ತಮಿಳು ಹಾಸ್ಯ ನಟ ರೊಬೊ ಶಂಕರ್ ನಿಧನ

ಚೆನ್ನೈ: ಶೂಟಿಂಗ್ ವೇಳೆ ಸೆಟ್ ಕುಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತಮಿಳು ಹಾಸ್ಯ ನಟ ರೊಬೊ ಶಂಕರ್ ಸೆಪ್ಟೆಂಬರ್‌ 18 ರಾತ್ರಿ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು.

ಬುಧವಾರ ಚಿತ್ರೀಕರಣದ ವೇಳೆ ಸೆಟ್ ಕುಸಿದು ಬಿದ್ದಿದ್ದರಿಂದ ರೊಬೊ ಶಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ನಿಧನರಾಗಿದ್ದಾರೆ.

ಇದನ್ನೂ ಓದಿ: ವಸತಿ ನಿಲಯದ ವಿದ್ಯಾರ್ಥಿಗಳಿಗೆ ಭಾರಿ ಅನ್ಯಾಯ: ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ – ಬಸವರಾಜ ಎಸ್

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೊಬೊ ಶಂಕರ್ ದೇಹದ ತೂಕ ಇಳಿಯುತ್ತಿತ್ತು. ಈ ವಿಷಯವನ್ನು ಸಾರ್ವಜನಿಕವಾಗಿ ಮುಚ್ಚಿಟ್ಟಿದ್ದ ಶಂಕರ್ ಶೂಟಿಂಗ್ ವೇಳೆ ಗಾಯಗೊಂಡಾಗ ಅತೀಯಾದ ರಕ್ತಸ್ರಾವಕ್ಕೆ ಒಳಗಾಗಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ದೇಹದ ಬಹು ಅಂಗಾಂಗಳು ವೈಫಲ್ಯವಾಗಿದ್ದು ಕಂಡು ಬಂದಿತ್ತು.

ರೊಬೊ ಶಂಕರ್ 1997ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಧನುಷ್ ಅವರ ಮಾರಿ, ವಿಜಯ್ ಅವರ ಬಿಜಿಲ್, ವಿಶಾಲ್ ಅವರ ಇರಂಬು ತೈರಾಯಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಚಿತ್ರರಂಗ ಪ್ರವೇಶಿಸುವ ಮುನ್ನ ಹಳ್ಳಿಗಳಲ್ಲಿ ರೊಬೊ ಪಾತ್ರದಲ್ಲಿ ನಟಿಸುತ್ತಿದ್ದರಿಂದ ಅವರಿಗೆ ರೊಬೊ ಶಂಕರ್ ಎಂದೇ ಕರೆಯಲಾಗುತ್ತಿತ್ತು.

ನಟ ಕಮಲ್ ಹಾಸನ್, ವಿಶಾಲ್, ವಿಜಯ್, ವಿಜಯ್ ಸೇತುಪತಿ, ಡಿಸಿಎಂ ಉದಯ್ ನಿಧಿ ಸೇರಿದಂತೆ ತಮಿಳು ಚಿತ್ರರಂಗ ಆಘಾತ ವ್ಯಕ್ತಪಡಿಸಿದ್ದು, ಶಂಕರ್ ನಿಧನಕ್ಕೆ ಕಂಬನಿ ಮಿಡಿದಿದೆ. ಶಂಕರ್ ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದು, ಶುಕ್ರವಾರ ಅಂತ್ಯಕ್ರಿಯೆ ನೆರವೇರಿತು.

ಇದನ್ನೂ ನೋಡಿ: ಸೌಹಾರ್ದ ವಾತಾವರಣ ನೆಲೆಸುವಲ್ಲಿ ಸಮುದಾಯದ ಕೊಡುಗೆ ಅಪಾರ – ಜಸ್ಟೀಸ್ ನಾಗಮೋಹನ್ ದಾಸ್ Janashakthi Media

Donate Janashakthi Media

Leave a Reply

Your email address will not be published. Required fields are marked *