ಸಂಸತ್ ಭವನ ಅಲ್ಲ, ‘ಸಸ್ಪೆಂಡ್ ಭವನ’ | ಒಟ್ಟು 141 ಸಂಸದರು ಅಮಾನತು!

ನವದೆಹಲಿ: ಸಂಸತ್ತಿನ ಭದ್ರತಾ ಉಲ್ಲಂಘನೆಯ ಕುರಿತು ಚರ್ಚೆಗೆ ಒತ್ತಾಯಿಸಿದ 49 ವಿಪಕ್ಷದ ಸಂಸದರನ್ನು ಮಂಗಳವಾರ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಮಾನತುಗೊಳಿಸಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಇದಕ್ಕೂ ಮೊದಲು 78 ಪ್ರತಿಪಕ್ಷದ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಹೀಗಾಗಿ ಅಮಾನತಾದ ಒಟ್ಟು ಸಂಸದರ ಸಂಖ್ಯೆ 141ಕ್ಕೆ ಏರಿದೆ. ಇದರಲ್ಲಿ 95 ಸದಸ್ಯರು ಲೋಕಸಭೆಯಿಂದ ಅಮಾನತಾಗಿದ್ದು, 46 ಸದಸ್ಯರು ರಾಜ್ಯಸಭೆಯಿಂದ ಡಿಸೆಂಬರ್ 14 ರಿಂದ ಅಮಾನತುಗೊಂಡಿದ್ದಾರೆ. ಸಸ್ಪೆಂಡ್ ಭವನ

ಸಸ್ಪೆಂಡ್ ಭವನ ಸಂಸತ್ತಿನಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ವಿಪಕ್ಷಗಳು ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದು, ಯಾವುದೇ ಚರ್ಚೆಯಿಲ್ಲದೆ ಪ್ರಮುಖ ಕಾನೂನುಗಳನ್ನು ಅಂಗೀಕರಿಸುತ್ತಿರುವುದು “ಪ್ರಜಾಪ್ರಭುತ್ವದ ಅಪಹಾಸ್ಯ” ಎಂದು ಕರೆದಿದೆ. ಹೊಸದಾಗಿ ಉಧ್ಘಾಟನೆಯಾಗಿದ್ದು ಸಂಸತ್ ಭವನ ಅಲ್ಲ, “ಸಸ್ಪೆಂಡ್ ಭವನ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಎಲ್ಗರ್ ಪರಿಷತ್ ಪ್ರಕರಣ | ಹೋರಾಟಗಾರ ಗೌತಮ್ ನವಲಖಾಗೆ ಬಾಂಬೆ ಹೈಕೋರ್ಟ್ ಜಾಮೀನು

ಲೋಕಸಭೆ ಸೆಕ್ರೆಟರಿಯೇಟ್ ಇತ್ತೀಚೆಗೆ ಅಮಾನತುಗೊಂಡಿರುವ 49 ವಿಪಕ್ಷದ ಸಂಸದರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿರುವ ಸುತ್ತೋಲೆಯನ್ನು ಹೊರಡಿಸಿದ್ದು, “ಅವರ ಅಮಾನತು ಅವಧಿಯಲ್ಲಿ ಅವರು ಮಂಡಿಸಿದ ಯಾವುದೇ ಸೂಚನೆ ಸ್ವೀಕಾರಾರ್ಹವಲ್ಲ. ಅವರನ್ನು ಅಮಾನತುಗೊಳಿಸಿದ ಅವಧಿಯಲ್ಲಿ ನಡೆದ ಸಮಿತಿಗಳ ಚುನಾವಣೆಯಲ್ಲಿ ಅವರು ಮತ ಚಲಾಯಿಸುವಂತಿಲ್ಲ,’’ ಎಂದು ಹೇಳಲಾಗಿದೆ. ಸಸ್ಪೆಂಡ್ ಭವನ

