ಜೈಲುಗಳಲ್ಲಿ ಜಾತಿ ತಾರತಮ್ಯದ ಆಚರಣೆಗಳ ವಿರುದ್ಧ ಸುಪ್ರಿಂ ಕೋರ್ಟಿನ ಮಹತ್ವದ ತೀರ್ಪು: ಸಿಪಿಐ(ಎಂ) ಸ್ವಾಗತ

ನವದೆಹಲಿ: ಕಾರಾಗೃಹ/ಜೈಲುಗಳಲ್ಲಿನ ಜಾತಿ ತಾರತಮ್ಯದ ಆಚರಣೆಗಳನ್ನು ಕುರಿತಂತೆ ಮುಖ್ಯ ನ್ಯಾಯಾಧೀಶರ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ನೀಡಿದ ತೀರ್ಪು ಹೊಲಸು ಜಾತಿ ವ್ಯವಸ್ಥೆಯ ವಿರುದ್ಧದ ಅತ್ಯಂತ ಅಗತ್ಯವಾದ ಹೋರಾಟದಲ್ಲಿ ನ್ಯಾಯಾಂಗದ ಪ್ರಮುಖ ಮಧ್ಯಪ್ರವೇಶವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಸ್ವಾಗತಿಸಿದೆ. ಅದು ಇಂತಹ ಆಚರಣೆಗಳನ್ನು ಕೊನೆಗೊಳಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

‘ಘನತೆಯಿಂದ ಬದುಕುವ ಹಕ್ಕು’ ಸೆರೆಯಲ್ಲಿರುವವರಿಗೂ ವಿಸ್ತರಿಸುತ್ತದೆ ಮತ್ತು ವಿವಿಧ ಜೈಲು ಕೈಪಿಡಿಗಳು ಮತ್ತು ಕಾನೂನುಗಳಲ್ಲಿ ಜಾತಿ ಪಕ್ಷಪಾತ ಮತ್ತು ಪ್ರತ್ಯೇಕತೆಗೆ ಅವಕಾಶ ನೀಡುವ ನಿಬಂಧನೆಗಳು ಅಸಂವಿಧಾನಿಕವೆಂದು ನ್ಯಾಯಾಲಯವು ಘೋಷಿಸಿದೆ.

ಇದನ್ನು ಓದಿ : ಉತ್ತರ ಪ್ರದೇಶ| ಇಬ್ಬರು ಮಕ್ಕಳ ಸಹಿತ ದಲಿತ ಕುಟುಂಬದ ನಾಲ್ವರ ಗುಂಡಿಕ್ಕಿ ಹತ್ಯೆ

ಜಾತಿ ಪಕ್ಷಪಾತ ಮತ್ತು ಅಸ್ಪೃಶ್ಯತೆಯ ಕಲ್ಪನೆಗಳ ಆಧಾರದ ಮೇಲೆ ಕೈದಿಗಳನ್ನು ಕೆಲಸದ ನಿಯೋಜನೆ, ವಸತಿ ವ್ಯವಸ್ಥೆ ಮತ್ತು ಆಹಾರ ತಯಾರಿಕೆಗೆ ಒಳಪಡಿಸುವ ನಿಬಂಧನೆಗಳಿರುವುದನ್ನು ಎತ್ತಿ ತೋರಿಸಿ, ಅವೆಲ್ಲವನ್ನೂ ಜೈಲು ಕೈಪಿಡಿಗಳಿಂದ ತೆಗೆದುಹಾಕುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದೆ.

ಜೈಲು ಜೀವನದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತೊಡೆದುಹಾಕಲು ಎಲ್ಲಾ ಸರ್ಕಾರಗಳು ಮೂರು ತಿಂಗಳ ನಿಗದಿತ ಸಮಯದೊಳಗೆ ನ್ಯಾಯಾಲಯವು ಸೂಚಿಸಿದ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

ಇದನ್ನು ನೋಡಿ : ಮತೀಯ ದ್ವೇಷದ ವಿರುದ್ಧ ಹೋರಾಡಬೇಕಿದೆ – ಡಾ. ಎಸ್‌.ವೈ. ಗುರುಶಾಂತJanashakthi Media

Donate Janashakthi Media

Leave a Reply

Your email address will not be published. Required fields are marked *