ತಮಿಳುನಾಡು: ತಮಿಳು ನಟ ಅಜಿತ್ ಸಿನಿಮಾಗಳಲ್ಲಿ ನಟಿಸೋದು ಮಾತ್ರವಲ್ಲ, ಆಗಾಗ್ಗೆ ಕಾರ್ ರೇಸ್‌ಗೂ ಹೋಗುತ್ತಾರೆ. ಬೈಕ್ ಕ್ರೇಜ್ ಕೂಡ ಇವರಿಗೆ ಇದೆ. ಕೆಲ ದಿನಗಳ ಹಿಂದೆ ಬೈಕ್ ಏರಿ 3 ದೇಶ ಸುತ್ತಿ ಬಂದಿದ್ದರು. ಇತ್ತೀಚೆಗೆ ದುಬೈ ಕಾರ್ ರೇಸ್‌ನಲ್ಲಿ ಅಜಿತ್ ಭಾಗಿ ಆಗಿದ್ದೂ, ಟ್ರ್ಯಾಕ್‌ನಲ್ಲಿ ಕಾರ್ ಚಲಾಯಿಸುವಾಗ ಅವಘಡ ಸಂಭವಿಸಿತ್ತು.
‘ಅಜಿತ್ ಕುಮಾರ್ ರೇಸಿಂಗ್’ ಹೆಸರಿನ ಒಂದು ರೇಸಿಂಗ್ ತಂಡವನ್ನು ಘೋಷಿಸಿದ್ದರು. ದುಬೈನಲ್ಲಿ ನಡೆದ ’24H ದುಬೈ ರೇಸಿಂಗ್’ನಲ್ಲಿ ಅವರ ತಂಡ ಭಾಗಿ 3ನೇ ಸ್ಥಾನ ಪಡೆದಿದೆ. ‘ಸ್ಪಿರಿಟ್ ಆಫ್ ರೇಸ್’ ಟೈಟಲ್ ಅನ್ನು ತಂಡ ತನ್ನದಾಗಿಸಿಕೊಂಡಿದೆ. ಈ ವಿಚಾರ ಥಲಾ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಆಪ್ತರು ಅಭಿನಂದನೆಗಳ ಮಹಾಪೂರವನ್ನೇ ಹರಿಸಿಸುತ್ತಿದ್ದಾರೆ. ಇನ್ನು ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಬಳಿಕ ಅಜಿತ್ ಸಂಭ್ರಮಾಚರನೆಯ ಫೋಟೊ, ವೀಡಿಯೋಗಳು ವೈರಲ್ ಆಗುತ್ತಿದೆ. ಪತ್ನಿ ಮುತ್ತಿಟ್ಟು ಅಜಿತ್ ಸಂಭ್ರಮಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ನಟ ರ್ಯಾಕಿಂಗ್ ಸ್ಟ್ಯಾಂಡ್ ಏರಿದ್ದಾರೆ.
ಇದನ್ನೂ ಓದಿ: ಮೆನ್ಯೂ ಚಾರ್ಟ್ ಬದಲಾವಣೆ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಉಪವಾಸ ಧರಣಿ
13 ವರ್ಷಗಳ ಬಳಿಕ ನಟ ಅಜಿತ್ ರೇಸಿಂಗ್‌ನಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ತಾಲೀಮು ನಡೆಸುವ ವೇಳೆ ಕಾರ್ ಅಪಘಾತವಾಗಿತ್ತು. ಆದರೆ ಯಾವುದೇ ಸಮಸ್ಯೆ ಇಲ್ಲದೇ ಪಾರಾಗಿದ್ದರು. ಇದನ್ನು ನೋಡಿ ಅಭಿಮಾನಿಗಳು ಯಾವ ರೇಸ್ ಬೇಡ, ನೀವು ಸಿನಿಮಾಗಳಲ್ಲಿ ನಟಿಸಿ ಸಾಕು ಎನ್ನುತ್ತಿದ್ದರು. ಆದರೆ ಅದೆಲ್ಲವನ್ನು ಮೆಟ್ಟಿ ರೇಸಿಂಗ್‌ನಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಾಲೀಮು ನಡೆಸಿದ್ದರು.
ಅಜಿತ್ ಕಾರ್ ರೇಸ್‌ನಲ್ಲಿ ಗೆಲ್ಲುತ್ತಿದ್ದಂತೆ ಆಪ್ತರು, ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ತೆಲುಗು ನಟ ನಾಗಚೈತನ್ಯಗೂ ಕಾರ್ ರೇಸ್ ಕ್ರೇಜ್ ಇದೆ. ಹಾಗಾಗಿ ಅಜಿತ್ ಗೆಲುವು ಸಾಧಿಸುತ್ತಿದ್ದಂತೆ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ನಟ, ರಾಜಕೀಯ ಮುಖಂಡ ಕಮಲ್ ಹಾಸನ್, ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವರು ಅಭಿನಂದನೆ ತಿಳಿಸಿ ಟ್ವೀಟ್ ಮಾಡಿದ್ದಾರೆ.
ವಿಶ್ವ ಪರ್ಯಟನೆಯ ವೇಳೆ ಅಜಿತ್ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿದ್ದರು. ಲಡಾಖ್‌ನಲ್ಲಿ ಕನ್ನಡಿರೊಬ್ಬರ ಬೈಕ್ ಪಂಕ್ಚರ್ ಆಗಿದ್ದಾಗ ಖುದ್ದು ತಾವೇ ಸಹಾಯ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ಪೋಸ್ಟ್ ವೈರಲ್ ಆಗಿತ್ತು. 2013ರಲ್ಲಿ ಒಮ್ಮೆ ತಮಿಳು ನಟ ಚೆನ್ನೈನಿಂದ ಪುಣೆಗೆ BMW ಬೈಕ್ ಸವಾರಿ ಮಾಡಿದ್ದರು.
ತಮ್ಮ ಸಿನಿಮಾಗಳ ಚಿತ್ರೀಕರಣದ ವೇಳೆ ಬೈಕ್, ಕಾರ್ ಸ್ಟಂಟ್‌ಗಳನ್ನು ಯಾವುದೇ ಡ್ಯೂಪ್ ಇಲ್ಲದೇ ಸ್ವತಃ ಅಜಿತ್ ಮಾಡುತ್ತಾರೆ. ಇದೇ ಕಾರಣಕ್ಕೆ ಕೆಲವೊಮ್ಮೆ ಅವಘಡಗಳು ಸಂಭವಿಸಿವುದು ಇದೆ. ‘ವಾಲಿಮೈ’ ಚಿತ್ರದ ಚಿತ್ರೀಕರಣದ ವೇಳೆ ಬೈಕ್‌ನಿಂದ ಬಿದ್ದಿದ್ದರು. ‘ವಿಡಾಮುಯರ್ಚಿ’ ಚಿತ್ರದ ಶೂಟಿಂಗ್ ವೇಳೆ ಕಾರ್ ಸ್ಟಂಟ್ ವೀಡಿಯೋ ವೈರಲ್ ಆಗಿತ್ತು.
ಇದನ್ನೂ ನೋಡಿ: ಮುಖ್ಯಮಂತ್ರಿಗೆ ಘೇರಾವ್ : DYFI ಕಾರ್ಯಕರ್ತರ ಬಂಧನ Janashakthi Media