ಪ್ರಬಲ ಭೂಕಂಪಕ್ಕೆ ನಡುಗಿದ ತೈವಾನ್‌ ದ್ವೀಪ

  • ತೈವಾನ್‌ ದ್ವೀಪದ ದಕ್ಷಿಣ ಭಾಗದಲ್ಲಿ ಜನದಟ್ಟಣೆ ಹೆಚ್ಚಾಗಿರುವ ಭಾಗದಲ್ಲೇ ಭೂಕಂಪ
  • ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲು
  • ಭೂಕಂಪದ ತೀವ್ರತೆಯಿಂದಾಗಿ ತೈವಾನ್‌ನಲ್ಲಿ ಹಲವು ರೈಲುಗಳು ಹಳಿ ತಪ್ಪಿವೆ

ತೈವಾನ್ : ಚೀನಾ ದೇಶಕ್ಕೂ ಭೂಕಂಪಕ್ಕೂ ಬಿಡದ ನಂಟು ಎಂಬಂತಾಗಿದೆ. 10 ದಿನಗಳ ಹಿಂದಷ್ಟೇ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಆತಂಕದಿಂದ ಜನರು ಹೊರ ಬರುವ ಮುನ್ನವೇ ಇದೀಗ ತೈವಾನ್‌ನಲ್ಲಿ ಭೂಕಂಪ ಸಂಭವಿಸಿದೆ.

ತೈವಾನ್‌ ದ್ವೀಪದ ದಕ್ಷಿಣ ಭಾಗದಲ್ಲಿ ಜನದಟ್ಟಣೆ ಹೆಚ್ಚಾಗಿರುವ ಭಾಗದಲ್ಲೇ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ತೀವ್ರತೆಯಿಂದಾಗಿ ತೈವಾನ್‌ನಲ್ಲಿ ಹಲವು ರೈಲುಗಳು ಹಳಿ ತಪ್ಪಿವೆ. ಹಲವು ಅಂಗಡಿ, ಮಳಿಗೆಗಳು, ಮನೆಗಳು ಹಾಗೂ ಕಟ್ಟಡಗಳು ನೆಲಕ್ಕೆ ಉರುಳಿವೆ. ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ನಡುವೆ, ಗುಡ್ಡಗಾಡು ರಸ್ತೆಗಳಲ್ಲಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಮಂದಿ ತಮ್ಮ ವಾಹನಗಳ ಸಮೇತ ಸಿಲುಕಿದ್ದಾರೆ. ಗುಡ್ಡಗಾಡು ರಸ್ತೆಗಳಲ್ಲಿ ಭೂಕುಸಿತ, ರಸ್ತೆ ಸಂಪರ್ಕ ಕಡಿತವಾಗಿದೆ.

ರೈಲು ಅಲುಗಾಡುವ ದೃಶ್ಯ ಭೂಕಂಪನದ ತೀವ್ರತೆಗೆ ಹಿಡಿದ ಕೈಗನ್ನಡಿಯಂತಾಗಿದೆ. ತೈವಾನ್‌ನ ಆಗ್ನೇಯ ಕರಾವಳಿಯಲ್ಲಿ ಭಾನುವಾರ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ, ಸಣ್ಣ ಪಟ್ಟಣದಲ್ಲಿ ಕನಿಷ್ಟ ಒಂದು ಕಟ್ಟಡ ಕುಸಿದಿದೆ ಮತ್ತು ಸುನಾಮಿ ಎಚ್ಚರಿಕೆ ನೀಡಲು ಜಪಾನ್‌ಗೆ ಪ್ರೇರೇಪಿಸಿದೆ. ಟ್ವಿಟರ್‌ನಲ್ಲಿ ವೈರಲ್‌ ಆಗುತ್ತಿರುವ ವಿಡಿಯೋಗಳಲ್ಲಿ ಭಯಭೀತರಾದ ನಿವಾಸಿಗಳು ಕಟ್ಟಡದಿಂದ ಆಚೆ ಓಡಿಬರುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ತೈವಾನ್‌ ರಾಜಧಾನಿ ತೈಪೆಯಲ್ಲೂ ಕಟ್ಟಡಗಳು ಅಲುಗಾಡುವ ಅನುಭವವಾಗಿದೆ ಎಂದು ಎಎಫ್‌ಪಿ ವರದಿಗಾರರು ತಿಳಿಸಿದ್ದಾರೆ. ಈ ಹಿಂದೆ ಸೆಪ್ಟೆಂಬರ್ 1999 ರಲ್ಲಿ ತೈವಾನ್‌ನ ಅತ್ಯಂತ ಭೀಕರ ಭೂಕಂಪನಕ್ಕೆ ಸಾಕ್ಷಿಯಾಗಿತ್ತು. ಇದು 2,400 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು.

Donate Janashakthi Media

Leave a Reply

Your email address will not be published. Required fields are marked *