ನ. 24ರಂದು ಸುಪ್ರೀಂ ಕೋರ್ಟ್‌ನ ಸಿಜಿಐ ಆಗಿ ಸೂರ್ಯ ಕಾಂತ್‌ ಪ್ರಮಾಣ ವಚನ

ನವದೆಹಲಿ: ಸುಪ್ರೀಂ ಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸೂರ್ಯ ಕಾಂತ್‌ ನವೆಂಬರ್‌ 24ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಲಿ ಸಿಜೆಐ ಬಿ.ಆರ್‌. ಗವಾಯಿ ನವೆಂಬರ್‌ 23ರಂದು ನಿವೃತ್ತರಾದರು.

ಸೂರ್ಯ ಕಾಂತ್‌ ರನ್ನು ಮುಂದಿನ ಸಿಜೆಐ ಆಗಿ ಅಕ್ಟೋಬರ್‌ 30ರಂದು ನೇಮಕ ಮಾಡಲಾಯಿತು. 15 ತಿಂಗಳು ಈ ಹುದ್ದೆಯಲ್ಲಿರುವ ಇವರು, 65 ವರ್ಷ ವಯಸ್ಸು ತಲುಪಿದ ಬಳಿಕ 2027ರ ಫೆ.9ರಂದು ನಿವೃತ್ತರಾಗಲಿದ್ದಾರೆ.

ಇದನ್ನೂ ಓದಿ: ವೃತ್ತಿಪರ ವಿದ್ಯಾರ್ಥಿಗಳ ಹಾಸ್ಟೆಲ್ ಆಯ್ಕೆ ಪಟ್ಟಿ ಬಿಡುಗಡೆ ಮಾಡಲು ಒತ್ತಾಯಿಸಿ ಎಸ್ಎಫ್ಐ ಪ್ರತಿಭಟನೆ

ಹರಿಯಾಣದ ಹಿಸ್ಸಾರ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಸೂರ್ಯ ಕಾಂತ್‌ ಅವರು, ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಯಾಗಿ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಹಾಗೂ ಬಿಹಾರದಲ್ಲಿ ಮತರಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಕುರಿತ ಪ್ರಕರಣ ಸೇರಿದಂತೆ ಹಲವು ಮಹತ್ವದ ತೀರ್ಪು ನೀಡಿದ ‍ಪೀಠಗಳಲ್ಲಿ ಸೂರ್ಯ ಕಾಂತ್‌ ಇದ್ದರು.

ಇದನ್ನೂ ನೋಡಿ: ಸರ್ಕಾರಿ ಶಾಲೆಗಳಿಗೆ ಬೀಗ | ಅರ್ಧದಷ್ಟು ಶಾಲೆಗಳನ್ನು ಮುಚ್ಚುವ ಸರ್ಕಾರದ ನಿಲುವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *