ತಮಿಳುನಾಡು ನೆರೆ | 2,000 ಕೋಟಿ ಮಧ್ಯಂತರ ಪರಿಹಾರ ಕೋರಿದ ಸಿಎಂ ಸ್ಟಾಲಿನ್

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ನೆರವು ನೀಡುವ ಸಲುವಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮಧ್ಯಂತರವಾಗಿ 2000 ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೈಚಾಂಗ್ ಚಂಡಮಾರುತದ ಕಾರಣಕ್ಕೆ ರಾಜ್ಯದಲ್ಲಿ ಭಾರಿ ಮಳೆಯಾಗಿದ್ದು ಕೋಟ್ಯಾಂತರ ರೂ.ಗಳ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ವರದಿಯಾಗಿದೆ.

ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ ಸ್ಟಾಲಿನ್, ಪ್ರವಾಹದಲ್ಲಿ ಉಂಟಾದ ಶಾಶ್ವತ ಹಾನಿಯನ್ನು ಸರಿಪಡಿಸಲು ಕೇಂದ್ರ ಸರ್ಕಾರ 12,659 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ತೂತುಕುಡಿ, ತಿರುನಲ್ವೇಲಿ, ತೆನ್ಕಾಸಿ ಮತ್ತು ಕನ್ಯಾಕುಮೈ ಸೇರಿದಂತೆ ದಕ್ಷಿಣ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಡಿಸೆಂಬರ್ 17 ಮತ್ತು ಡಿಸೆಂಬರ್ 19 ರ ನಡುವೆ ಭಾರೀ ಮಳೆಯಾಗಿದೆ. ತಮಿಳುನಾಡು

ಇದನ್ನೂ ಓದಿ: ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ ಖಾತೆಯ ಹಠಾತ್ ಸ್ಥಗಿತ : ಇನ್ನೊಂದು “ಅನ್ಯಾಯದ ಮತ್ತು ಕ್ರೂರವಾದ  ಕ್ರಮ”- ನ್ಯೂಸ್‍ ಕ್ಲಿಕ್‍

ಡಿಸೆಂಬರ್ 19 ರ ಹೊತ್ತಿಗೆ ತೂತುಕುಡಿಯಲ್ಲಿ 50 ಸೆಂ.ಮೀ ಮಳೆಯಾಗಿದ್ದರೆ, ತಿರುನಲ್ವೇಲಿಯಲ್ಲಿ 31 ಸೆಂ.ಮೀ ಮಳೆಯಾಗಿದೆ. ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆಗಳು (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ರಕ್ಷಣಾ ಪಡೆಗಳು (ಎಸ್‌ಡಿಆರ್‌ಎಫ್) ಎರಡೂ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡಲು ಇನ್ನೂ ಕಾರ್ಯನಿರ್ವಹಿಸುತ್ತಿವೆ. ತಮಿಳುನಾಡು

ತಿರುನಲ್ವೇಲಿ ಮತ್ತು ತೂತುಕುಡಿ ಎರಡೂ ಜಿಲ್ಲೆಗಳಲ್ಲಿ ಸುಮಾರು 40 ಲಕ್ಷ ಜನರು ತೊಂದರೆಗೀಡಾಗಿದ್ದಾರೆ ಮತ್ತು ಥಾಮಿರಬರಣಿ ನದಿ ಉಕ್ಕಿ ಹರಿದ ಪರಿಣಾಮ ಶ್ರೀವೈಕುಂಟಂ ಮತ್ತು ತೂತುಕುಡಿ ಪಟ್ಟಣಗಳು ಎರಡೂ ತೀವ್ರವಾಗಿ ಹಾನಿಗೊಳಗಾಗಿವೆ ಎಂದು ಜ್ಞಾಪಕ ಪತ್ರದಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಭವನ ಅಲ್ಲ, ‘ಸಸ್ಪೆಂಡ್ ಭವನ’ | ಒಟ್ಟು 141 ಸಂಸದರು ಅಮಾನತು!

“ಶಾಶ್ವತ ಹಾನಿಯ ಸಮಗ್ರ ಮೌಲ್ಯಮಾಪನವು ಸಮಯ ತೆಗೆದುಕೊಳ್ಳುತ್ತದೆಯಾದರೂ, ಜೀವನೋಪಾಯದ ಬೆಂಬಲ ಮತ್ತು ದುರಸ್ತಿ ಮತ್ತು ಭಾರಿ ಪ್ರವಾಹದಿಂದ ಜರ್ಜರಿತವಾಗಿರುವ ಸಾರ್ವಜನಿಕ ಮೂಲಸೌಕರ್ಯಗಳ ಮರುಸ್ಥಾಪನೆಗಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಹೆಚ್ಚಿಸಲು NDRF ನಿಧಿಯಿಂದ ರೂ.2,000 ಕೋಟಿಗಳ ಮಧ್ಯಂತರ ಸಹಾಯವನ್ನು ನಾವು ಕೋರುತ್ತೇವೆ” ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಧಾನಮಂತ್ರಿಯ ಜೊತೆಗಿನ ಭೇಟಿಯ ನಂತರ ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಸ್ಟಾಲಿನ್ ಅವರು “ತಮಿಳುನಾಡಿನ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ತುರ್ತು ಪರಿಸ್ಥಿತಿಯನ್ನು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದೆ. ಈ ವೇಳೆ  ರಕ್ಷಣಾ ಪ್ರಯತ್ನಗಳು ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಪುನಃಸ್ಥಾಪಿಸಲು NDRF ನಿಂದ ಹಣವನ್ನು ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದೆ. ಈ ಸವಾಲಿನ ಸಮಯದಲ್ಲಿ ತಮಿಳುನಾಡಿನ ಅಗತ್ಯತೆಗಳ ಬಗ್ಗೆ ಪಿಎಂಒಇಂಡಿಯಾ ಗಮನಹರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಜನಸಾಮಾನ್ಯರ ನಡಿಗೆ ಅಭಿವೃದ್ಧಿಯ ಕಡೆಗೆ : ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ

Donate Janashakthi Media

Leave a Reply

Your email address will not be published. Required fields are marked *