ದಾವಣಗೆರೆ| ಚಾಕೊಲೇಟ್ ನಲ್ಲಿ ಗಾಂಜಾ ಇಟ್ಟು ಮಾರಾಟ; ಆರೋಪಿ ಬಂಧನ

ದಾವಣಗೆರೆ: ನಗರದಲ್ಲಿ ಚಾಕೊಲೇಟ್ ನಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜುಲೈ 15ರಂದು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ರಾಜು ಅಲಿಯಾಸ್ ಪ್ಯಾರಿಲಾಲ್(40) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಈತ ಹಲವು ವರ್ಷಗಳಿಂದ ಬೀಡಾ ಅಂಗಡಿ ಇಟ್ಟುಕೊಂಡಿದ್ದ ಚಾಕೊಲೇಟ್, ಇತರೆ ವಸ್ತುಗಳಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿತ್ತು, ಖಚಿತ ಮಾಹಿತಿ ಮೇರೆಗೆ ದಾವಣಗೆರೆಯ ಬಡಾವಣೆ ಪೊಲೀಸರು ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಸಿಗಂದೂರು ಸೇತುವೆ ಲೋಕಾರ್ಪಣೆ: ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವ ಬಗ್ಗೆ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ

ನಗರದ ರಾಮ್ ಅಂಡ್ ಕೋ ಸರ್ಕಲ್ ನಲ್ಲಿ ಬೀಡಾ ಅಂಗಡಿಯಲ್ಲಿ ಚಾಕೊಲೇಟ್ ನಲ್ಲಿ ಗಾಂಜಾ ಇಟ್ಟು ಮಾರಾಟ ಮಾಡುತ್ತಿದ್ದ,ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಗಾಂಜಾ ಮಿಶ್ರಿತ ಚಾಕೋಲೇಟ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ನೋಡಿ: ಬೆಂಗಳೂರು | ಜುಲೈ13ರಂದು ಸಾಮ್ರಾಟ್ ಅಶೋಕ ನಾಟಕ ಪ್ರದರ್ಶನJanashakthi Media

Donate Janashakthi Media

Leave a Reply

Your email address will not be published. Required fields are marked *