ನವದೆಹಲಿ| ಶಿಕ್ಷೆ ಪೂರ್ಣಗೊಂಡ ನಂತರ ಕೈದಿ ಗಳಿಗೆ ಶಿಘ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಸುಪ್ರೀಂ ಕೋರ್ಟ್  ಶಿಕ್ಷೆ ಪೂರ್ಣಗೊಂಡ ನಂತರವೂ ಜೈಲಿನಲ್ಲಿ ಕೊಳೆಯುತ್ತಿರುವ ಕೈದಿಗಳ ಬಗ್ಗೆ  ಕಳವಳ ವ್ಯಕ್ತಪಡಿಸಿದ್ದು, ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ ಅಂತಹ ಕೈದಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ನವದೆಹಲಿ

ಯಾವುದೇ ಆರೋಪಿ ಅಥವಾ ಅಪರಾಧಿ ಶಿಕ್ಷೆಯ ಅವಧಿಯನ್ನು ಮೀರಿ ಜೈಲಿನಲ್ಲಿ ಉಳಿದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಈ ಆದೇಶದ ಪ್ರತಿಯನ್ನು ರಿಜಿಸ್ಟ್ರಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳಿಗೆ ಕಳುಹಿಸಬೇಕು ಎಂದು ಪೀಠ ಹೇಳಿದೆ. ತಮ್ಮ ಶಿಕ್ಷೆ ಅವಧಿ ಮುಗಿದ ಕೂಡಲೇ ಯಾದವ್ ಬಿಡುಗಡೆ ಆಗಬೇಕಿತ್ತು ಎಂದು ಪೀಠ ಹೇಳಿದೆ.  ಯಾದವ್ 20 ವರ್ಷಗಳ ಸೆರೆವಾಸ ಅನುಭವಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಈ ಹಿಂದೆ ಅವರಿಗೆ 3 ತಿಂಗಳ ಫರ್ಲೊ ನೀಡಿತ್ತು. ನವದೆಹಲಿ

ಇದನ್ನೂ ಓದಿ: ಅನುಕಂಪದ ನೌಕರಿ ನಿರಾಕರಿಸುವಂತಿಲ್ಲ: ಹೈಕೋರ್ಟ್

2002ರ ನಿತೀಶ್ ಕಟಾರಾ ಕೊಲೆ ಪ್ರಕರಣದಲ್ಲಿ ಸುಖದೇವ್ ಯಾದವ್ ಅಲಿಯಾಸ್ ಪೆಹಲ್ವಾನ್ ಅವರನ್ನು ಬಿಡುಗಡೆ ಮಾಡಲು ಆದೇಶಿಸುವಾಗ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ನಿರ್ದೇಶನ ನೀಡಿದೆ. ಈ ವರ್ಷದ ಮಾರ್ಚ್‌ಗೆ ಯಾದವ್ ಅವರ 20 ವರ್ಷಗಳ ಶಿಕ್ಷೆ ಪೂರ್ಣಗೊಂಡಿದೆ ಎಂದು ಅದು ಗಮನಿಸಿದೆ. ನವದೆಹಲಿ

ಫರ್ಲೊ ಎಂಬುದು ಜೈಲಿನಿಂದ ತಾತ್ಕಾಲಿಕ ಬಿಡುಗಡೆಯಾಗಿದೆ. ಸಂಪೂರ್ಣ ಶಿಕ್ಷೆಯ ಅಮಾನತು ಅಥವಾ ವಿನಾಯಿತಿ ಅಲ್ಲ.ಸಾಮಾನ್ಯವಾಗಿ ದೀರ್ಘಾವಧಿಯ ಜೈಲು ಶಿಕ್ಷೆ ಅನುಭವಿಸಿದವರಿಗೆ ನೀಡಲಾಗುತ್ತದೆ.

ಮೂರು ವಾರಗಳ ಕಾಲ ಫರ್ಲೋ ಮೇಲೆ ಬಿಡುಗಡೆ ಮಾಡುವಂತೆ ಕೋರಿದ್ದ ತಮ್ಮ ಮನವಿಯನ್ನು ರದ್ದು ಮಾಡಿದ್ದ ದೆಹಲಿ ಹೈಕೋರ್ಟ್‌ನ 2024 ನವೆಂಬರ್‌ ತಿಂಗಳ ಆದೇಶವನ್ನು ಪ್ರಶ್ನಿಸಿ ಯಾದವ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಸುಪ್ರೀಂ’ ನಿರ್ದೇಶನಗಳು:

* ಯಾವ ವ್ಯಕ್ತಿಯೂ ಆತನ/ಆಕೆಯ ಜೀವನ ಅಥವಾ ವೈಯಕ್ತಿಕ ಸ್ವಾತಂತ್ರ್ಯದಿಂದ ವಂಚಿತರಾಗಬಾರದು

* ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿ ಈ ಆದೇಶದ ಪ್ರತಿಯನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಗಳಿಗೆ ರವಾನಿಸಬೇಕು

* ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವೂ ಸೆರೆವಾಸದಲ್ಲಿರುವವರನ್ನು ಗುರುತಿಸಬೇಕು

* ರಾಷ್ಟ್ರೀಯ ಕಾನೂನು ಸೇವೆ ಪ್ರಾಧಿಕಾರಗಳಿಗೂ ಆದೇಶದ ಪ್ರತಿ ಕಳುಹಿಸಬೇಕು. ಪ್ರಾಧಿಕಾರವು ಈ ಆದೇಶದಲ್ಲಿನ ಮಾಹಿತಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕಾನೂನು ಸೇವಾ ಪ್ರಾಧಿಕಾರಗಳಿಗೆ ಹಾಗೂ ಜಿಲ್ಲೆಗಳಲ್ಲಿರುವ ಕಾನೂನು ಪ್ರಾಧಿಕಾರಗಳಿಗೆ ಕಳುಹಿಸಬೇಕು

ಇದನ್ನೂ ನೋಡಿ : ವಚನಾನುಭವ – 31 | ಅಂಬಿಗರ ಚೌಡಯ್ಯನ ವಚನ – ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ Janashakthi Media

Donate Janashakthi Media

Leave a Reply

Your email address will not be published. Required fields are marked *