ಚೆನ್ನೈ : ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ ನಡೆಯುವ ಪ್ರವೇಶಾರ್ತಿ ಪರೀಕ್ಷೆ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ದೇಶಾದ್ಯಂತ ಒಂದೇ ಮಾನದಂಡವನ್ನು ಅನುಸರಿಸುತ್ತದೆ.
ತಮಿಳುನಾಡು ರಾಜ್ಯದ ಡಿಎಂಕೆ ಆಡಳಿತ ಪಕ್ಷ ಅನುಮೋದಿಸಿರುವ ನೀಟ್ ವಿರೋಧಿ ಮಸೂದೆಯಲ್ಲಿ ಸಂವಿಧಾನದ ನಿಯಮಗಳನುಸಾರ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದು ಮಂಡನೆಯಾಗಿ ಈಗಾಗಲೇ ಎರಡು ಬಾರಿ ರಾಜ್ಯಪಾಲರ ಬಳಿ ಅನುಮೋದನೆಗೆ ಕಳಿಸಲಾಗಿತ್ತು. ಅದನ್ನು ರಾಜ್ಯಪಾಲ ಆರ್ ಎನ್ ರವಿ ತಿರಸ್ಕರಿಸಿದ್ದರು.
ತಮ್ಮ ಛಲಬಿಡದ ಡಿಎಂಕೆ ಆಡಳಿತ ಪಕ್ಷ ನೀಟ್ ವಿರೋಧಿ ಮಸೂದೆಯು ಮೂರನೆ ಬಾರಿ ಮಸೂದೆಯಾಗಿ ರಚಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ಈಗ ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಈ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಅಂಕಿತ ದೊರೆಯುವುದು ಅನುಮಾನ ಎನ್ನಲಾಗಿದೆ.
ರಾಜ್ಯಪಾಲರು ನೀಟ್ ವಿರೋಧಿ ಮಸೂದೆಯನ್ನು ಕೇಂದ್ರ ಗೃಹ ಸಚಿವರಿಗೆ ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಕಳುಹಿಸಿದ್ದಾರೆ. ಮಸೂದೆಯನ್ನು ರಾಷ್ಟ್ರಪತಿಗಳು ತಿರಸ್ಕರಿಸುತ್ತಾರೆ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮತ್ತು ಅವರ ಮಿತ್ರಪಕ್ಷಗಳು ರಾಜ್ಯ ಅಸೆಂಬ್ಲಿಯಿಂದ ಎರಡು ಬಾರಿ ಅಂಗೀಕರಿಸಲ್ಪಟ್ಟ ನಂತರವೂ ನೀಟ್ ವಿನಾಯಿತಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ್ದವು. ತಮಿಳುನಾಡು ಸಚಿವರಾದ ಸುಬ್ರಮಣಿಯನ್ ಮತ್ತು ತಂಗಂ ತೆನ್ನರಸ್ಸು ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ, ನೀಟ್ ವಿರೋಧಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸುವಂತೆ ಒತ್ತಾಯಿಸಿದ್ದರು.
ರಾಜ್ಯಪಾಲರು ಕಳೆದ ವರ್ಷ ಅದನ್ನು ಹಿಂದಿರುಗಿಸಿದ ನಂತರ 202ರ ಫೆಬ್ರವರಿಯಲ್ಲಿ ತಮಿಳುನಾಡು ವಿಧಾನಸಭೆಯು ಮತ್ತೊಮ್ಮೆ ನೀಟ್ ವಿರೋಧಿ ಮಸೂದೆಯನ್ನು ಅಂಗೀಕರಿಸಿತು.
19 ವರ್ಷದ ವೈದ್ಯಕೀಯ ವ್ಯಾಸಂಗ ಮಾಡಬೇಕೆಂದುಕೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ನೀಟ್ ಪರೀಕ್ಷೆಗೆ ಮುನ್ನ ಕೆಲವೇ ಗಂಟೆಗಳ ಮೊದಲು ಸೇಲಂನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ವಿರೋಧಿ ಮಸೂದೆಯನ್ನು ಮಂಡಿಸಲಾಯಿತು.