ಕೋಲಾರ: ಜೂನ್ 27 ಶುಕ್ರುವಾರದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪರವಾನಿಗೆ ಪಡೆದ ಭೂಮಾಪಕರು ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲು ಕರೆ ನೀಡಿದ್ದು, ಸರ್ವೇ ಇಲಾಖೆಯ ಬಹುತೇಕ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ರಾಜ್ಯಾದ್ಯಂತ ಸುಮಾರು 7 ಸಾವಿರ ಮಂದಿ ಪರವಾನಿಗೆ ಹೊಂದಿರುವ ಭೂಮಾಪಕರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದು, ಇದರಿಂದ ಸಾರ್ವಜನಿಕರ ಹಾಗೂ ಸರಕಾರದ ಸರ್ವೇ ಕಾರ್ಯಗಳು ವಿಳಂಬವಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಚನ್ನರಾಯಪಟ್ಟಣ ರೈತರ ಮೇಲೆ ಪೊಲೀಸ್ ದೌರ್ಜನ್ಯ: ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ
ಸರಕಾರಿ ನೌಕರರಾಗಿ ಖಾಯಂಗೊಳಿಸಬೇಕು. ಸೇವಾ ಭದ್ರತೆಯನ್ನು ನೀಡಬೇಕು, ಸರ್ವೆ ಕಾರ್ಯ ನಡೆಸುವ ಸಂದರ್ಭದಲ್ಲಿ ಸುರಕ್ಷೆ ಕಲ್ಪಿಸಬೇಕು ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಭೂಮಾಪಕರು ಆಗ್ರಹಿಸಿದ್ದಾರೆ.
ಇದನ್ನೂ ನೋಡಿ: ತುರ್ತುಪರಿಸ್ಥಿತಿ | ಇತಿಹಾಸ ಮರೆತಿದ್ದೇ ದುರಂತ – ರಾಜೇಂದ್ರ ಚೆನ್ನಿ | Janashakthi Media
