ಚಾಲನಾ ಪರವಾನಗಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಚಾಲನಾ ಪರವಾನಗಿ (Driving Licence-DL) ಕುರಿತು​ ಬಹು ಮಹತ್ವದ ತೀರ್ಪೊಂದನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದ್ದೂ, ವಾಹನ ಮಾಲೀಕರು ಇದನ್ನು ಪಾಲಿಸುವುದು ಕಡ್ಡಾಯವಾಗಿದೆ. ಆ ತೀರ್ಪು ಏನೆಂದರೆ, ಚಾಲನಾ ಪರವಾನಗಿ ಅವಧಿ ಮುಗಿದ ಮರುದಿನವೇ ಅದನ್ನು ನವೀಕರಣ ಮಾಡಬೇಕು.

ಈ ಮೊದಲು ಇದ್ದ 30 ದಿನಗಳ ನವೀಕರಣ ಅವಕಾಶ ಇನ್ನು ಇರುವುದಿಲ್ಲ. ಲೈಸೆನ್ಸ್​ ಅವಧಿ ಮುಗಿದ ಮರುದಿನವೇ ವಾಹನವನ್ನು ಚಾಲನೆ ಮಾಡುವ ಕಾನೂನಾತ್ಮಕ ಅವಕಾಶವನ್ನು ವಾಹನ ಚಾಲಕರು ಕಳೆದುಕೊಳ್ಳಲಿದ್ದಾರೆ. ನಿನ್ನೆಯಷ್ಟೇ ಡೇಟ್​ ಎಕ್ಸ್​ಪೈರ್​ ಆಗಿದೆ. ಇವತ್ತೊಂದು ದಿನ ಬಿಟ್ಟುಬಿಡಿ ಎನ್ನುವ ಹಾಗಿಲ್ಲ. ಪರವಾನಗಿ ಮುಗಿದ ತಕ್ಷಣವೇ ಅದನ್ನು ರಿನ್ಯೂ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಮರುದಿನದಿಂದಲೇ ಅಮಾನ್ಯ

ಮೋಟಾರ್ ವಾಹನ ಕಾಯ್ದೆಯಡಿ ಚಾಲನಾ ಪರವಾನಗಿ ಅವಧಿ ಮುಗಿದ ತಕ್ಷಣ ಅದನ್ನು ನವೀಕರಿಸದಿದ್ದರೆ ಅದು ಮಾನ್ಯವಾಗಿರುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬುಲ್ಡೋಜರ್ ಬೇಟೆಗಾರರು | ಎಎ ರಹೀಮ್

ಈ ಮೊದಲು ಇದ್ದ ನವೀಕರಣೆ 30 ದಿನಗಳವರೆಗೆ ವಾಹನ ಚಾಲನೆ ಅವಕಾಶ ಇನ್ನು ಇರುವುದಿಲ್ಲ. 2019ರ ತಿದ್ದುಪಡಿಯ ನಂತರ ಈ ನಿಯಮ ಬದಲಾಗಿದೆ. ಆದ್ದರಿಂದ ತಕ್ಷಣವೇ ಅದನ್ನು ರಿನೀವಲ್​ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕೋರ್ಟ್​ ಹೇಳಿದೆ.

ಕಾನೂನುಬದ್ಧವಾಗಿ ಅನರ್ಹರು

ಡಿಎಲ್​ ಅನ್ನು ರಿನೀವಲ್​ ಮಾಡಿಸದೇ ಹೋದರೆ, ಅದು ಈ ಮೊದಲಿನಂತೆ ಸ್ವಯಂಚಾಲಿತವಾಗಿ ವಿಸ್ತರಿಸಲು ಸಾಧ್ಯವಿಲ್ಲ. ಪರವಾನಗಿ ಅವಧಿ ಮುಗಿದ ಮರುದಿನದಿಂದಲೇ ಪರವಾನಗಿ ಹೊಂದಿರುವವರು ವಾಹನ ಚಲಾಯಿಸಲು ಕಾನೂನುಬದ್ಧವಾಗಿ ಅನರ್ಹರು ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ಪ್ರಸ್ತುತ ಕಾನೂನು ಸ್ಥಿತಿಯನ್ನು ವಿವರಿಸಿರುವ ಕೋರ್ಟ್‌, ತಿದ್ದುಪಡಿ ಮಾಡಿದ ಕಾನೂನು ಪರವಾನಗಿ ಅವಧಿ ಮುಗಿದ ನಂತರ ಯಾವುದೇ ಹೆಚ್ಚುವರಿ ಅವಧಿಯನ್ನು ಒದಗಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ವಾಹನಾ ಚಾಲನಾ ಪರವಾನಗಿಯ ಸೆಕ್ಷನ್​ 15 (1) ಅಡಿಯಲ್ಲಿ, ಒಬ್ಬ ವ್ಯಕ್ತಿಗೆ ತನ್ನ ಅಸ್ತಿತ್ವದಲ್ಲಿರುವ ಪರವಾನಗಿಯನ್ನು ನವೀಕರಿಸಲು ಅವಕಾಶ ನೀಡುತ್ತದೆ. ಇದು ಪರವಾನಗಿ ಅವಧಿ ಮುಗಿಯುವ ದಿನಾಂಕಕ್ಕೆ ಒಂದು ವರ್ಷ ಮೊದಲು ಪ್ರಾರಂಭವಾಗುತ್ತದೆ. ಅವಧಿ ಮುಗಿದ ನಂತರ ಒಂದು ವರ್ಷದವರೆಗೆ ಇದು ಮುಂದುವರಿಯುತ್ತದೆ. ಒಮ್ಮೆ ಪರವಾನಗಿಯನ್ನು ನವೀಕರಿಸಿದ ನಂತರ ನವೀಕರಣವು ಹಿಂದಿನ ದಿನಾಂಕದಿಂದ ಕಾರ್ಯನಿರ್ವಹಿಸುತ್ತದೆ. ಪರವಾನಗಿಯು ಆಗ ಮಾನ್ಯವಾಗಿರುತ್ತದೆ ಎಂದು ಕೋರ್ಟ್​ ತಿಳಿಸಿದೆ.

ಇದನ್ನೂ ನೋಡಿ: ಕುವೆಂಪು ಜನ್ಮ ದಿನ | “ಬನ್ನಿ ಬನ್ನಿ ಲೋಕಗುರುಗಳೆಲ್ಲ ಬನ್ನಿ” ಹಾಡು : ಎಚ್.ವಿ. ನಟರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *