ನವದೆಹಲಿ: ಏಷ್ಯಾದ ಮೊದಲ ಮಹಿಳಾ ಲೋಕೋ ಪೈಲಟ್ ಸುರೇಖಾ ಯಾದವ್ ಅವರು ಇದೀಗ ಹೊಸದಾಗಿ ಪರಿಚಯಿಸಲಾದ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನಿರ್ವಹಿಸಿದ ಮೊದಲ ಮಹಿಳಾ ಲೋಕೋ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಂದೇ ಭಾರತ್ ಚಲಾಯಿಸುತ್ತಿರುವ ಲೋಕೋ ಪೈಲಟ್ ಸುರೇಖಾ ಯಾದವ್ಸೋಮವಾರ ಮುಂಬೈನ ಸೊಲ್ಲಾಪುರ ನಿಲ್ದಾಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಡುವೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲನ್ನು ಅವರು ಚಲಾಯಿಸಿದರು. ರೈಲು ನಿನ್ನೆ ಸರಿಯಾದ ಸಮಯಕ್ಕೆ ಸೊಲ್ಲಾಪುರ ನಿಲ್ದಾಣದಿಂದ ಹೊರಟು, ಆಗಮನದ ನಿಗದಿತ ಸಮಯಕ್ಕಿಂತ ಐದು ನಿಮಿಷಗಳ ಮೊದಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಅನ್ನು ತಲುಪಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.
ಸೆಂಟ್ರಲ್ ರೈಲ್ವೇ ಪ್ರಕಟಣೆಯ ಪ್ರಕಾರ, 450 – ಕಿಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ ಸುರೇಖಾ ಯಾದವ್ ಅವರನ್ನು CSMT ನ ಪ್ಲಾಟ್‌ಫಾರ್ಮ್ ಸಂಖ್ಯೆ 8 ರಲ್ಲಿ ಸನ್ಮಾನಿಸಲಾಯಿತು.
ಅಂತಾರಾಷ್ಟ್ರೀಯ ಮಹಿಳಾ ದಿನ 8ರಂದು ಸೆಂಟ್ರಲ್ ರೈಲ್ವೇಯ ಪ್ರತಿಷ್ಠಿತ ಮುಂಬೈ- ಪುಣೆ ಡೆಕ್ಕನ್ ಕ್ವೀನ್ ಎಕ್ಸ್‌ಪ್ರೆಸ್ ಮತ್ತು ಸಿಎಸ್‌ಎಂಟಿ – ಕಲ್ಯಾಣ ಲೇಡೀಸ್ ವಿಶೇಷ ಸ್ಥಳೀಯ ರೈಲನ್ನು ಎಲ್ಲಾ ಮಹಿಳಾ ಸಿಬ್ಬಂದಿಯೊಂದಿಗೆ ಪ್ರಾರಂಭಿಸಿತ್ತು. ಆ ದಿನ ಸುರೇಖಾ ಯಾದವ್ ಅವರು ಸಹಾಯಕ ಲೋಕೋ ಪೈಲಟ್ ಆಗಿ ಸಯಾಲಿ ಸಾವರ್ಡೇಕರ್ ಅವರೊಂದಿಗೆ ಡೆಕ್ಕನ್ ಕ್ವೀನ್ ರೈಲನ್ನು ನಿರ್ವಹಿಸಿದರು.ಸಿಎಸ್‌ಎಂಟಿ-ಸೋಲಾಪುರ ಮತ್ತು ಸಿಎಸ್‌ಎಂಟಿ-ಸಾಯಿನಗರ ಶಿರಡಿ ಮಾರ್ಗಗಳಲ್ಲಿ ಕೇಂದ್ರ ರೈಲ್ವೇ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಿದ್ದವು.
ಇದನ್ನೂ ಓದಿ : ಗುಜರಾತ್ನಲ್ಲಿ ಮತ್ತೆ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದ ಹಸು; ರೈಲಿನ ಮುಂಭಾಗ ಜಖಂ, ಪ್ರಯಾಣಿಕರು ಸೇಫ್