ಕಾಂಗ್ರೆಸ್‌ಗೆ 25 ಸ್ಥಾನ ಬಿಟ್ಟುಕೊಟ್ಟ ಡಿಎಂಕೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಕ್ಷ ಡ್ರಾವೀಡ ಮುನ್ನೇತ್ರ ಕಳಗಂ(ಡಿಎಂಕೆ) ಹಾಗೂ ಕಾಂಗ್ರೆಸ್‌ ನಡುವಿನ ಹಲವು ಮಾತುಕತೆಯ ನಂತರ ಕಾಂಗ್ರೆಸ್‌ ಪಕ್ಷಕ್ಕೆ 25 ಸ್ಥಾನವನ್ನು ಬಿಟ್ಟುಕೊಟ್ಟಿರುವ ಡಿಎಂಕೆ ಅಂತಿಮಗೊಳಿಸಿದೆ.

ಡಿಎಂಕೆ ಕಚೇರಿಯ ʻಅನ್ನಾ ಅರಿವಲಯಂʼ ನಲ್ಲಿ ನಡೆದ ಡಿಎಂಕೆ ಮುಖ್ಯಸ್ಥ ಎಂ. ಕೆ. ಸ್ಟಾಲಿನ್‌ ಹಾಗೂ ಕಾಂಗ್ರೆಸ್‌ ಮುಖ್ಯಸ್ಥೆ ಕೆ ಎಸ್‌ ಅಳಗಿರಿ ಅವರು ಸ್ಥಾನ ಹಂಚಿಕೆಗೆ ಅಧಿಕೃತವಾಗಿ ಸಹಿ ಹಾಕುವ ಮೂಲಕ ಮೈತ್ರಿಗೆ ಚಾಲನೆ ನೀಡಿದರು.

ಸ್ಥಾನ ಹಂಚಿಕೆ ಸಂಬಂಧ ಡಿಎಂಕೆ ಹಾಗೂ ಕಾಂಗ್ರೆಸ್‌ ನಡುವೆ ಒಂದು ವಾರ ನಿರಂತರ ಮಾತುಕತೆಯ ನಂತರ ಭಾನುವಾದ ಅಂತಿಮಗೊಂಡಿತು. ವಿಧಾನಸಭಾ ಸ್ಥಾನಗಳೊಟ್ಟಿಗೆ ಕನ್ನಾಕುಮಾರಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.

ತಮಿಳುನಾಡಿನಲ್ಲಿ ಪ್ರಮುಖ ಪಕ್ಷವಾಗಿರುವ ಡಿಎಂಕೆ ಪಕ್ಷವು ಕಾಂಗ್ರೆಸ್‌ನ್ನು ಹೊರಗಿಡಲು ಅಥವಾ ಕೆಲವೇ ಸ್ಥಾನಗಳನ್ನು ನೀಡಲು ಬಯಸಿತ್ತು. ಆದರೆ ಅಂತಿಮವಾಗಿ ಶನಿವಾರ ಸೋನಿಯಾ ಗಾಂಧಿರವರು ಸ್ಟಾಲಿನ್‌ರವರಿಗೆ ಮಾತನಾಡಿದ ನಂತರ ಸ್ಥಾನ ಹೊಂದಾಣಿಕೆ ಅಂತಿಮಗೊಂಡಿದೆ.

2016ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಡಿಎಂಕೆಯೊಂದಿಗೆ 41 ಸ್ಥಾನಗಳಿಗೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್‌ ಪಕ್ಷ ಅಂತಿಮವಾಗಿ ಗೆದ್ದಿದ್ದು 8 ಸ್ಥಾನಗಳು ಮಾತ್ರ. ಈ ಬಾರಿಯ ಮೈತ್ರಿ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ಆರಂಭದಲ್ಲಿ 34 ಸ್ಥಾನಗಳಿಗೆ ಬೇಡಿಕೆ ಇಟ್ಟಿತು. ನಂತರ ಹಲವು ಸುತ್ತಿನ ಮಾತುಕತೆ ನಂತರ ಕಾಂಗ್ರೆಸ್‌ ಸಂಸದ ಎಚ್‌. ವಸಂತಕುಮಾರ್‌ ಅವರ ನಿಧನದಿಂದ ತೆರವಾಗಿರುವ ಕನ್ನಾಕುಮಾರಿ ಲೋಕಸಭಾ ಕ್ಷೇತ್ರದೊಂದಿಗೆ 25 ಸ್ಥಾನಗಳಿಗೆ ಸ್ಥಾನ ಹೊಂದಾಣಿಕೆಯಾಗಿದೆ.

ಕಾಂಗ್ರೆಸ್‌ ಪಕ್ಷ 30 ಸ್ಥಾನಕ್ಕಿಂತ ಕಡಿಮೆ ಸ್ಥಾನಕ್ಕೆ ಹೊಂದಾಣಿಕೆಗೆ ಸಿದ್ಧವಿರಲಿಲ್ಲ. ಕಾಂಗ್ರೆಸ್‌ ರಾಹುಲ್‌ ಗಾಂಧಿರವರು ಕಳೆದ ಎರಡು ತಿಂಗಳಲ್ಲಿ ಅನೇಕ ಪ್ರವಾಸಗಳನ್ನು ಕೈಗೊಂಡು ತಮಿಳುನಾಡನ್ನು ಕೇಂದ್ರೀಕರಿಸಿಕೊಂಡಿದ್ದಾರೆ.

ರಾಜ್ಯದ 234 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾತ್ರವಲ್ಲದೆ ಇತರೆ ಪಕ್ಷವಲ್ಲದೆ ಥೋಲ್ ತಿರುಮವಲವನ ದಲಿತ ಪಕ್ಷದ ವಿಸಿಕೆ ಮತ್ತು ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ)ಕ್ಕೆ ತಲಾ ಆರು ಸ್ಥಾನಗಳನ್ನು ನಿಗದಿಪಡಿಸಿದೆ, ಮೈತ್ರಿಕೂಟದಲ್ಲಿ ತಲಾ ಇಬ್ಬರು ಸಂಸದರನ್ನು ಹೊಂದಿರುವ ಪಕ್ಷಗಳು ಇವು. ಎಂಡಿಎಂಕೆ ಪಕ್ಷದ ವೈಕೊ ಅವರಿಗೆ ಆರು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಆದರೂ ಸಹ ಎಂಡಿಎಂಕೆ ಪಕ್ಷವು ಡಿಎಂಕೆ ಚಿಹ್ನೆಯಲ್ಲೇ ಸ್ಪರ್ಧಿಸಬೇಕಾಗಿದೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೊಂದಿಗೆ ಸ್ಥಾನ ಹೊಂದಾಣಿಕೆ ಮಾತುಕತೆಯ ಹಂತದಲ್ಲಿದ್ದು ಇನ್ನೆರಡು ದಿನದಲ್ಲಿ ಅಂತಿಮಗೊಳ್ಳಲಿದೆ.

234 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡು ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಚುನಾವಣೆಗೆ ಹೋಗುತ್ತದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

Donate Janashakthi Media

Leave a Reply

Your email address will not be published. Required fields are marked *