ಡಿಸಿಎಂ ಹುದ್ದೆ ಬಿಟ್ಟುಕೊಟ್ಟ ಸುಶೀಲ್ ಕುಮಾರ್ ಗೆ ರಾಜ್ಯಸಭೆ ಟಿಕೆಟ್

 

  • ರಾಮ್‍ವಿಲಾಸ್‍ ಪಾಸ್ವಾನ್‍ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ  ಡಿ. 27ರಂದು ಚುನಾವಣೆ

ಬಿಹಾರ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದು ಸರ್ಕಾರ ರಚಿಸಿದ ನಂತರ ಉಪ ಮುಖ್ಯಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಅವರಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್‌ ನೀಡಿದೆ.

ಬಿಹಾರದಲ್ಲಿ ರಾಜ್ಯಸಭಾ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸುಶೀಲ್‌ ಕುಮಾರ್‌ ಮೋದಿ ಅವರು ತನ್ನ ಅಭ್ಯರ್ಥಿ ಎಂದು ಬಿಜೆಪಿ ಶುಕ್ರವಾರ ಘೋಷಣೆ ಮಾಡಿದೆ.

ಈ ಹಿಂದಿನ ಎನ್‌ಡಿಎ ಸರ್ಕಾರಗಳಲ್ಲಿ ಮುಖ್ಯಮಂತ್ರಿ ನಿತೀಶ್‌ ಅವರೊಂದಿಗೆ ಸುಶೀಲ್‌ ಉಪ ಮುಖ್ಯಮಂತ್ರಿಯಾಗಿರುತ್ತಿದ್ದರು. ಈ ಬಾರಿಯೂ ಅಂಥದ್ದೇ ಪರಿಸ್ಥಿತಿ ಉದ್ಭವವಾಗಿತ್ತಾದರೂ, ಹೈಕಮಾಂಡ್‌ ಸೂಚನೆ ಮೇರೆಗೆ ನಿತೀಶ್‌ ಡಿಸಿಎಂ ಸ್ಥಾನ ಅಲಂಕರಿಸಿರಲಿಲ್ಲ.

ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ಯ ರಾಮ್‍ ವಿಲಾಸ್‍ ಪಾಸ್ವಾನ್‍ ಅವರ ನಿಧನದಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಅಲ್ಲಿ ಉಪ ಚುನಾವಣೆ ಎದುರಾಗಿದೆ. ಡಿ. 27ರಂದು ಚುನಾವಣೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *