ತಮಿಳುನಾಡು ರಾಜ್ಯ ಬಜೆಟ್‌ : ಪೆಟ್ರೋಲ್ ಮೇಲಿನ ಸೆಸ್ ಕಡಿಮೆ – ಶಾಲಾ ಶಿಕ್ಷಣಕ್ಕೆ ಆಧ್ಯತೆ – ಮಹಿಳೆಯರಿಗೆ ಉಚಿತ್‌ ಬಸ್‌ಪಾಸ್‌ ಘೋಷಣೆ

  • ಡಿಜಿಟಲ್‌ ಬಜೆಟ್‌ ಮಂಡಿಸಿದ ತಮಿಳುನಾಡು ಸರಕಾರ

  • ಬಜೆಟ್‌ ಮಂಡಿಸಿದ ನಂತರ ಪ್ರತಿಪಕ್ಷಗಳ ಸಭಾತ್ಯಾಗ

  • ಪೆಟ್ರೋಲ್‌ ಬೆಲೆ ಕಡಿತಕ್ಕೆ ನಿರ್ಧಾರ

 

ಚನ್ನೈ: ತಮಿಳುನಾಡು ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಕಾಗದ ರಹಿತ ಬಜೆಟ್ ಅಧಿವೇಶನ ಇಂದು ಚೆನ್ನೈನ ಕಲೈವನಾರ್ ಆರಂಗಂ ನಲ್ಲಿ ನಡೆಯಿತು. ಈ ವರ್ಷದ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಇದು ಡಿಎಂಕೆ ಸರ್ಕಾರದ ಚೊಚ್ಚಲ ಬಜೆಟ್ ಅಧಿವೇಶನವಾಗಿದೆ.ಹಲವು ಮಹತ್ವದ ಯೋಜನೆಗಳನ್ನು ಬಜೆಟ್‌ ನಲ್ಲಿ ನೀಡಲಾಗಿದೆ.

ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆಯನ್ನು ₹3 ರಷ್ಟು ಕಡಿತಗೊಳಿಸಲಾಗಿದೆ ಎಂದು ರಾಜ್ಯ ಹಣಕಾಸು ಸಚಿವ ಪಳನಿವೆಲ್ ತ್ಯಾಗರಾಜನ್ ಶುಕ್ರವಾರ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ಬೆಲೆಯಲ್ಲಿ ಇಳಿಕೆ ಮಾಡುವುದರಿಂದ ರಾಜ್ಯದ ಬೊಕ್ಕಸಕ್ಕೆ ₹1,160 ಕೋಟಿ ಆದಾಯ ನಷ್ಟಉಂಟುಮಾಡುವ ನಿರೀಕ್ಷೆಯಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ. ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಮಾಡಿರುವ ಆದೇಶ ಆಗಸ್ಟ್ 14 ರಿಂದ ಜಾರಿಗೆ ಬರಲಿದೆ ಎಂದು ಇದೇ ವೇಳೆ ಅವರು ಹೇಳಿದರು.

ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯ ಪ್ರಣಾಳಿಕೆಯ ಭಾಗವಾಗಿ, ಡಿಎಂಕೆ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 4 ರೂಪಾಯಿಗಳಷ್ಟು ಕಡಿಮೆ ಮಾಡುವುದಾಗಿ ಭರವಸೆ ನೀಡಿತ್ತು ಅದಂರಂತೆ ಈಗ ಪೆಟ್ರೋಲ್‌ ಬೆಲೆಯಲ್ಲಿ ರೂ 3 ಇಳಿಕೆ ಮಾಡಿದೆ.

ಕಾಗದ ರಹಿತ ಬಜೆಟ್‌ : ಡಿಎಂಕೆ ನೇತೃತ್ವದ ಸರ್ಕಾರ ಶುಕ್ರವಾರ ತನ್ನ ಮೊದಲ ಬಜೆಟ್‌ ಮಂಡಿಸಿತು. ಹಣಕಾಸು ಸಚಿವ ಪಲನ್ವೇಲ್‌ ತ್ಯಾಗರಾಜನ್‌ ಅವರು ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್‌ ಮಂಡಿಸಿದರು.

ವಿಧಾನಸಭಾಧ್ಯಕ್ಷ ಅಪ್ಪಾವು ಅವರು ಕಂಪ್ಯೂಟರ್‌ಗಳಲ್ಲಿ ಹೇಗೆ ಆಯ–ವ್ಯಯದ ದಾಖಲೆಗಳನ್ನು ಓದಬೇಕು ಎಂಬುದರ ಬಗ್ಗೆ ಶಾಸಕರಿಗೆ ಸಲಹೆ ನೀಡಿದರು. ಇದಾದ ನಂತರ, ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಅವರು ಈ ಅಧಿವೇಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿ  ತಾವು ಸಿದ್ಧಪಡಿಸಿಕೊಂಡು ತಂದಿದ್ದ ಮಾಹಿತಿಯನ್ನು ಓದಲು ಪ್ರಾರಂಭಿಸಿದರು.

ಇದೇ ವೇಳೆ ವಿರೋಧ ಪಕ್ಷದ ಶಾಸಕರು ಎದ್ದು ನಿಂತು, ‘ಪಳನಿಸ್ವಾಮಿ ಅವರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು‘ ಎಂದು ಸಭಾಧಕ್ಷ ಅಪ್ಪಾವು ಅವರಲ್ಲಿ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌, ‘ಸಾಮಾನ್ಯ ಚರ್ಚೆಯ ವೇಳೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಈಗ ನೀವು ಕುಳಿತುಕೊಳ್ಳಿ‘ ಎಂದು ಹೇಳಿದರು. ಆದರೆ ಪಳನಿಸ್ವಾಮಿ ತಮ್ಮ ಮಾತುಗಳನ್ನು ಮುಂದುವರಿಸಿದರು. ಅವರ ಮಾತು ಮುಗಿಯುತ್ತಿದ್ದಂತೆ ಎಐಎಡಿಎಂಕೆ, ಬಿಜೆಪಿ ಮತ್ತು ಪಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ಎಲ್ಲ ಶಾಸಕರು ಪಳನಿಸ್ವಾಮಿ ನೇತೃತ್ವದಲ್ಲಿ ಸದನದಿಂದ ಹೊರ ನಡೆದರು.

ಇದನ್ನೂ ಓದಿ : ಮೇಕೆದಾಟು ನಮ್ಮ ರಾಜ್ಯದ ಸಂಪತ್ತು – ಅಪ್ಪಚ್ಚು ರಂಜನ್

ಬಜೆಟ್ ಭಾಷಣದ ಮುಖ್ಯಾಂಶಗಳು

ಸಾಮಾಜಿಕ ಭದ್ರತಾ ಪಿಂಚಣಿಗಾಗಿ ನಿಧಿ ಹೆಚ್ಚಳ : ಸಾಮಾಜಿಕ ಭದ್ರತಾ ಪಿಂಚಣಿ ನಿಧಿಯನ್ನು ವರ್ಷಕ್ಕೆ 4807.56 ಕೋಟಿ ರೂ. ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ.

ಆದಿ ದ್ರಾವಿಡರ ಅಭಿವೃದ್ಧಿಗೆ 81ಸಾವಿರ ಕೋಟಿಗಿಂತಲೂ ಹೆಚ್ಚು ಅನುದಾನ : ಆದಿ ದ್ರಾವಿಡರು ಮತ್ತು ಬುಡಕಟ್ಟು ಜನರ ಶಿಕ್ಷಣ ಅಭಿವೃದ್ಧಿಗೆ ರೂ 81,884.70 ಕೋಟಿ ಹಂಚಿಕೆ ಮಾಡಲಾಗಿದೆ.

ಶಾಲಾ ಶಿಕ್ಷಣಕ್ಕಾಗಿ 32,599 ಕೋಟಿ ರೂ : 100 ಹೊಸ ಬಸ್‌ಗಳಿಗೆ ರೂ 623.59 ಕೋಟಿ, ಸಾರ್ವಜನಿಕ ಬಸ್‌ಗಳಲ್ಲಿ ತಮಿಳುನಾಡು ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ರೂ 703 ಕೋಟಿ ನಿಗದಿಪಡಿಸಲಾಗಿದೆ.

