ದೆಹಲಿ: 26 ವಾರಗಳ ಅವಧಿಯಲ್ಲಿ ಗರ್ಭಪಾತಕ್ಕೆ ಅನುಮತಿ ನೀಡುವಂತೆ ವಿವಾಹಿತ ಮಹಿಳೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ ಅವರು, ಮಹಿಳೆಯು ಗರ್ಭ ಧರಿಸಿ 26 ವಾರ ಮತ್ತು 5 ದಿನ ಆಗಿದೆ. ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸುವುದು ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯಿದೆಯ ಸೆಕ್ಷನ್ 3 ಮತ್ತು 5ರ ಉಲ್ಲಂಘನೆಯಾಗಿದೆ. ಏಕೆಂದರೆ ತಾಯಿಗೆ ಯಾವುದೇ ಅಪಾಯವಿಲ್ಲ ಮತ್ತು ಇದು ಮಗುವಿನ ಅಸಜಹತೆ ಪ್ರಕರಣವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಗರ್ಭಪಾತ
ಇದನ್ನೂ ಓದಿ : ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ವೈದ್ಯಕೀಯ ಮಂಡಳಿ ರಚನೆಗೆ ಕಲ್ಕತ್ತಾ ಹೈಕೋರ್ಟ್ ನಿರ್ದೇಶನ
ಒಂದು ವೇಳೆ ತಾಯಿಗೆ ಮಗುವಿನ ಅಗತ್ಯವಿಲ್ಲ ಅಥವಾ ಇಷ್ಟವಿಲ್ಲವೆಂದರೆ ಮಗುವನ್ನು ತಾಯಿ ದತ್ತು ನೀಡಬಹುದು ಎಂದು ಪೀಠವು ಹೇಳಿದೆ. ಗರ್ಭಧಾರಣೆಯು 26 ವಾರಗಳು ಮತ್ತು 5 ದಿನ, ಈ ಸಮಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳುವುದು ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯ ಕಾಯಿದೆ ಸೆಕ್ಷನ್ 3 ಮತ್ತು 5 ಉಲ್ಲಂಘಿಸಿದಂತೆ, ಈ ಕಾರಣದಿಂದ ತಾಯಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದೆ. ಗರ್ಭಪಾತ
26 ವಾರಗಳ ಗರ್ಭಾವಸ್ಥೆಯಲ್ಲಿರುವ ಮಹಿಳೆಯ ಎಲ್ಲ ಖರ್ಚುಗಳನ್ನು ಆಯಾಯ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ನಿರ್ದೇಶನ ನೀಡಿದೆ. ಅರ್ಜಿದಾರೊಬ್ಬರು ಎರಡು ಮಕ್ಕಳನ್ನು ಪಡೆದ ತಾಯಿಗೆ ಮೂರನೇ ಮಗುವಿಗೆ ಗರ್ಭ ಧರಿಸಿದಾಗ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗುವ ಕಾರಣ ಆಕೆಗೆ ಗರ್ಭಪಾತ ಮಾಡಿಸಲು ಅವಕಾಶ ನೀಡಬೇಕು ಎಂದು ಹೇಳಿದರು. ಆದರೆ ಈ ಹಿಂದೆ ಈ ಬಗ್ಗೆ ಏಮ್ಸ್ ಆಸ್ಪತ್ರೆಗೆ ವರದಿಯನ್ನು ಕೇಳಿದ್ದ ಸುಪ್ರೀಂ. ಇದೀಗ ಈ ವೈದ್ಯಕೀಯ ವರದಿ ಪ್ರಕಾರ ಸುಪ್ರೀಂ ಈ ಆದೇಶವನ್ನು ನೀಡಿದೆ. ಗರ್ಭಪಾತ
ಈ ವಿಡಿಯೋ ನೋಡಿ : ಅಯ್ಯೋ ಹೊಟ್ಟೆನೋವು| ಹದಿಹರಯದ ಹುಡುಗಿಯರ ಮುಟ್ಟಿನ ಸಮಸ್ಯೆಗಳೇನು? ಡಾ ವೀಣಾ ಎನ್ ಸುಳ್ಯ ಹೇಳುವುದೇನು?