ಟಿ. ವಾಸುದೇವನ್ ನಾಯರ್: ಭಾರತದ ಸಮಕಾಲೀನ ಸಾಹಿತಿಗಳಲ್ಲಿ ಅಗ್ರಗಣ್ಯರು

– ವಾಸುದೇವ ಉಚ್ಚಿಲ್

ಟಿ. ವಾಸುದೇವನ್ ನಾಯರ್ ಭಾರತದ ಸಮಕಾಲೀನ ಸಾಹಿತಿಗಳಲ್ಲಿ ಒಬ್ಬ ಅಗ್ರಗಣ್ಯರು ಎಂಬುದರಲ್ಲಿ ಅನುಮಾನವಿಲ್ಲ. ಒಂಬತ್ತು ಕಾದಂಬರಿಗಳು, ಹಲವಾರು ಕಥಾಸಂಕಲನಗಳು, 54 ಸಿನಿಮಾ ಚಿತ್ರಕಥೆಗಳು ಅಲ್ಲದೆ ಇತರೆ ಪ್ರಕಾರದ ಗದ್ಯ ಕೃತಿಗಳು ಸೇರಿದಂತೆ ಅಪಾರ ಪ್ರಮಾಣದ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಅವರ ಕೃತಿಗಳು ಕೆಲವು ಇಂಗ್ಲಿಷ್ ಅಲ್ಲದೆ ಹಲವು ಭಾರತೀಯ ಭಾಷೆಗಳಿಗೂ ಭಾಷಾಂತರವಾಗಿದೆ.

ಅವರ ಕಥನಸಾಹಿತ್ಯದಷ್ಟೇ ಅವರ ಸಿನಿಮಾ ಚಿತ್ರಕಥೆಗಳೂ ಶ್ರೇಷ್ಠ ಬರಹಗಳೆಂದು ಪ್ರಖ್ಯಾತವಾಗಿವೆ. ಏಳೋ ಎಂಟೋ ಸಿನಿಮಾಗಳನ್ನು ಅವರು ನಿರ್ದೇಶಿಸಿಯೂ ಇದ್ದಾರೆ. ಅವರ ಮೊದಲ ಚಿತ್ರ “ನಿರ್ಮಾಲ್ಯಂ” 1974ರಲ್ಲೆ ರಾಷ್ಟ್ರಪತಿ ಸ್ವರ್ಣಕಮಲ ಪ್ರಶಸ್ತಿ ಪಡೆದಿತ್ತು. ಅವರು ನಿರ್ದೇಶಿಸಿದ ಇತರ ಚಿತ್ರಗಳೂ ಗಮನಾರ್ಹವಾಗಿದ್ದವು.ಟಿ.

ಆದರೆ ಬರವಣಿಗೆಯೆ ತನ್ನ ಸೃಜನಶೀಲತೆಯ ಲಕ್ಷ್ಯ ಎಂದು ಕಥನಸಾಹಿತ್ಯ ಹಾಗೂ ಸಿನಿಮಾ ಸ್ಕ್ರೀನ್ ಪ್ಲೇ ರಚನೆಯಲ್ಲಿ ಹೆಚ್ಚು ತೊಡಗಿಸಿಕೊಂಡರು. ಅವರ ಚಿತ್ರಕಥೆಗಳಲ್ಲಿ ನಾಲ್ಕಕ್ಕೆ ಆಯಾ ವರ್ಷದ ರಾಷ್ಟ್ರೀಯ ಪ್ರಶಸ್ತಿಗಳು ಬಂದವು. ಒರು ವಡಕ್ಕನ್ ವೀರಗಾಥಾ(1089), ಕಡವು(1991), ಸದಯಂ(1992) ಮತ್ತು ಪರಿಣಯಂ(1994) ಇವು ಪ್ರಶಸ್ತಿವಿಜೇತವುಗಳಾಗಿದ್ದರೆ , ಅಸುರವಿತ್ತುಗಳ್, ವೈಶಾಲಿ , ವಾನಪ್ರಸ್ತಂ ಇನ್ನೂ ಅನೇಕವು ಚಿತ್ರಕಥಾರಚನೆಗೆ ಹೆಸರಾಗಿವೆ . ಅವರ ಕೆಲವು ಸಣ್ಣಕಥೆಗಳೂ ಕಾದಂಬರಿಗಳೂ ಅವರಿಂದಲೇ ಚಿತ್ರಕಥೆ ಗಳಾಗಿ ರೂಪಾಂತರಗೊಂಡಿವೆ.

ಎಂ ಟಿ ವಾಸುದೇವನ್ ನಾಯರ್ ಅವರ ನೂರಾರು ಕಥೆಗಳು ಹಾಗೂ ಒಂಬತ್ತು ಕಾದಂಬರಿಗಳು ಕಳೆದ ಶತಮಾನದಲ್ಲಿ ರೂಪಾಂತರಗೊಳ್ಳುತ್ತಿದ್ದ ಕೇರಳದ ಸಮಾಜ ಹಾಗೂ ಸಂಸ್ಕೃತಿಯ ನ್ನು ಭಾಷೆಯ ಮೂಲಕ ಮರುನಿರ್ಮಿಸುವ ಪ್ರಯತ್ನಗಳೇ ಆಗಿವೆ. ಫ್ಯೂಡಲ್ ಸಮಾಜದ ಪತನವನ್ನು ಕಟ್ಟಿಕೊಡುವುದರ ಜತೆಗೆ ಹೊಸ ಕಾಲದ ವೈಚಾರಿಕ ನೋಟ ಏನಿರಬೇಕೆಂಬುದರ ಕಡೆಗೆ ದಿಕ್ಸೂಚಿ ಯಾಗುತ್ತದೆ ಅವರ ಕಥನಗಳು . ಅಸುರವಿತ್ತುಗಳ್, ಕಾಲಂ, ನಾಲುಕೆಟ್ಟು , ರಂಡಾಮೂಳಂ ಅವರ ಪ್ರಮುಖ ಕಾದಂಬರಿಗಳು.

ಇದನ್ನೂ ಓದಿ : ಸಾಹಿತ್ಯ ಸಮ್ಮೇಳನ – ಯಶಸ್ಸು ಸಾಫಲ್ಯಗಳ ನಡುವೆ

ನಾಯರ್ ಜಮೀನ್ದಾರಿ ಕುಟುಂಬಗಳ ಪತನದ ನಿರೂಪಣೆಯಾಗಿರುವ ನಾಲುಕೆಟ್ಟ್ ನ್ನು ಎಂ.ಟಿ. ಅವರ ಶ್ರೇಷ್ಠ ಬರವಣಿಗೆ ಎಂದು ಪರಿಗಣಿಸುವವರೂ ಇದ್ದಾರೆ. ಭೀಮಾಯಣವೆಂದು ಕನ್ನಡಕ್ಕೆ ಅನುವಾದ ಆಗಿರುವ ರಂಡಾಮೂಳಂನಲ್ಲಿ ಅವರು ಭೀಮನನ್ನು ಕಥಾನಾಯಕನಾಗಿಸಿ ಆರ್ಯ ಆರ್ಯೇತರ ಸಂಘರ್ಷವನ್ನು ಮಹಾಭಾರತದ ಗುರುತಿಸುವುದು ಮಾತ್ರವಲ್ಲದೆ ಹೇಗೆ ಬಲಿಷ್ಟ ವನಚರರನ್ಮು ದಾಸ್ಯದ ದಾಳಗಳಾಗಿ ತಮ್ಮ ಕಪಿಮುಷ್ಟಿಯೊಳಗಿಟ್ಟುಕೊಂಡರು ಎಂಬುದನ್ನು ನಿರೂಪಿಸುತ್ತಾರೆ.

ಎಂ ಟಿ ವಾಸುದೇವನ್ ನಾಯರ್ ಅವರು ಬಹಳ ದೊಡ್ಡ ಮಾತುಗಾರ. ಅವರ ಮಾತುಗಳನ್ನು ಕೇಳಲು ಜನರು ಕಾತರಿಸುತ್ತಿದ್ದರು. ಅವರ ಎಲ್ಲ ಸಾಹಿತ್ಯವೂ ಪ್ರೌಢ ಓದುಗರಿಗಾಗಿ ರಚಿತವಾಗಿದ್ದರೂ ಕೇರಳದ ಮಲಯಾಳಂ ನ ಸಾಮಾನ್ಯ ಓದುಗರಲ್ಲೂ ಅವರು ಜನಪ್ರಿಯರಾಗಿದ್ದರು. ಬಹುಶಃ ಭಾರತದ ಯಾವ ಭಾಷೆಯಲ್ಲಿಯೂ ಪ್ರೌಢ ಹಾಗೂ ಸಾಮಾನ್ಯ ಓದುಗರ ನಡುವೆ ಏಕರೀತಿಯ ಜನಪ್ರಿಯತೆಯನ್ನು ಪಡೆದವರು ಪ್ರಸ್ತುತ ಕಾಲಘಟ್ಟದಲ್ಲಿ ಬೇರೊಬ್ಬರಿಲ್ಲ.

ಎಂ.ಟಿ. ಅವರಿಗೆ ರಾಷ್ಟ್ತ ಮತ್ತು ರಾಜ್ಯಮಟ್ಡದ ದೊಡ್ಡಪ್ರಶಸ್ತಿಗಳು ಸಂದಿವೆ. ಪದ್ಮಭೂಷಣ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ಎಳುತ್ತಚ್ಚನ್, ವಲ್ಲತ್ತೋಳ್ , ವಯಲಾರ್, ಓಎನ್ ವಿ ಇತ್ಯಾದಿ ಸಾಹಿತ್ಯಕ ಪ್ರಶಸ್ತಿಗಳಲ್ಲದೆ ಈ ಮೊದಲು ಉಲ್ಲೇಖಿಸಿದ ಸಿನಿಮಾ ಪ್ರಶಸ್ತಿಗಳು ಅವರಿಗೆ ಸಂದಿವೆ.

ಎಂ ಟಿ ವಾಸುದೇವನ್ ನಾಯರ್ ಅವರು ನಮ್ಮೊಡನೆ ಇದ್ದ ಸಾಹಿತ್ಯಕ ದೈತ್ಯರೆಂಬುದರಲ್ಲಿ ಅನುಮಾನವೇ ಇಲ್ಲ. ಕನ್ನಡಕ್ಕೆ ಅವರ ಇನ್ನಷ್ಟು ಕೃತಿಗಳು ಬರಬೇಕಾಗಿದೆ.

ಇದನ್ನೂ ನೋಡಿ : ಅಗ್ಘಣಿ ಮೀಸಲಾಗಬೇಕೆಂಬುದು ಶೀಲವೆ ? Janashakthi Media

Donate Janashakthi Media

Leave a Reply

Your email address will not be published. Required fields are marked *