ಎಂಜಿಆರ್ ಊಟದ ಯೋಜನೆಗೆ 1725 ಕೋಟಿ ರೂ : 2021-22 ನೇ ಸಾಲಿಗೆ ಎಂಜಿಆರ್ ಊಟದ ಯೋಜನೆಗೆ ರೂ. 1725 ಕೋಟಿ ಹಂಚಿಕೆ ಮಾಡಲಾಗಿದೆ. ಆದಾಯದ ಕೊರತೆ ರೂ. 58 ಕೆ ಕೋಟಿ

2021-22ರ ವರ್ಷಕ್ಕೆ ರಾಜ್ಯದ ಆದಾಯ ಕೊರತೆ ರೂ 58,692.68 ಕೋಟಿ ಆಗುವ ನಿರೀಕ್ಷೆ : ಸರ್ಕಾರಿ ನೌಕರರಿಗೆ ಹೆರಿಗೆ ರಜೆಯನ್ನು ಒಂದು ವರ್ಷಕ್ಕೆ ಏರಿಸಲಾಗಿದೆ.

ನೀರಾವರಿಗಾಗಿ 6607 ಕೋಟಿ ರೂ : ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 27 ನಗರಗಳಲ್ಲಿ ಭೂಗತ ಒಳಚರಂಡಿ ಯೋಜನೆ ಜಾರಿಗೊಳಿಸಲಾಗುವುದು.

ಪ್ರತಿ ವಿಧಾನಸಭೆಯಲ್ಲಿ ಕ್ರೀಡಾ ಪ್ರದೇಶಗಳನ್ನು ಸ್ಥಾಪಿಸಲು 3 ಕೋಟಿ ರೂ ; ಸರ್ಕಾರವು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸುವತ್ತ ಗಮನ ಹರಿಸುತ್ತದೆ. ರಾಜ್ಯವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 3 ಕೋಟಿ ವೆಚ್ಚದಲ್ಲಿ ಕ್ರೀಡಾ ಪ್ರದೇಶಗಳನ್ನು ಸ್ಥಾಪಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ರಾಣಿಪೇಟೆ, ತೇನಿ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಸರ್ಕಾರ ನಿರ್ಧಾರ

ಮೆಟ್ರೋರೈಲು ಯೋಜನೆ  : ಮಧುರೈನಲ್ಲಿ ಮೆಟ್ರೋ ಸ್ಥಾಪಿಸಲು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ತಮಿಳುನಾಡು ಹಣಕಾಸು ಸಚಿವರು ಹೇಳಿದ್ದಾರೆ. ಕೋಡಂಬಕ್ಕಂ-ಪೂನಮಲ್ಲಿ ಮೆಟ್ರೋ ಕಾರಿಡಾರ್ 2025 ರ ವೇಳೆಗೆ ಪೂರ್ಣಗೊಳ್ಳಲಿದೆ ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಅವರು ಮೆಟ್ರೋ ರೈಲು ಯೋಜನೆಯ 2 ನೇ ಹಂತವು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ ಎಂದು ಹೇಳಿದರು. ಕೋಡಂಬಕ್ಕಂ-ಪೂನಮಲ್ಲಿ ಕಾರಿಡಾರ್ 2025 ರ ವೇಳೆಗೆ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣದಿಂದ ತಾಂಬರಂ ಮೂಲಕ ಕಿಲಾಂಬಕ್ಕಂವರೆಗಿನ ಹಂತ -1 ವಿಸ್ತರಣೆ ಮಾರ್ಗ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ.

ನಮಕ್ಕು ನಾಮೇ ಯೋಜನೆ ಜಾರಿಗೆ : ಕಲೈಂಗರ್ ಅವರ ನಮಕ್ಕು ನಾವೇ ಯೋಜನೆಯನ್ನು ಮತ್ತೆ ಅನುಷ್ಠಾನಕ್ಕೆ ತರಲಿದ್ದು ಅದಕ್ಕಾಗಿ 100 ಕೋಟಿ ರೂ. 10 ವರ್ಷಗಳಲ್ಲಿ 1000 ಚೆಕ್‌ಡ್ಯಾಮ್‌ಗಳು, ಇದಲ್ಲದೆ  ಹೊಸ ಬಂದರುಗಳನ್ನು ನಿರ್ಮಿಸಲು 433 ಕೋಟಿ ರೂ. ಯನ್ನು ಬಜೆಟ್‌ ನಲ್ಲಿ ಘೋಷಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *