- ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವಂತಿಲ್ಲ
- ಲೈಂಗಿಕ ಕಾರ್ಯಕರ್ತೆಯರಿಗೆ ಘನತೆ, ಸಮಾನ ರಕ್ಷಣೆಯ ಹಕ್ಕಿದೆ
- ವೇಶ್ಯಾಗೃಹ ನಡೆಸುವುದು ಕಾನೂನುಬಾಹಿರವಲ್ಲ
ನವದೆಹಲಿ:ಲೈಂಗಿಕ ಚಟುವಟಿಕೆ ಕಾನೂನುಬದ್ಧ ಎಂದು ಘೋಷಿಸಿದ ಸುಪ್ರೀಂಕೋರ್ಟ್, ಲೈಂಗಿಕ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸುವುದಾಗಲಿ ಅಥವಾ ಯಾವುದೇ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಎಂದು ಪೊಲೀಸರಿಗೆ ಸೂಚಿಸಿದೆ.
ಲೈಂಗಿಕ ಕಾರ್ಯಕರ್ತೆಯರಿಗೆ ನಿಂದಿಸಬಾರದು ಮತ್ತು ದೌರ್ಜನ್ಯಕ್ಕೊಳಗಾದ ಯಾವುದೇ ಲೈಂಗಿಕ ಕಾರ್ಯಕರ್ತೆಯರಿಗೆ ಕಾನೂನಿನ ಪ್ರಕಾರ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಇದೊಂದು ವೃತ್ತಿ ಪರ ಕೆಲಸ ಎಂದು ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್, ಬಿ.ಆರ್ ಗವಾಯಿ ಮತ್ತು ಎ.ಎಸ್ ಬೊಪ್ಪಣ್ಣ ಅವರನ್ನೊಳಗೊಂಡ ಪೀಠವು ಸೂಚಿಸಿದೆ.
ಲೈಂಗಿಕ ಕಾರ್ಯಕರ್ತೆಯ ಒಪ್ಪಿಗೆಯೊಂದಿಗೆ ಲೈಂಗಿಕ ಕಾರ್ಯದಲ್ಲಿ ಭಾಗವಹಿಸುತ್ತಿದ್ದರೆ ಎಂದಾಗ ಪೊಲೀಸರು ಮಧ್ಯಪ್ರವೇಶಿಸಬಾರದು. ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಲೈಂಗಿಕ ಕಾರ್ಯಕರ್ತೆಯರು ತಮಗಾದ ದೌರ್ಜನ್ಯದಡಿ ದೂರು ನೀಡಿದಾಗ ಪೊಲೀಸರು ಯಾವುದೇ ತಾರತಮ್ಯ ನಡೆಸಬಾರದು. ಯಾವುದೇ ವೃತ್ತಿ ನಡೆಸುತ್ತಿದ್ದರೂ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಈ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ವಾಸಿಸುವ ಹಕ್ಕನ್ನು ಹೊಂದಿದ್ದಾರೆ ಎನ್ನುವುದನ್ನು ನಿರಾಕರಿಸುವ ಹಕ್ಕಿಲ್ಲ.
ವೇಶ್ಯಾವಾಟಿಕೆ ಅಕ್ರಮವಲ್ಲ ವೇಶ್ಯಾಗೃಹ ನಡೆಸುವುದು ಕಾನೂನುಬಾಹಿರವಲ್ಲ. ಹೀಗಾಗಿ ವೇಶ್ಯಾಗೃಹಗಳ ಮೇಲೆ ದಾಳಿ ನಡೆಸಿ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸುವುದು, ದಂಡ ಹಾಕುವುದು, ಕಿರುಕುಳ ನೀಡುವುದು ಅಥವಾ ಬಲಿಪಶುಗಳನ್ನಾಗಿ ಮಾಡುವುದು, ಲೈಂಗಿಕ ವಹಿವಾಟಿನಲ್ಲಿ ತೊಡಗಿದ್ದಾಳೆ ಎಂಬ ಕಾರಣಕ್ಕೆ ತಾಯಿಯಿಂದ ಆಕೆಯ ಮಗುವನ್ನು ದೂರ ಮಾಡುವಂತಿಲ್ಲ. ವೇಶ್ಯಾಗೃಹದಲ್ಲಿ ಅಥವಾ ಲೈಂಗಿಕ ಕಾರ್ಯಕರ್ತೆಯರ ಜತೆ ಅಪ್ರಾಪ್ತ ವಯಸ್ಸಿನ ಮಗು ಪತ್ತೆಯಾದರೆ, ಆ ಮಗುವನ್ನು ಕಳ್ಳಸಾಗಣಿಕೆ ಮಾಡಲಾಗಿದೆ ಎಂದು ಭಾವಿಸಬಾರದು ಎಂದು ಕೋರ್ಟ್ ಹೇಳಿದೆ.
ದೇಶದಲ್ಲಿರುವ ಎಲ್ಲ ಪ್ರಜೆಗಳಿಗಿರುವ ಪ್ರತಿ ಸಾಂವಿಧಾನಿಕ ಹಕ್ಕಿನ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು. ರಕ್ಷಣಾ ಕಾರ್ಯಾಚರಣೆ, ಬಂಧನ ಮತ್ತು ದಾಳಿ ಸಂಬಂಧಿತ ವಿಷಯಗಳನ್ನು ಪ್ರಸಾರ ಮಾಡುವಾಗ ಲೈಂಗಿಕ ಕಾರ್ಯಕರ್ತೆಯರ ಗುರುತನ್ನು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಮಾರ್ಗಸೂಚಿ ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಪತ್ರಿಕಾ ಮಂಡಳಿಗೆ ಸೂಚಿಸಿದೆ.
ಲೈಂಗಿಕ ಕ್ರಿಯೆಗೆ ಅವರನ್ನು ಬಲವಂತವಾಗಿ ಪ್ರಚೋದಿಸುವುದು, ಟೀಕಿಸುವುದು ಎಲ್ಲವು ಕಾನೂನು ಬಾಹಿರ ಎಂದು ಮತ್ತು ಇನ್ನಷ್ಟು ಹೆಚ್ಚಿನ ವಿಚಾರಣೆಗಾಗಿ ಜುಲೈ 27ಕ್ಕೆ ಮುಂದೂಡಿದೆ.