ಬೆಂಗಳೂರು: ನಗರದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯರೆಡ್ಡಿ ತಕರಾರು ಅರ್ಜಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಕಾಂಗ್ರೆಸ್
ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಶಾಸಕ ಸ್ಥಾನ ಅಸಿಂಧುಗೊಳಿಸಬೇಕು ಎಂದು ಈ ಹಿಂದೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ರಾಮಮೂರ್ತಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಕರ್ನಾಟಕದ ಶ್ರಮಜೀವಿಗಳಿಂದ ಅಹೋರಾತ್ರಿ ಹೋರಾಟಕ್ಕೆ ಚಾಲನೆ
ಸೌಮ್ಯರೆಡ್ಡಿ ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ DVD ಸೇರಿ ಪ್ರಮುಖ 10 ದಾಖಲೆ ಹಾಜರುಪಡಿಸಬೇಕು ಎಂದಿ ಆದೇಶವಿತಿತ್ತು. ಕಳೆದ ಫೆ.14ರವರೆಗೆ ಡಿವಿಡಿ ಸೇರಿದಂತೆ ಇತರೆ ದಾಖಲೆ ಸಲ್ಲಿಸಲು ಸೌಮ್ಯಾರೆಡ್ಡಿ ಅವರಿಗೆ ಹೈಕೋರ್ಟ್ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ರಾಮಮೂರ್ತಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದು, ಇದರಿಂದ ಅವರಿಗೆ ಭಾರೀ ಆಘಾತ ಎದುರಾದಂತಾಗಿದೆ.
ಸೌಮ್ಯಾರೆಡ್ಡಿ ಸಲ್ಲಿಸಿರುವ ದಾಖಲೆಗೆಳಿಗೆ 3 ವಾರಗಳಲ್ಲಿ ಲಿಖಿತ ಹೇಳಿಕೆ ಸಲ್ಲಿಸಲು ಸಹ ರಾಮಮೂರ್ತಿ ಅವರಿಗೆ ಕೋರ್ಟ್ ಅವಕಾಶ ನೀಡಿ ಆದೇಶಿಸಿದೆ.
ಇದನ್ನೂ ನೋಡಿ: ನಾವು ನೀರು ಬಿಡ್ತಿವಿ, ಊರಿನ ಕಸ ತೆಗಿತೀವಿ ಆದ್ರೆ ನಮಗೆ ಪಿಂಚಣಿ ಇಲ್ಲ, ಕನಿಷ್ಠ ಕೂಲಿ ಇಲ್ಲ – ಎಂ.ಬಿ. ನಾಡಗೌಡ