ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ, ನವೆಂಬರ್ 5ರಂದು ಇಲ್ಲಿನ ಸುವರ್ಣ ವಿಧಾನಸೌಧ ಎದುರು ರಾಷ್ಟ್ರೀಯ ಹೆದ್ದಾರಿ ತಡೆದ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸೌಧದ ಪ್ರವೇಶ ದ್ವಾರದ ಎದುರು ಸಮಾವೇಶಗೊಂಡ ಕಾರ್ಯಕರ್ತರು ಹೆದ್ದಾರಿ ಮಧ್ಯೆಯೇ ಪ್ರತಿಭಟನೆ ಆರಂಭಿಸಿದರು. ಟೈಯರ್ ಗೆ ಬೆಂಕಿ ಹಚ್ಚಿ ಎರಡೂ ಬದಿ ಸಂಚಾರ ತಡೆದರು.
ಇದನ್ನೂ ಓದಿ: ಪ್ರತಿ ಟನ್ ಕಬ್ಬಿಗೆ ₹3500 ಘೋಷಿಸಿ: ರಸ್ತೆಯಲ್ಲೇ ಮಲಗಿ ರೈತರು ಪ್ರತಿಭಟನೆ
ಪೊಲೀಸರು ಮನವೊಲಿಸಿದರೂ ಕಾರ್ಯಕರ್ತರು ಪಟ್ಟು ಸಡಿಲಿಸಲಿಲ್ಲ. ಹಾಗಾಗಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಇದನ್ನೂ ನೋಡಿ: ಜನಸ್ನೇಹಿ ಸಂತೆ – ರಾಗಿಕಣ ಸಂತೆ | ಪ್ರತಿ ಭಾನುವಾರ | ಉಚಿತ ಪ್ರವೇಶ
