ಸಾರ್ವಜನಿಕರಿಗೆ ತೊಂದರೆ ಕಿರುಕುಳ ಕೊಟ್ಟರೆ ಅಮಾನತ್ತು: ಸಚಿವ ಸಂತೋಷ್ ಲಾಡ್ ಎಚ್ಚರಿಕೆ

ಕಲಘಟಗಿ: ಏನೇ ಇರಲಿ ಸಾರ್ವಜನಿಕರಿಗೆ ತೊಂದರೆ ಕಿರುಕುಳ ಕೊಟ್ಟರೆ ಅಮಾನತ್ತು ಮಾಡಲಾಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಎಚ್ಚರಿಕೆ ಕೊಟ್ಟಿದ್ದಾರೆ. ಸಾರ್ವಜನಿಕ

ಕಲಘಟಗಿ ತಾಲೂಕಿನಲ್ಲಿ ಮಧ್ಯರಾತ್ರಿ ವಿದ್ಯುತ್ ಪೂರೈಯಿದಾಗಿ ಬೋರ್ ವೆಲ್ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ತೊಂದರೆಯಾಗುತ್ತಿದೆ. ಹಗಲು ಹೊತ್ತಿನಲ್ಲಿ ವಿದ್ಯುತ್‌ ಪೂರೈಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಬಿಜೆಪಿ ಯುವ ಮುಖಂಡ ಶಶಿಧರ ನಿಂಬಣ್ಣವರ ಶುಕ್ರವಾರ ಮನವಿ ಮಾಡಿದರು.

ಇದನ್ನೂ ಓದಿ : ಕಮೀಷನರ್ ಅಗ್ರವಾಲ್ ಅಮಾನತಿಗೆ ಹೆಚ್ಚಿದ ಒತ್ತಡ : ಜಂಟಿ ವೇದಿಕೆಯಿಂದ ಬೃಹತ್ ಧರಣಿ

ಬಳಿಕ ಮಾತನಾಡಿದ ಶಶಿಧರ ನಿಂಬಣ್ಣವರ, ಈ ಹಿಂದೆ ಒಂದೊಂದು ವಾರ ಒಂದು ಸಮಯ ನಿಗದಿ ಮಾಡಿ ವಿದ್ಯುತ್ ಪೂರೈಸಲಾಗುತ್ತಿತ್ತು. ಇದರಿಂದ ರೈತರಿಗೆ ಅನುಕೂಲವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಳಗಿನ ಜಾವ 3 ಗಂಟೆಯಿಂದ 10 ಗಂಟೆವರೆಗೆ ವಿದ್ಯುತ್ ನೀಡಲಾಗುತ್ತಿದೆ. ರೈತರು ಚಳಿಯಲ್ಲಿ ಎದ್ದು ಹೊಲಗಳಿಗೆ ತೆರಳಲು ಕಷ್ಟವಾಗುತ್ತಿದೆ.

ಆದ್ದರಿಂದ ಸಚಿವರು ರೈತರ ಆರೋಗ್ಯ ಹಾಗೂ ಕಲಘಟಗಿ ತಾಲೂಕಿನಲ್ಲಿ ರೈತರ ಹಿತದೃಷ್ಟಿಯಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಬಿಜೆಪಿ ಯುವ ಮುಖಂಡ ಶಶಿಧರ ನಿಂಬಣ್ಣವರ ಶುಕ್ರವಾರ ಮನವಿ ಮಾಡಿದರು.

ಕೃಷಿ ಚಟುವಟಿಕೆ ಹಿತದೃಷ್ಟಿಯಿಂದ ಬೆಳಗಿನ ಸಮಯಕ್ಕೆ ವಿದ್ಯುತ್‌ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ತಾಲೂಕಿನ ಸಮಸ್ತ ರೈತರ ಪರವಾಗಿ ಸಚಿವರಿಗೆ ಸಮಸ್ಯೆಯನ್ನು ವಿವರಿಸಿದ್ದೇನೆ. ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ನೋಡಿ : ಸಂಸತ್ತಿನ ಅಧಿವೇಶನವನ್ನು ಬೀದಿ ಜಗಳದ ಮಟ್ಟಕ್ಕಿಳಿಸಿದ ಬಿಜೆಪಿಯ ಅನೈತಿಕ ರಾಜಕಾರಣದ ಅನಾವರಣ…. Janashakthi Media

Donate Janashakthi Media

Leave a Reply

Your email address will not be published. Required fields are marked *