ಅಮಾನತುಗೊಂಡ ಸದಸ್ಯರು ಈಗ ಸಂಸತ್ತಿನ ಚೇಂಬರ್, ಅದರ ಲಾಬಿ ಮತ್ತು ಗ್ಯಾಲರಿಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧವು ಅವರು ಸದಸ್ಯತ್ವ ಹೊಂದಿರುವ ಸಂಸದೀಯ ಸಮಿತಿಗಳ ಸಭೆಗಳಲ್ಲಿ ಭಾಗವಹಿಸುವುದನ್ನು ಕೂಡಾ ನಿರ್ಭಂಧಿಸಿದೆ. “ಅಮಾನತು ಅವಧಿಯವರೆಗೆ ಸಂಸದರು ತಮ್ಮ ದೈನಂದಿನ ಭತ್ಯೆಯನ್ನು ನೀಡುವುದಿಲ್ಲ. ಅವರ ಹೆಸರುಗಳ ಅಡಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ವ್ಯವಹಾರ ಅಥವಾ ಅವರು ಮಂಡಿಸಿದ ಸೂಚನೆಗಳನ್ನು ಅಮಾನತು ಅವಧಿಯಲ್ಲಿ ಪರಿಗಣಿಸಲಾಗುವುದಿಲ್ಲ” ಎಂದು ಸುತ್ತೋಲೆ ಹೇಳಿದೆ

ಡಿಸೆಂಬರ್ 13 ರಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದಿದ್ದ ಇಬ್ಬರು ಶಂಕಿತ ಭಯೋತ್ಪಾದಕರು ಸದನ ನಡೆಯುತ್ತಿರುವಾಗ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಗೆ ಜಿಗಿದು ಕಲರ್ ಬಾಂಬ್‌ಗಳನ್ನು ಎಸೆದಿದಿದ್ದರು. ಈ ಗಂಭೀರ ಭದ್ರತಾ ಉಲ್ಲಂಘನೆಯ ಬಗ್ಗೆ ಚರ್ಚೆ ಮಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಯಾದ ಸಿಎಂ : ಬರ ಪರಿಹಾರ ಬಿಡುಗಡೆಗೆ ಮನವಿ

141 ಸಂಸದರನ್ನು ಯಾಕೆ ಅಮಾನತು ಮಾಡಲಾಗಿದೆ?

ಕಳೆದ ವಾರದ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಸಂಸದರು ಒತ್ತಾಯಿಸಿದ ನಂತರ ಲೋಕಸಭೆ ಮತ್ತು ರಾಜ್ಯ ಸಭೆಯಯಲ್ಲಿ ವಿರೋಧ ಪಕ್ಷದ ಸಂಸದರ ಅಮಾನತು ನಡೆದಿದೆ. ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿ ಗದ್ದಲ ಎಬ್ಬಿಸಿ ಅಶಿಸ್ತು ತೋರಿದ ಕಾರಣಕ್ಕೆ ಪ್ರತಿಪಕ್ಷಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ಈ ಕ್ರಮವನ್ನು ಸಮರ್ಥಿಸಿಕೊಂಡಿದೆ.

ಅದಾಗ್ಯೂ, ಈ ನಡುವೆ ಸದನದಲ್ಲಿ ಮೂರನೇ ಎರಡರಷ್ಟು ವಿರೋಧ ಪಕ್ಷದ ಸದಸ್ಯರು ಇಲ್ಲದೆ ಅಸ್ತಿತ್ವದಲ್ಲಿರುವ ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು ವಿವಾದಾತ್ಮಕ ಮಸೂದೆಗಳನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ. ಈ ಹಿಂದೆ ಕೂಡಾ ಸರ್ಕಾರ ಸಂಸತ್ತಿನಲ್ಲಿ ಯಾವುದೆ ಚರ್ಚೆಯಿಲ್ಲದೆ ಹಲವು ಮಸೂದೆಗಳನ್ನು ಅಂಗೀಕರಿಸಿತ್ತು.

ಇದನ್ನೂ ಓದಿ: ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ? | ಮಮತಾ ಬ್ಯಾನರ್ಜಿ & ಅರವಿಂದ ಕೇಜ್ರಿವಾಲ್ ಬೆಂಬಲ

ಸಂಸತ್ತಿನ ಭದ್ರತೆಯ ಲೋಪದ ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಮೋದಿ, “ಭದ್ರತಾ ಉಲ್ಲಂಘನೆ ಗಂಭೀರ ವಿಚಾರವಾಗಿದೆ. ಅದರ ಬಗ್ಗೆ ವಿವರವಾದ ತನಿಖೆ ನಡೆಯಬೇಕು. ಆದರೆ ಇದರ ಬಗ್ಗೆ ಚರ್ಚೆಯ ಅಗತ್ಯವಿಲ್ಲ” ಎಂದು ಹೇಳಿದ್ದರು.

141 ಸಂಸದರನ್ನು ಅಮಾನತು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ. “ಪ್ರಜಾಪ್ರಭುತ್ವದ ಹತ್ಯೆ ಮತ್ತು ಸಂಸತ್ತಿನ ಘನತೆಯ ಉಲ್ಲಂಘನೆಯ ವಿರುದ್ಧ ಮೌನ ಪ್ರತಿಭಟನೆಗಳ ಮೂಲಕ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ” ಎಂದು ಖರ್ಗೆ ಹೇಳಿದ್ದಾರೆ.

“ಮೊದಲು ಅಕ್ರಮಿಗಳು ಸಂಸತ್ತಿನ ಮೇಲೆ ದಾಳಿ ಮಾಡಿದರು. ಅದರ ನಂತರ ಮೋದಿ ಸರ್ಕಾರ ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ಪ್ರತಿಪಕ್ಷಗಳಿಲ್ಲದ ಸಂಸತ್ತಿನಲ್ಲಿ, ಮೋದಿ ಸರ್ಕಾರ ಯಾವುದೇ ಚರ್ಚೆಯಿಲ್ಲದೆ ಉಳಿದಿರುವ ಪ್ರಮುಖ ಮಸೂದೆಗಳನ್ನು ಬುಲ್ಡೋಜ್ ಮಾಡುತ್ತಾ, ಯಾವುದೇ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುತ್ತಿದೆ” ಎಂದು ಖರ್ಗೆ ಹೇಳಿದ್ದಾರೆ. ಸಸ್ಪೆಂಡ್ ಭವನ

“ಎಲ್ಲರನ್ನೂ ಸದನದಿಂದ ಹೊರಹಾಕಿ ಸರ್ವಾಧಿಕಾರವನ್ನು ನಡೆಸಲು ಅವರು ಬಯಸುತ್ತಾರೆ. ಇವೆಲ್ಲಾ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ, ಅದಕ್ಕಾಗಿಯೇ ನಾವು ಜನರ ಬಳಿಗೆ ಹೋಗುತ್ತೇವೆ. ಅವರು ಅಮಾನತು ಹಿಂತೆಗೆದುಕೊಳ್ಳುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಸದನದಲ್ಲಿ ಹೇಳಿಕೆ ನೀಡಿ ಸದನದಲ್ಲಿ ಚರ್ಚೆ ಆರಂಭಿಸಿ” ಎಂದು ಖರ್ಗೆ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಸಸ್ಪೆಂಡ್ ಭವನ

ವಿಡಿಯೊ ನೋಡಿ: ಜನಸಾಮಾನ್ಯರ ನಡಿಗೆ ಅಭಿವೃದ್ಧಿಯ ಕಡೆಗೆ : ತುಳುನಾಡಿನ ದುಸ್ಥಿತಿಗೆ 3 ದಶಕಗಳ ಬಿಜೆಪಿಯ ದುರಾಡಳಿತವೇ ಕಾರಣ

Donate Janashakthi Media

Leave a Reply

Your email address will not be published. Required fields are marked *