು, ಶಿಕ್ಷಣ ಸಾಲ ಪಡೆದವರಿಗೆ ಹೇಗೆ ಅನ್ವಯವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.
ತಮಿಳುನಾಡಿನ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳ ಶಿಕ್ಷಣ ಸಾಲವನ್ನು ಮನ್ನಾ ಮಾಡಲು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಬುಡಕಟ್ಟು, ಆದಿ ದ್ರಾವಿಡ ಮತ್ತು ಕ್ರಿಶ್ಚಿಯನ್ ಆದಿ ದ್ರಾವಿಡ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾದ ಸುಮಾರು 48.95 ಕೋಟಿ ರೂ.ಗಳ ಶಿಕ್ಷಣ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ : ಕಣ್ವ ಅಣೆಕಟ್ಟು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ: ಜನಪ್ರತಿನಿಧಿಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚೆ
ಅಧಿಸೂಚನೆಯಲ್ಲಿ ಏನಿದೆ?
ತಮಿಳುನಾಡು ಸರ್ಕಾರ ಶಿಕ್ಷಣ ಸಾಲವನ್ನು ರದ್ದುಗೊಳಿಸುವುದಾಗಿ ಘೋಷಿಸಿದೆ. ತಮಿಳುನಾಡು ಸರ್ಕಾರ ಬಡ ಮತ್ತು ನಿರ್ಗತಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯ ಮೂಲಕ ಬಡ ವಿದ್ಯಾರ್ಥಿಗಳು ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಪಡೆದು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಶಿಕ್ಷಣ ಸಾಲವನ್ನು ಪಡೆಯುವ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿದಾಗ ಈ ಸಾಲವನ್ನು ಮರುಪಾವತಿಸಲು ಸರ್ಕಾರವು ಅವಕಾಶವನ್ನು ಒದಗಿಸುತ್ತದೆ. ಸರ್ಕಾರದ ಈ ಯೋಜನೆಯ ಮೂಲಕ ಒಂದು ಕುಟುಂಬದಲ್ಲಿ ಎರಡು ಮಕ್ಕಳಿಗೆ ಶಿಕ್ಷಣ ಸಾಲ ಪಡೆಯಬಹುದು.
ಯಾರಿಗೆ ಶಿಕ್ಷಣ ಸಾಲ ರದ್ದು?
ತಮಿಳುನಾಡಿನಲ್ಲಿ ಬಡ ಕುಟುಂಬದ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಾಲದಿಂದ ಪ್ರಯೋಜನ ಪಡೆದಿದ್ದಾರೆ. ಈ ಪರಿಸ್ಥಿತಿಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಾಲ ರದ್ದು ಮಾಡುವುದಾಗಿ ಭರವಸೆ ನೀಡಿತ್ತು. ಇದನ್ನು ಆಧರಿಸಿ ತಮಿಳುನಾಡು ಸರ್ಕಾರ ಶಿಕ್ಷಣ ಸಾಲ ರದ್ದು ಪಡಿಸುವುದಾಗಿ ಘೋಷಿಸಿದೆ.
ಈ ನಿಟ್ಟಿನಲ್ಲಿ 1972-1973 ರಿಂದ 2022-2003 ರವರೆಗಿನ ಎಲ್ಲಾ ಕೋರ್ಸ್‌ಗಳಿಗೆ ಮತ್ತು 2003-2004 ರಿಂದ 2009 ರವರೆಗೆ ವೈದ್ಯಕೀಯ ಸಂಬಂಧಿತ ಕೋರ್ಸ್‌ಗಳಿಗೆ ಬುಡಕಟ್ಟು, ಆದಿ ದ್ರಾವಿಡ ಮತ್ತು ಕ್ರಿಶ್ಚಿಯನ್ ಆದಿ ದ್ರಾವಿಡ ವಿದ್ಯಾರ್ಥಿಗಳಿಗೆ ನೀಡಲಾದ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಸರ್ಕಾರ ಘೋಷಿಸಿದೆ.
ಈ ಕುರಿತು ಸರಕಾರ ಹೊರಡಿಸಿರುವ ಆದೇಶದಲ್ಲಿ 1972-1973ರಿಂದ 2022-2003ರವರೆಗೆ ಹಾಗೂ 2003-2004ರಿಂದ 2009-2010ರವರೆಗೆ ವೈದ್ಯಕೀಯ ಕೋರ್ಸ್‌ಗಳಿಗೆ ನೀಡಲಾಗಿದ್ದ 48.95 ಕೋಟಿ ರೂ.ಗಳ ಶಿಕ್ಷಣ ಸಾಲ ಬಾಕಿ ಉಳಿದಿದೆ. ದಾಖಲೆಗಳನ್ನು ಸಂಗ್ರಹಿಸಲು ಮತ್ತು ಸಾಲಗಾರರನ್ನು ಗುರುತಿಸಲು ಸಾಧ್ಯವಾಗದ ಕಾರಣ, ಈ ರೂ.48.95 ಶಿಕ್ಷಣ ಸಾಲವನ್ನು ಮನ್ನಾ ಮಾಡಲು ಸರ್ಕಾರ ಆದೇಶ ನೀಡಿದೆ ಎಂದು ಹೇಳಲಾಗಿದೆ.
ಸರ್ಕಾರದ ಈ ಘೋಷಣೆಯು ಆ ನಿಗದಿತ ಅವಧಿಯಲ್ಲಿ ಶಿಕ್ಷಣ ಸಾಲ ಪಡೆದವರಲ್ಲಿ ಸಂತಸ ಮೂಡಿಸುವಂತಿದೆ.