ತ್ರಿಭಾಷ ಸೂತ್ರವನ್ನು ಜಾರಿಗೊಳಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ – ಪಾಪ್ರೆ

ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅಡಿಯಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವಂತೆ ಕೋರಿ ವಕೀಲರು ಮತ್ತು ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದನ್ನು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ (ಪಾಫ್ರೆ) ಸ್ವಾಗತಿಸುತ್ತದೆ ಎಂದು ಪ್ರಧಾನ ಸಂಚಾಲಕರು ನಿರಂಜನಾರಾಧ್ಯ ವಿ ಪಿ ಅವರು ಹೇಳಿದರು.

ಇದನ್ನು ಓದಿ :-ಪಾಕಿಸ್ತಾನದಿಂದ ಭಾರತಕ್ಕೆ 400 ಮಿಸೈಲ್ ದಾಳಿ: ಕರ್ನಲ್ ಸೋಫಿಯಾ ಖುರೇಷಿ ಸ್ಪಷ್ಟನೆ

ಎನ್‌ಇಪಿ ಕೇಂದ್ರ ನೀತಿಯನ್ನು ಅನುಸರಿಸಲು ರಾಜ್ಯವನ್ನು ಒತ್ತಾಯಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದು, ಇದು ಸಂವಿಧಾನದಲ್ಲಿನ ಒಕ್ಕೂಟ ತತ್ವ ಹಾಗೂ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವದನ್ನು ನ್ಯಾಯಾಲವು ಗೌರವಿಸಿ ಎತ್ತಿ ಹಿಡಿದಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ :-ಸಿವಿಲ್ ತಗಾದೆಗಳಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾದವರ ವಿರುದ್ದ ಕ್ರಮ: ಬಿ. ದಯಾನಂದ

ಇನ್ನಾದರೂ, ಕೇಂದ್ರ ಶಿಕ್ಷಣದ ಕೇಂದ್ರೀಕರಣ ಹಾಗೂ ಬಲವಂತ ಹೇರಿಕೆಯನ್ನು ನಿಲ್ಲಿಸಬೇಕೆಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ ಕೇಂದ್ರವನ್ನು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *