ನವದೆಹಲಿ: ದೇಶದ ಎಲ್ಲಾ ಖಾಸಗಿ ಹಾಗೂ ಡೀಮ್ಡ್ ವಿವಿಗಳ ಲೆಕ್ಕ ಪರಿಶೋಧನೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರಿದ್ದ ಪೀಠ ನವೆಂಬರ್ 28ರಂದು ಆದೇಶಿಸಿದೆ.
ಜತೆಗೆ ವಿವಿಗಳ ಸ್ಥಾಪನೆ, ವಿವಿಗಳ ಆಡಳಿತ ಯಾರ ಕೈಯಲ್ಲಿದೆ, ವಿವಿಗಳ ಕೈಯಲ್ಲಿರುವ ನಿಯಂತ್ರಕ ಕಾನೂನುಗಳು ಮತ್ತು ವಿವಿಗಳು ಲಾಭರಹಿತ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆಯೇ ಎಂಬಿತ್ಯಾದಿ ಅಂಶಗಳನ್ನು ಬಹಿರಂಗಪಡಿಸುವಂತೆ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ಬೆಳಗಾವಿ | ಚಳಿಗಾಲದ ಅಧಿವೇಶನದಲ್ಲಿ ಗೋಕಾಕ ಜಿಲ್ಲಾ ರಚನೆಗೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ
ಇದಕ್ಕಾಗಿ ವೈಯಕ್ತಿಕವಾಗಿ ಪ್ರಮಾಣೀಕರಿಸಿದ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಯುಜಿಸಿಗೆ ನಿರ್ದೇಶಿಸಿದೆ.
ಅಮಿಟಿ ವಿವಿಯ ವಿದ್ಯಾರ್ಥಿನಿಯೊಬ್ಬರು, ಕಾನೂನುಬದ್ಧವಾಗಿ ತಮ್ಮ ಹೆಸರನ್ನು ಬದಲಾಯಿಸಿದ ಬಳಿಕ ಸಂಸ್ಥೆಯಿಂದ ಕಿರುಕುಳಕ್ಕೊಳಗಾಗಿದ್ದಾಗಿ, ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಕ್ಕೊಳಗಾಗಿದ್ದಾಗಿ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈ ವಿವಿಯ ಆಡಳಿತಾತ್ಮಕ ನಡೆಯು, ಇಡೀ ದೇಶದ ಖಾಸಗಿ ವಿವಿಗಳ ಪರಿಶೀಲನೆಗೆ ದಾರಿ ಮಾಡಿಕೊಟ್ಟಂತಾಗಿದೆ.
ಇದನ್ನೂ ನೋಡಿ: ಕಾರ್ಖಾನೆ ಕಾರ್ಮಿಕರ ಸಂಕಟಗಳು |CITU | ಕಾರ್ಮಿಕರು Janashakthi Media
