ಸ್ವಂತ ಆಯ್ಕೆಯ ಮದುವೆ ಕುರಿತಂತೆ ಅಲಹಾಬಾದ್ ನ್ಯಾಯಾಲಯದ ತೀರ್ಪು ಸರಿಯಲ್ಲ: ಜನವಾದಿ ಮಹಿಳಾ ಸಂಘಟನೆ

  • ದಂಪತಿಗಳಿಗೆ ರಕ್ಷಣೆ ಒದಗಿಸದೆ ಮದುವೆಯ ಸಿಂಧುತ್ವ ವಿಚಾರಣೆ ನಡೆಸಿದ ಹೈಕೋರ್ಟ್‍ ನಡೆಗೆ ಅಸಮಾಧಾನ

 

ದೆಹಲಿ: ನ್ಯಾಯಾಲಯದಿಂದ, ಬಹುಶಃ ತಮ್ಮ ಕುಟುಂಬದವರಿಂದ ಅಥವ ಪೊಲೀಸಿನಿಂದ ರಕ್ಷಣೆ ಕೋರಿ ಬಂದ ಒಂದು ಯುವ ದಂಪತಿಯನ್ನು ಕಾಪಾಡಲು ನಿರಾಕರಿಸಿರುವ ಅಲಹಾಬಾದ್ ಹೈಕೋರ್ಟಿನ ತೀರ್ಪು ತಪ್ಪಾಗಿದೆ ಎಂದು ತನಗೆ ಬಲವಾಗಿ ಅನಿಸುವುದಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯುಎ) ಹೇಳಿದೆ.

ಹಿಂದೂ ಪದ್ಧತಿಯಲ್ಲಿ ಮದುವೆಯಾದ ನಂತರ ಈ ದಂಪತಿಗಳು ನ್ಯಾಯಾಲಯದಲ್ಲಿ ಒಂದು ರಿಟ್ ಅರ್ಜಿ ಸಲ್ಲಿಸಿದರು. ಹುಡುಗ ಒಬ್ಬ ಹಿಂದೂ, ಹಾಗೂ ಹುಡುಗಿ ಇಸ್ಲಾಮ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದವಳು. ಹುಡುಗಿ ಒಂದು ತಿಂಗಳ ಹಿಂದೆಯಷ್ಟೇ ಮತಾಂತರ ಹೊಂದಿದ್ದಾಳೆ, ಆಕೆಯ ಮತಾಂತರ ನೈಜವಲ್ಲ, ಕೇವಲ ಮದುವೆಗಾಗಿ, ಆದ್ದರಿಂದ ತಾನು ಈ ವಿಷಯದಲ್ಲಿ ಮಧ್ಯಪ್ರವೇಶಿಸ ಬಯಸುವುದಿಲ್ಲ ಎಂದು ನ್ಯಾಯಾಲಯದ ತೀರ್ಪು ಹೇಳಿದೆ. ಅಂದರೆ ನ್ಯಾಯಾಲಯ ಸ್ವಂತ ಇಚ್ಛೆಯಿಂದ ಆಯ್ದುಕೊಂಡ ಸಂಬಂಧಗಳಿಗೆ ವಿರುದ್ಧವಾಗಿದೆ, ಮತ್ತು ಮದುವೆಯಾದ ದಂಪತಿಗಳಿಗೆ ಮಾತ್ರ ರಕ್ಷಣೆಯ ಅಗತ್ಯವಿರುತ್ತದೆ ಎಂದು ನಂಬಿರುವಂತೆ ಕಾಣುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅವರಿಗೆ ಹಿಂಸಾಚಾರ ಮತ್ತು ಅದನ್ನನುಸರಿಸಿ ಎಲ್ಲ ರೀತಿಗಳ ಕ್ರಿಮಿನಲ್ ಆಪಾದನೆಗಳಿಂದ ರಕ್ಷಣೆ ಒದಗಿಸುವ ಬದಲು, ಆ ವಿಷಯವನ್ನೇ ಎತ್ತಿಕೊಳ್ಳದೆ ಅವರ ಮದುವೆಯ ಸಿಂಧುತ್ವದ ವಿಷಯವನ್ನು ಎತ್ತಿಕೊಂಡಿದೆ. ಉತ್ತರಪ್ರದೇಶದಿಂದ ಬಂದ ಹಿಂದಿನ ತೀರ್ಪುಗಳು ಅಯಾಯ ದಂಪತಿಗಳಿಗೆ ಕ್ರಿಮಿನಲ್‌ ಗಳಂತೆ ಅಟ್ಟಾಡಿಸುವುದರಿಂದ ರಕ್ಷಣೆ ಒದಗಿಸಿವೆ ಮತ್ತು ತಮ್ಮ ಮದುವೆಯನ್ನು ಸಿವಿಲ್  ಕಾಯ್ದೆಗಳ ಅಡಿಯಲ್ಲಿ ನೋಂದಣಿ(ರಿಜಿಸ್ಟರ್) ಮಾಡಿಕೊಳ್ಳಿ ಎಂದು ಸಲಹೆ ಮಾಡಿವೆ. ಆದರೆ ಈ ನ್ಯಾಯಾಲಯ, ಈ ದಂಪತಿಗಳಿಗೆ ರಕ್ಷಣೆ ಕೊಡಲು ನಿರಾಕರಿಸಿದೆ ಎಂದು ಎಐಡಿಡಬ್ಲ್ಯುಎ ಖೇದ ವ್ಯಕ್ತಪಡಿಸಿದೆ. ಮರ್ಯಾದೆಯ ಹೆಸರಲ್ಲಿ ಅಪರಾಧಗಳು, ಕೊಲೆಗಳು ವ್ಯಾಪಕವಾಗಿ ನಡೆಯುತ್ತಿವೆ ಎಂಬ ವಿಷಯ ಖಂಡಿತವಾಗಿಯೂ ನ್ಯಾಯಾಲಯಕ್ಕೆ ತಿಳಿದೇ ಇದೆ.

ವಿಶೇಷ ವಿವಾಹ ಕಾಯ್ದೆಯನ್ನು ಯುವ ಜೋಡಿಗಳು ಯಾವುದೇ ವಿಳಂಬ ಮತ್ತು ಅಡೆ-ತಡೆಗಳಿಲ್ಲದೆ ವಿವಾಹವಾಗಲು ಅನುವು ಮಾಡಿಕೊಡುವಂತೆ ತಿದ್ದುಪಡಿ ಮಾಡಬೇಕಾದ ಸಮಯವೂ ಈಗ ಬಂದಿದೆ.  ಸ್ವಂತ ಆಯ್ಕೆಯ ಸಂಬಂಧಗಳು ಮತ್ತು ಮದುವೆಗಳಿಗೆ ಸಿಂಧುತ್ವ ಕೊಡಲು ಮತ್ತು ಇಂತಹ ಸಂಬಂಧಗಳನ್ನು ನಿಲ್ಲಿಸಲು ಕ್ರೂರ ಮತ್ತು ಅಮಾನವೀಯ ವಿಧಾನಗಳನ್ನು ಬಳಸುವವರನ್ನು ಶಿಕ್ಷಿಸಲು ಒಂದು ಕಾನೂನನ್ನು ತರುವ ಅಗತ್ಯವಿದೆ.
ಎಐಡಿಡಬ್ಲ್ಯುಎ

 

 ತೀರ್ಪಿನಿಂದ ಪ್ರಯೋಜನ ಪಡೆದುಕೊಂಡಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮತ್ತೊಮ್ಮೆ ‘ಲವ್ ಜಿಹಾದ್’ ವಿರುದ್ಧ ಸಮರ ಸಾರಿದ್ದಾರೆ, ಯಾವುದೇ ಮುಸ್ಲಿಂ ಹುಡುಗ, ಹಿಂದೂ ಹುಡುಗಿಯನ್ನು ಮತಾಂತರಗೊಳಿಸಿ ಮದುವೆಯಾದರೆ ಸಾವನ್ನು ಎದುರಿಸಬೇಕಾದೀತು ಎಂದು ಬೆದರಿಸಿದ್ದಾರೆ. ಇಂತಹ ಮದುವೆಗಳ ವಿರುದ್ಧ ಒಂದು ಮಸೂದೆಯನ್ನು ತರುವುದಾಗಿಯೂ ಹೇಳಿದ್ದಾರೆ.

‘ಲವ್ ಜಿಹಾದ್’ ಎಂಬುದು ಒಂದು ಮಿಥ್ಯೆ, ಎನ್‌.ಐ.ಎ. ತನಿಖೆಗಳಲ್ಲಾಗಲೀ, ಯಾವುದೇ ಪೋಲಿಸ್ ತನಿಖೆಗಳಲ್ಲಾಗಲೀ ಇದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂಬುದನ್ನು ಅಧಿಕಾರಸ್ಥರೇ ಒಪ್ಪಿಕೊಂಡಿದ್ದಾರೆ. ಆದರೂ ಬಿಜೆಪಿ ಮುಖಂಡರು ಮತ್ತು ಬಿಜೆಪಿ ಬಗ್ಗೆ ಸಹಾನುಭೂತಿ ಇರುವವರು ಹಲವಾರು ಸಂದರ್ಭಗಳಲ್ಲಿ ಇದನ್ನು ಮತ್ತೆ-ಮತ್ತೆ ಎತ್ತುತ್ತಿದ್ದಾರೆ. ರಾಷ್ಟಿçÃಯ ಮಹಿಳಾ ಆಯೋಗ ಅಧ್ಯಕ್ಷರೂ ಕೂಡ ಅಂತರ-ಧರ್ಮೀಯ ಮದುವೆಯೊಂದನ್ನು ತೋರಿಸಿದ ಟಾಟಾ ಕಂಪನಿಯ ಜಾಹೀರಾತಿನ ವಿರುದ್ಧ ಮಾತಾಡಿದ್ದಾರೆ. ಇದರಿಂದಾಗಿ ಆ ಕಂಪನಿ ಆ ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕಾಗಿ ಬಂತು ಎಂಬ ಸಂಗತಿಯತ್ತ ಗಮನ ಸೆಳೆದಿರುವ ಎಐಡಿಡಬ್ಲ್ಯುಎ, ಬಿಜೆಪಿ ಸ್ವಂತ ಆಯ್ಕೆಯ, ಅದರಲ್ಲೂ ಅಂತರ-ಜಾತಿ ಮತ್ತು ಅಂತರ-ಧರ್ಮೀಯ ಮದುವೆಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.

ಇದು ಯುವ ದಂಪತಿಗಳಿಗೆ ಉಂಟು ಮಾಡಿರುವ, ಈಗಲೂ ಉಂಟುಮಾಡುತ್ತಿರುವ ವಿಪರೀತ ನೋವು-ಸಂಕಟಗಳ ಪ್ರಶ್ನೆಯನ್ನು ಎತ್ತಿಕೊಳ್ಳಬೇಕಾಗುತ್ತದೆ ಎಂದೂ ಎಐಡಿಡಬ್ಲ್ಯುಎ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *